‘ಹೆಬ್ಬುಲಿ’ ಆರ್ಭಟ ರಿಲೀಸ್‍ಗಿಂತಾ ಮುಂಚೇನೇ ಜೋರಾಗಿದೆ!

ಕಿಚ್ಚ ಸುದೀಪ್ ಯಾವ್ ಸಿನ್ಮಾ ಮಾಡಿದ್ರೂ ಒಂದ್ ಕುತೂಹಲ ಇದ್ದೇ ಇರತ್ತೆ. ಸಾಮಾನ್ಯವಾಗಿ ಅವ್ರು ಡಿಫರೆಂಟ್ ಅಲ್ದೇ ಇರೋ ಕಥೆಗ್ಳನ್ನ ಒಪ್ಕೊಳೋದೇ ಇಲ್ಲ. ಇದೀಗ ರಿಲೀಸ್ ರೇಸ್ ಅಲ್ಲಿರೋ ’ಹೆಬ್ಬುಲಿ’ ಕೂಡಾ ಸುದೀಪ್ ಹಂಗೆ ಕಣ್ಣಲ್ ಕಣ್ಣಿಟ್ಟು ಆಯ್ಕೆ ಮಾಡ್ಕಂಡ ಸಿನ್ಮಾ!
ಹೆಬ್ಬುಲಿ ಚಿತ್ರೀಕರಣ ಆರಂಭ್ವಾದ ದಿನ್ದಿಂದ್ಲೂ ಸಾಕಷ್ಟ್ ಸುದ್ದಿ ಮಾಡ್ತಾನೇ ಇದೆ. ಈ ಸಿನ್ಮಾದಲ್ಲಿ ಸುದೀಪ್ ಫಸ್ಟ್ ಟೈಂ ಆರ್ಮಿ ಕಮಾಂಡೋ ಪಾತ್ರ ಮಾಡಿರೋದ್ರಿಂದಾಗಿ ನಿರೀಕ್ಷೆ ಹತ್ ಪಟ್ಟು ಜಾಸ್ತಿಯಾಗಿದೆ. ಈ ಸಿನ್ಮಾ ಶುರ್ವಾದಾಗ ಸುದೀಪ್ ಅವ್ರ ಡಿಫ್ರೆಂಟ್ ಗೆಟಪ್ಪೇ ಹುಚ್ಚೆಬ್ಸಿತ್ತು. ಇದೀಗ ಅವ್ರ ಚಿತ್ರದ ಕಡೆಯಿಂದ ಮತ್ತಷ್ಟು ಹುಚ್ಚೆಬ್ಸೋವಂತ ಸುದ್ದೀನೂ ಹೊರ ಬಿದ್ದಿದೆ!
ಹೆಬ್ಬುಲಿಯ ಆಡಿಯೋ ಮತ್ತೆ ಸ್ಯಾಟಲೈಟ್ ಹಕ್ಕು ಭರ್ಜರಿ ಮೊತ್ತಕ್ಕ್ ಮಾರಾಟವಾಗಿದ್ಯಂತೆ. ಈ ಮೂಲ್ಕ ಹೆಬ್ಬುಲಿಯ ಆರ್ಭಟ ರಿಲೀಸ್‍ಗಿಂತಾ ಮುಂಚೇನೇ ಜೋರಾಗಿದೆ. ಈಗಿರೋ ವಾತಾವರ್ಣ ನೋಡಿದ್ರೆ ಈ ಹೆಬ್ಬುಲಿ ಬಾಕ್ಸಾಫೀಸ್ ಚಿಂದಿ ಮಾಡೋ ಎಲ್ಲ ಲಕ್ಷಣಗಳೂ ಇದಾವೆ!
Source: Balkani News

Leave a Reply

Your email address will not be published.

Facebook Auto Publish Powered By : XYZScripts.com