“ಹೆಬ್ಬುಲಿ”ಯ “ಉಸಿರೇ..” ಹಾಡು ನೃತ್ಯವನ್ನು ಉಸಿರು ಬಿಗಿ ಹಿಡಿದೇ ನೋಡಬೇಕು

“ರನ್ನ” ಒಂಥರಾ ಸಿನಿ ರಸಿಕರಿಗೆ ಖುಷಿ ನೀಡಿತು.. ಬರಬರುತ್ತಾ ಜನ ಮಾನಸಕ್ಕೆ ಹತ್ತಿರವಾಗುತ್ತಿರುವ ಕಿಚ್ಚ ಸುದೀಪ್ ಇದೀಗ ಹೆಬ್ಬುಲಿಯಾಗಿ ಬರುತ್ತಿದ್ದಾರೆ. “ಕೆಂಪೇಗೌಡ” ಚಿತ್ರದಲ್ಲಿಮನೋಜ್ಞ ಅಭಿನಯದ ಮೂಲಕ ಕನ್ನಡ ಸಿನಿ ಲೋಕದಲ್ಲಿ ಹವಾ ಸೃಷ್ಟಿಸಿದ ಸುದೀಪ್ ಇದೀಗ “ಹೆಬ್ಬುಲಿ” ಚಿತ್ರದಲ್ಲೂ ಉಸಿರು ಬಿಗಿಹಿಡಿದು ನಟಿಸಿ, ಹಾಡಿಗೊಂತರಾ ಹೆಜ್ಜೆ ಹಾಕಿರಂಜಿಸಲು ಸಜ್ಜಾಗಿದ್ದಾರೆ. ಅದುವೇ “ಉಸಿರೇ..” ಹಾಡು.
ಕಿಚ್ಚ ಸುದೀಪ್ ಅಭಿನಯದ ಹೊಚ್ಚ ಹೊಸ ಚಿತ್ರ ‘ಹೆಬ್ಬುಲಿ’ಯ ಹಾಡಿನ ಟೀಸರ್ ಬಿಡುಗಡೆಯಾಗಿದ್ದೇ ತಡ, ಒಂದಿಷ್ಟು ದಿನದಲ್ಲೇ ಭರ್ಜರಿ ಸುದ್ದಿ  ಹಬ್ಬಿಸಿದೆ.
“ಉಸಿರೇ ಉಸಿರೇ” ಹಾಡಿನ ಟೀಸರ್ ಕೇಳುಗರ ಕುತೂಹಲ ಕೆರಳಿಸುವಂತಿದೆ. ಖ್ಯಾತ ಕೊರಿಯೋಗ್ರಾಫರ್ ಹರ್ಷ ಈ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ. ಗುಡ್ಡಗಾಡಲ್ಲಿ ಸಾಗಿ, ಕಡಲತಡಿಯಲ್ಲಿ ಈಜಿ, ಗಾನಸುಧೆಗೆ ತಕ್ಕಂತೆ, ಕೈ ಬೀಸಿ, ಎದೆಯರಳಿಸಿ ಮನಮೋಹಕ ಫೋಸ್ ಕೊಟ್ಟಿರುವ ಸುದೀಪ್, ಈ “ಉಸಿರು…” ಹಾಡನ್ನು ಕೇಳುವವರೂ ಉಸಿರು ಬಿಗಿಹಿಡಿಯುವಂತೆ ಮಾಡಿದ್ದಾರೆ.
ಈ ಹಾಡಿಗೆ ಏರಿಯಲ್ ಶಾಟ್ಸ್ ಗಳನ್ನೇ ಹೆಚ್ಚಾಗಿ  ಬಳಸಲಾಗಿದೆ. ಈ ಹಾಡು ಸಖತ್ ರಿಚ್ ಆಗಿದೆ ಎಂಬ ಸ್ಲಾಘನೆ ಈಗಲೇ ಕೇಳಿಬಂದಿದೆ. ಈ ಚಿತ್ರದಲ್ಲಿ  ಸುದೀಪ್  ಬ್ಲಾಕ್ ಕಮಾಂಡೋಪಾತ್ರದಲ್ಲಿ ಮಿಂಚಲಿದ್ದರೆ, ಅಮಲಾ ಪೌಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮುಂಗಾರು ಮಳೆ ಕೃಷ್ಣ “ಹೆಬ್ಬುಲಿ” ಚಿತ್ರವನ್ನು ಅಚ್ಚುಕಟ್ಟಾಗಿ ಪೋಣಿಸಿ ಅದ್ಧೂರಿಯಾಗಿ ತೆರೆಗೆ ತರಲುಪ್ರಯತ್ನ ನಡೆಸುತ್ತಿದ್ದಾರೆ.
Courtesy: Balkani News

Facebook Auto Publish Powered By : XYZScripts.com