ಹೆಬ್ಬುಲಿ ಅಡ್ಡಾಗೆ ಘರ್ಜಿಸಲು ಬಂದ್ರು ಮತ್ತೊಬ್ಬ ಖಡಕ್ ವಿಲನ್

ಕಿಚ್ಚ ಸುದೀಪ್ ಅಭಿನಯದಲ್ಲಿ ಬರ್ತಿರೋ ಕಿಚ್ಚಿನಂತ ಸಿನಿಮಾ ಹೆಬ್ಬುಲಿ. ಈ ಸಿನಿಮಾ ಫಸ್ಟ್ ಲುಕ್ ಪೋಸ್ಟರ್ ಔಟ್ ಆದಾಗಿಂದ್ಲು ಸಿಕ್ಕಾ ಪಟ್ಟೆ ಸುದ್ದಿ ಮಾಡ್ತಿದೆ. ಈಗಾಗ್ಲೇ ರಿಲೀಸ್ ಆಗಿರೋ ಟ್ರೇಲರ್ ಗೆ ಸಿಕ್ಕಾ ಪಟ್ಟೆ ಪಾಸಿಟಿವ್ ಟಾಕ್ ಕೇಳಿಬರ್ತಿದ್ದು ಸಿನಿಮಾ ಗೆಲ್ಲೋದು ಫಿಕ್ಸ್ ಆಗಿದೆ.
ಇನ್ನು ಚಿತ್ರತಂಡ ಈಗಾಗ್ಲೇ ಆಲ್ಮೋಸ್ಟ್ ಚಿತ್ರೀಕರಣವನ್ನ ಕಂಪ್ಲೀಂಟ್ ಮಾಡಿದ್ದು ಇತ್ತೀಚಿಗೆ ತಾನೇ ಕಾಶ್ಮೀರಕ್ಕೆ ವಿಸಿಟ್ ಹಾಕಿ ಬಂದಿತ್ತು. ಇದೀಗ ಗೋವಾದಲ್ಲಿ ಚಿತ್ರೀಕರಣವನ್ನ ಮಾಡ್ತಿದೆ ಹೆಬ್ಬುಲಿ ಟೀಮ್. ಆದ್ರೆ ವಿಶೇಷ ಏನಪ್ಪಾ ಅಂದ್ರೆ ಗೋವಾದಲ್ಲಿ ಬೀಡು ಬಿಟ್ಟಿರೋ ಹೆಬ್ಬುಲಿ ಟೀಮ್ ಗೆ ಈಗ ಖಡಕ್ ವಿಲನ್ ಒಬ್ರು ಜಾಯಿನ್ ಆಗಿದ್ದಾರೆ.
ಅವ್ರು ಮತ್ತಿನ್ಯಾರು ಅಲ್ಲ ಭೋಜ್‍ಪುರಿ ನಟ ರವಿಕಿಶನ್, ಈಗಾಗ್ಲೇ ತೆಲುಗಿನಲ್ಲಿ ರೇಸುಗುರ್ರಂ , ಕಿಕ್ 2 ಹೀಗೆ ಸಾಕಷ್ಟು ಚಿತ್ರಗಳಲ್ಲಿ ಖಳನಟನಾಗಿ ಮಿಂಚಿ ಖ್ಯಾತಿಯನ್ನ ಪಡೆದಿರೋ ರವಿಕಿಶನ್ ಈಗ ಕನ್ನಡಕ್ಕೆ ಹೆಬ್ಬುಲಿ ಚಿತ್ರದ ಮೂಲಕ ಎಂಟ್ರಿ ಕೊಡ್ತಿದ್ದಾರೆ.
ಈಗಾಗ್ಲೇ ರವಿಕಿಶನ್ ಪಾರ್ಟ್ ಚಿತ್ರೀಕರಣ ಗೋವಾದಲ್ಲಿ ನಡಿತಿದ್ದು, ಖುದ್ದು ರವಿಕಿಶನ್ ಕನ್ನಡಕ್ಕೆ ಪದಾರ್ಪಣೆ ಮಾಡ್ತಿರೋ ಬಗ್ಗೆ ಖುಷಿಯನ್ನ ಟ್ವಿಟ್ಟರ್ ನಲ್ಲಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಹೈಲೆಟ್ ಅಂದ್ರೆ ಹೆಬ್ಬುಲಿಯಲ್ಲಿ ಈಗಾಗ್ಲೇ ರವಿಶಂಕರ್, ಸಂಪತ್ ರಾಜ್ ಹಾಗು ಕರಣ್ ದುಹಾನ್ ಸಿಂಗ್ ಖಳನಟರಾಗಿ ಕಾಣಿಸಿಕೊಳ್ತಿದ್ದಾರೆ.
Source: Balkani News

Leave a Reply

Your email address will not be published.

Facebook Auto Publish Powered By : XYZScripts.com