ಮುಂದಿನ ಚುನಾವಣೆಯಲ್ಲಿ ಹುಚ್ಚ ವೆಂಕಟ್ ಸೇನೆಯಿಂದ ಸ್ಪರ್ಧೆ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹುಚ್ಚ ವೆಂಕಟ್ ಸೇನೆಯಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದು ಹುಚ್ಚ ವೆಂಕಟ್ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹುಚ್ಚ ವೆಂಕಟ್ ಸೇನೆಗೆ ವಿದೇಶಗಳಲ್ಲೂ ಅಭಿಮಾನಿಗಳಿದ್ದಾರೆ. ಹುಚ್ಚ ವೆಂಕಟ್ ಸೇನೆಯಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದರು. ಪೊರ್ಕಿ ಹುಚ್ಚ ವೆಂಕಟ್ ಚಿತ್ರ ಏ.28 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

ಚಿತ್ರವನ್ನು ರಾಜ್ಯದ 50ಕ್ಕೂ ಹೆಚ್ಚಿನ ಸಿನಿಮಾ ಮಂದಿರದಲ್ಲಿ ಬಿಡುಗಡೆ ಮಾಡುದಾಗಿ ಹೇಳಿದರು. ಅಭಿನಯ, ನಿರ್ದೇಶನದ ಜತೆಗೆ , ನಿರ್ಮಾಣ ಮಾಡಿರುವ ಚಿತ್ರಕ್ಕೆ ತಾವೇ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಿನಿಮಾ ಹಾಡುಗಳನ್ನು ರಚಿಸಿರುವುದಾಗಿ ಹೇಳಿದರು.

ರಾಜಕೀಯ, ಪ್ರೀತಿ ಹಾಗೂ ಭಾವನಾತ್ಮಕತೆಯನ್ನು ಒಳಗೊಂಡಿರುವ ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕು ಎಂದು ಹುಚ್ಚ ವೆಂಕೆಟ್ ಮನವಿ ಮಾಡಿದರು.

Facebook Auto Publish Powered By : XYZScripts.com