ಹೊಸ ವರ್ಷಕ್ಕೆ ಸನ್ನಿ ಲಿಯೋನ್ ಬರಲಿಲ್ಲ ಯಾಕೆ ಗೊತ್ತಾ..?

ಹೊಸ ವರ್ಷಕ್ಕೆ ಸನ್ನಿ ಲಿಯೋನ್ ಕರೆಸಲು ನಿರ್ಧಾರ ಮಾಡಿದ್ದ ಟೈಮ್ಸ್ ಕ್ರಿಯೇಷನ್ ಸಾಕಷ್ಟು ಖರ್ಚು ಕೂಡ ಮಾಡಿತ್ತು. ಮುಂಬೈ ತನಕ ಹೋಗಿ ಸನ್ನಿಯನ್ನು ಕಾರ್ಯಕ್ರಮಕ್ಕೆ ಒಪ್ಪಿಸಿದ್ರು. ಆದ್ರೆ ಆ ಬಳಿಕ ಆಗಿದೆಲ್ಲಾ ಇತಿಹಾಸ. ಕರವೇ ಯುವ ಸೇನೆಯವರು ವಿರೋಧ ಮಾಡಿದ್ರು ಅನ್ನೋ ಕಾರಣಕ್ಕೆ ಇಡೀ ರಾಜ್ಯ ಸರ್ಕಾರವೇ ಮುಂದೆ ನಿಂತು ಕಾರ್ಯಕ್ರಮಕ್ಕೆ ಅನುಮತಿ ಕೊಡಲು ಸಾಧ್ಯವಿಲ್ಲ ಅಂತಾ ಹೇಳಿಕೆ ಕೊಟ್ಟು ಬಿಡ್ತು.. ಗೃಹ ಸಚಿವರೇ ಕಾರ್ಯಕ್ರಮಕ್ಕೆ ಅನುಮತಿ ಕೊಡುವುದಿಲ್ಲ ಅಂತಾ ಘೋಷಿಸಿದ ಬಳಿಕ ಪೊಲೀಸರು ಕೂಡ ಅನುಮತಿ ಕೊಡಲಿಲ್ಲ. ಬಳಿಕ ಆಯೋಜಕರು ಹೈಕೋರ್ಟ್ ಹೆ ಹೋದರೂ ಕೂಡ ಸರ್ಕಾರ ಅನುಮತಿ ಕೊಡಲಿಲ್ಲ. ಇಲ್ಲಸಲ್ಲದ ಕಾರಣ ಹುಡುಕಿ ಅನುಮತಿ ನೀಡಲಿ ನಿರಾಕರಿಸಿತ್ತು.

ಜನರೆಲ್ಲ ಸರ್ಕಾರ ಹಾಗೂ ಪೊಲೀಸರು ಅನುಮತಿ ನಿರಾಕರಿಸಿದ್ರಿಂದ ಕಾರ್ಯಕ್ರಮ ರದ್ದಾಯ್ತು ಅಂತ ತಿಳ್ಕೊಂಡಿದ್ರು. ಆದ್ರೆ ಕಾರ್ಯಕ್ರಮ ರದ್ದಾಗಿರೋದೇ ಬೇರೆ ವಿಚಾರಕ್ಕೆ ಅನ್ನೋದು ಈಗ ಬಹಿರಂಗ ಆಗಿದೆ. ಕನ್ನಡ ಪರ ಸಂಘಟನೆಯ ಸದಸ್ಯರೊಬ್ಬರು ಕಾರ್ಯಕ್ರಮ ನಡೆಯಲು ಬೇಕಾದ ವ್ಯವಸ್ಥೆ ಮಾಡ್ತೀವಿ ಅಂತ ಆಯೋಜಕರ ಬಳಿ ಹಣಕ್ಕಾಗಿ ಡೀಲ್ ಮಾಡಿದ್ರಂತೆ. ಅವರು ಕೇಳಿದಷ್ಟು ಹಣವನ್ನು ಆಯೋಜಕರು ಕೊಡಲು ನಿರಾಕರಿಸಿದ್ರಿಂದ ಕಾರ್ಯಕ್ರಮ ನಡೆಯದಂತೆ ನೋಡಿಕೊಳ್ಳಲಾಗಿದೆ ಅನ್ನೋ ಅನುಮಾನ ಮೂಡಿದೆ. 5 ಸಾವಿರವೋ 10 ಸಾವಿರವೋ ಆಗಿದ್ರೆ ಆಯೋಜಕರು ಕೂಡ ಕೊಟ್ಟು ಕೈ ತೊಳೆದು ಕೊಳ್ತಿದ್ರೇನೋ ಆದ್ರೆ ಕನ್ನಡಪರ ಸಂಘಟನೆಯವರು ಕೇಳಿದ್ದು ಬರೋಬ್ಬರಿ 30 ಲಕ್ಷ ರೂಪಾಯಿ ಎನ್ನಲಾಗಿದೆ.

ಕರವೇ ನಾರಾಯಣ ಗೌಡ ಬಣದ ಸದಸ್ಯರೊಬ್ಬರ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿ ಬರದಂತೆ ನೋಡಿಕೊಳ್ತೇವೆ. 30 ಲಕ್ಷ ರೂಪಾಯಿ ಕೊಡಿ ಅಂತ ಕೇಳಿರೋದು ರಾಷ್ಟೀಯ ಸುದ್ದಿ ವಾಹಿನಿ ಇಂಡಿಯಾ ಟುಡೇಯಲ್ಲಿ ಪ್ರಸಾರವಾಗಿದೆ. ಆಯೋಜಕರ ಸೋಗಿನಲ್ಲಿ ಕನ್ನಡಪರ ಹೋರಾಟಗಾರರನ್ನು ಖೆಡ್ಡಕ್ಕೆ ಬೀಳಿಸಿರುವ ರಾಷ್ಟ್ರೀಯ ಸುದ್ದಿ ವಾಹಿನಿ ಇಂಡಿಯಾ ಟುಡೇ, ಕನ್ನಡಪರ ಸಂಘಟನೆ ಸದಸ್ಯ 30 ಲಕ್ಷ ರೂಪಾಯಿ ಹಣವನ್ನು ಕೇಳಿರುವ ದೃಶ್ಯಗಳನ್ನು ಪ್ರಸಾರ ಮಾಡಿದೆ. ಈ ಮೂಲಕ ಕರ್ನಾಟಕ ಹಾಗೂ ಕನ್ನಡ ಪರ ಎಂದು ಹೇಳಿಕೊಳ್ಳುವ ಕರವೇ ಸಂಘಟನೆಯ ಮಾನವನ್ನು ಹರಾಜು ಹಾಕಿದೆ.

ಜ್ಯೋತಿ ಗೌಡ, ನಾಗಮಂಗಲ

Facebook Auto Publish Powered By : XYZScripts.com