ಹೆಬ್ಬುಲಿ ಹೊಸ ಪೋಸ್ಟರ್ ರಿಲೀಸ್, ಆರ್ಮಿ ಗೆಟಪಲ್ಲಿ ಮಿಂಚಿದ ಸುದೀಪ್

ಸೆಟ್ಟೇರಿದಾಗಿನಿಂದ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸೌಂಡ್ ಮಾಡ್ತಿರೋ ಚಿತ್ರ ’ಹೆಬ್ಬುಲಿ’. ಹಲವು ವಿಶೇಷಗಳ ಈ ಚಿತ್ರ ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಇದೀಗ ಚಿತ್ರದ ಹೊಸ ಪೋಸ್ಟರ್‌ಗಳು ರಿಲೀಸ್ ಆಗಿದ್ದು, ಸುದೀಪ್ ವಿಭಿನ್ನ ಗೆಟಪ್‌ನಲ್ಲಿ ಗಮನಸೆಳೀತಿದ್ದಾರೆ.
ಅಭಿನಯ ಚಕ್ರವರ್ತಿ ಸುದೀಪ್ ಆರ್ಮಿ ಗೆಟಪ್‍ನಲ್ಲಿರೋ ಪೋಸ್ಟರ್ ಪ್ರಮುಖ ಆಕರ್ಷಣೆ. ಬೆನ್ನಿಗೆ ಗನ್ನು, ಯುದ್ಧಭೂಮಿ ಸನ್ನಿವೇಶ ನೋಡ್ತಿದ್ರೆ..ಇದು ವಾರ್ ಬೇಸ್ಡ್ ಮೂವೀನಾ ಅನ್ನೋ ಅನುಮಾನ ಬರದ ಇರದು. ಈ ಚಿತ್ರದ ಮೂಲಕ ಮತ್ತೊಮ್ಮೆ ಸುದೀಪ್ ಜೊತೆ ರವಿಚಂದ್ರನ್ ತೆರೆಹಂಚಿಕೊಳ್ಳುತ್ತಿದ್ದಾರೆ. ನಲ್ಲ ಮಲ್ಲರ ಕಾಂಬಿನೇಷನಲ್ಲಿ ಬರುತ್ತಿರುವ ಎರಡನೇ ಚಿತ್ರ ಇದು. ಈ ಹಿಂದೆ ಮಾಣಿಕ್ಯ ಚಿತ್ರದಲ್ಲಿ ಈ ಜೋಡಿ ಜನಮನಗೆದ್ದಿರೋದು ಗೊತ್ತಿರುವುದೆ.
ಎಸ್ ಕೃಷ್ಣ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ಮೂಲಕ ಅಮಲಾ ಪೌಲ್ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿರುವುದು ಇನ್ನೊಂದು ವಿಶೇಷ. ಭಾರಿ ಬಜೆಟ್‌ನ ಈ ಆಕ್ಷನ್ ಪ್ರಧಾನ ಚಿತ್ರದ ಪೋಸ್ಟರ್‌ಗಳೇ ಅದರ ಅದ್ದೂರಿತನವನ್ನ ಹೇಳ್ತಿವೆ. ಅರ್ಜುನ್ ಜನ್ಯ ಸಂಗೀತ, ಎ ಕರುಣಾಕರಣ್ ಛಾಯಾಗ್ರಹಣ ಇದೆ. ಈ ಚಿತ್ರದ ಮೂಲಕ ಸ್ಟೈಲಿಶ್ ಖಳನಟ ಅಂತ ಕರೆಸಿಕೊಂಡಿರುವ ಕಬೀರ್ ದುಹಾನ್ ಸಿಂಗ್ ಎಂಟ್ರಿಕೊಡ್ತಿದ್ದಾರೆ.
Source: Balkani News

Leave a Reply

Your email address will not be published.

Facebook Auto Publish Powered By : XYZScripts.com