8 MM vs ತಾಯಿಗೆ ತಕ್ಕ ಮಗ, ಯಾವ ಸಿನಿಮಾ ಗೆಲ್ಲುತ್ತೆ?.. ಇಲ್ಲಿ ಓದಿ

ನಟ ಜಗ್ಗೇಶ್ ಅವರ ವೃತ್ತಿ ಜೀವನದಲ್ಲಿಯೇ ಇದು ವಿಭಿನ್ನ ಪಾತ್ರ ಅಂತ ಹೇಳಲಾಗಿರುವ ಬಹು ನಿರೀಕ್ಷಿತ ‘8MM’ ಚಿತ್ರ ರಿಲೀಸ್ ಡೇಟ್ ಫಿಕ್ಸ್ ಆಗಿದ್ದು, ಸಿನಿಮಾ ನವೆಂಬರ್ 16 ರಂದು ಬಿಡುಗಡೆಯಾಗಲಿದೆ.

ಒಂದು ಕ್ರೈಂ ಸುತ್ತ ಹೆಣೆದಿರುವ ‘8MM’ ಚಿತ್ರಕ್ಕೆ ಹರಿಕೃಷ್ಣ ಎಂಬುವರು ಆಕ್ಷನ್ ಕಟ್ ಹೇಳಿದ್ದಾರೆ. ಹಲವು ವರ್ಷಗಳ ನಂತರ ಜಗ್ಗೇಶ್ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ನಿರ್ಮಾಪಕ ನಟ ರಾಕ್ ಲೈನ್ ವೆಂಕಟೇಶ್ ಕೂಡ ನಟಿಸಿದ್ದಾರೆ. ವಸಿಷ್ಟ ಸಿಂಹ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಜೂಡಾ ಸ್ಯಾಂಡಿ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ.

ಇನ್ನೂ. ಅದೇ ದಿನ ಅಜಯ್ ರಾವ್ ನಟನೆಯ ತಾಯಿಗೆ ತಕ್ಕ ಮಗ ಸಿನಿಮಾ ಕೂಡ ಬಿಡುಗಡೆಯಾಗಲಿದೆ. ಹೌದು, ಬಹುನಿರೀಕ್ಷೆಯ ಶಶಾಂಕ್ ನಿರ್ದೇಶನದ ತಾಯಿಗೆ ತಕ್ಕ ಮಗ ಸಿನಿಮಾ ಕೂಡ ನವೆಂಬರ್ 16 ರಂದು ಬಿಡುಗಡೆಯಾಗಲಿದೆ.

ಈ ಎರಡು ಚಿತ್ರಗಳ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದ್ದು ಯಾವ ಚಿತ್ರ ಗೆಲ್ಲಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿದೆ

Facebook Auto Publish Powered By : XYZScripts.com