#Me Too ಬಗ್ಗೆ ಶಿವಣ್ಣ ಹೇಳಿದ್ದೇನು ಗೊತ್ತೇ?.. ಇಲ್ಲಿ ಓದಿ

ಈಗಾಗಲೇ ಮೀಟು ಹಾವಳಿ ಕಾಡ್ಗಿಚ್ಚಿನಂತೆ ಹಬ್ಬಿರುವುದು ಎಲ್ಲರಿಗೂ ತಿಳಿದಿದೆ. ಹಲವಾರು ತಾರೆಯರ ಮಾನ ಹರಾಜು ಈಗ ಬೀದಿಗೆ ಬಂದಂತಾಗಿದೆ. ಈ ವಿಚಾರವಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಾತನಾಡುತ್ತಾ (whom to believe,What to believe, Why to believe, how to believe.) ನಾವು ಯಾರನ್ನ , ಹೇಗೆ, ಏಕೆ, ನಂಬಬೇಕು ಎಂಬುದೇ ತಿಳಿಯುತ್ತಿಲ್ಲ. ನಾನು ಯಾರ ಪರ ಹಾಗೂ ವಿರೋಧ ಹೇಳಲು ಇಷ್ಟಪಡುವುದಿಲ್ಲ.

ನಾವು ತೆರೆ ಮೇಲೆ ಎಲ್ಲವನ್ನೂ ನೋಡುತ್ತೇವೆ. ಹಾಗೊಂದು ವೇಳೆ ಚಿತ್ರದಲ್ಲಿ ಅಭಿನಯಿಸುವಾಗ ನಮಗೆ ಇಷ್ಟವಿಲ್ಲದ ದೃಶ್ಯ ಮಾಡಬೇಕಾದ ಪರಿಸ್ಥಿತಿ ಬಂದಾಗ ಅದೇ ಸ್ಥಳದಲ್ಲಿ ಪ್ರತಿಕ್ರಿಯಿಸಬೇಕು ಆಗ ನೂರು ಜನರಲ್ಲಿ ಹತ್ತು ಮಂದಿಯಾದರೂ ಒಳ್ಳೆಯವರು ಇರುತ್ತಾರೆ ಆಗ ಅವರು ಸಹಾಯಕ್ಕೆ ಬರುತ್ತಾರೆ. ಒಟ್ನಲ್ಲಿ ಅವರ ಅವರ ಅನಿಸಿಕೆಗಳನ್ನು ಹೇಳಿಕೊಂಡಿದ್ದಾರೆ. ಚಿತ್ರೋದ್ಯಮದ ಈ ಬೆಳವಣಿಗೆ ಬೇಸರ ತಂದಿದೆ.

ಅಂಬರೀಶ್ ಅವರು ನಾಳೆ ಬರುತ್ತಿದ್ದಾರೆ ಮುಂದೆ ಏನು ಎಂಬುದನ್ನು ನೋಡಬೇಕು ಎಂದು ಹೇಳುತ್ತಾ “ದಿ ವಿಲನ್” ಚಿತ್ರ ಸಕ್ಸಸ್ ಆಗಿ ಪ್ರದರ್ಶನ ಕಾಣುತ್ತಿರುವ ಬಗ್ಗೆ ಹರ್ಷವನ್ನು ವ್ಯಕ್ತಪಡಿಸಿ ದರು.

Facebook Auto Publish Powered By : XYZScripts.com