10ಕ್ಕೂ ಹೆಚ್ಚು ಹುಡುಗಿಯರ ಜತೆ ಡೇಟ್ ಮಾಡಿರುವ ಶಶಿ

ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಜನ್ 6ರ ಮೊದಲ ಕ್ಯಾಪ್ಟನ್ ಆಗಿ ರವಿ ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್ ಸ್ಪರ್ಧೆಯಲ್ಲಿದ್ದ ಆಂಡಿ ಹಾಗೂ ಸ್ನೇಹಾ ನಿರಾಸೆ ಅನುಭವಿಸಿದರು. ಬಿಗ್ ಬಾಸ್ ವಿಶೇಷ ಟಾಸ್ಕ್ ವೊಂದನ್ನು ನೀಡಿದರು. ಅದರಲ್ಲಿ ಸದಸ್ಯರನ್ನು ಎರಡು ತಂಡ ಮಾಡಿ ಆಡಿಸಲಾಯಿತು. ಜಾಡಿಯೊಂದರಲ್ಲಿ ಎರಡೂ ತಂಡದ ಸದಸ್ಯರು ತಮ್ಮ ಬಗ್ಗೆ ಚೀಟಿಯಲ್ಲಿ ತಮ್ಮ ಕುರಿತ ಮಾಹಿತಿ ಬರೆದು ಹಾಕಿದ್ದರು. ಅದನ್ನು ಯಾರು ಹೇಳಿದ್ದು ಎಂದು ಊಹಿಸುವ ಟಾಸ್ಕ್ ಇದಾಗಿತ್ತು. ಇದರಲ್ಲಿ ಕೆಲವರ ಪ್ರೇಮ ಕಥೆಗಳು ಸೇರಿ ಸೀಕ್ರೇಟ್ ವಿಷಯಗಳು ಕೂಡ ರಿವೀಲ್ ಆಯ್ತು.

ಟಾಸ್ಕ್ನಲ್ಲಿ ಬ್ಯಾಂಕ್ ದರೋಡೆ ಮಾಡುವುದಾದರೆ ತಮ್ಮ ಹೆಂಡತಿಯೇ ಫಸ್ಟ್ ಅಂತ ರವಿ ಬರೆದಿದ್ದರು. ನಯನಾ ತನ್ನ ತಾಯಿಯನ್ನು ಸೂಪರ್ ಹೀರೋ ಎಂದು ಮಾತಾಡುವಾಗ ಕಣ್ಣೀರು ಹಾಕಿದರು. ಹಾಗೆಯೇ ಇಲ್ಲಿಯ ತನಕ ಸುಮಾರು 10ಕ್ಕೂ ಹೆಚ್ಚು ಹುಡುಗಿಯರ ಜತೆ ಡೇಟ್ ಮಾಡಿರುವುದಾಗಿ ಶಶಿ ಹೇಳಿದರು. ಮನೆಗೆ ಬೆಂಕಿ ಬಿದ್ದಾಗ ಮೊದಲು ಕಾಪಾಡುವುದು ಅಜ್ಜಿಯನ್ನು ಎಂದು ಸೋನು ಹೇಳಿ ಭಾವುಕರಾದರು.

Facebook Auto Publish Powered By : XYZScripts.com