‘ಹೆಬ್ಬುಲಿ’ಗಿಂತ ಹೆಚ್ಚಿದ್ದ ಆತುರ : ಅದಕ್ಕಿಂತ ಹೆಚ್ಚಿದೆ ‘ಚಕ್ರವರ್ತಿ’ಯ ಅಬ್ಬರ

ಕನ್ನಡ ಚಿತ್ರರಂಗದಲ್ಲಿ ‘ಚಕ್ರವರ್ತಿ’ಯ ಕಾರುಬಾರು. ಶುಕ್ರವಾರ ತೆರೆಕಂಡ ದರ್ಶನ ಅಭಿನಯದ ‘ಚಕ್ರವರ್ತಿ’ ಸಿನಿ ರಸಿಕರಿಗೆ ರಸದೌತಣ ಉಣಬಡಿಸಿದ್ದಷ್ಟೇ ಅಲ್ಲ, ಸುಮಾರು 450 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸುದೀಪ್ ಅಭಿನಯದ ‘ಹೆಬ್ಬುಲಿ’ ಚಿತ್ರತಂಡದ ದಾಖಲೆಯನ್ನು ಮುರಿದಿದೆ.

ಈ ಶುಭ ಶುಕ್ರವಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಹಬ್ಬವಿದ್ದಂತೆ ಇತ್ತು. ರಿಲೀಸ್ಗೆ ಮುನ್ನವೇ ಹಲವಾರು ದಾಖಲೆ ಮಾಡಿದ್ದ ‘ಚಕ್ರವರ್ತಿ’ ಕರ್ನಾಟಕವಷ್ಟೇ ಅಲ್ಲ, ಹೊರರಾಜ್ಯಗಳ ಒಟ್ಟು 50 ಥಿಯೇಟರ್ಗಳಲ್ಲಿ ಬಿಡುಗಡೆಯಾಗಿದೆ.

ಸುದ್ದೆಪ್ ಅಭಿನಯದ ‘ಹೆಬ್ಬುಲಿ’ ಚಿತ್ರ ವೀಕ್ಷಿಸಲು ಅಭಿಮಾನಿಗಳು ಬೆಳ್ಳಂಬೆಳಿಗ್ಗೆ 5 ಗಂಟೆಗೆ ಚಿತ್ರಮಂದಿರಗಳಿಗೆ ತೆರಳಿ ಪೊಲೀಸರ ಲಾಠಿ ಏಟಿನ ರುಚಿ ಉಂಡಿದ್ದರು. ಇದೀಗ ದರ್ಶನ ನಟನೆಯ ‘ಚಕ್ರವರ್ತಿ’ ಗುರುವಾರ ಮಧ್ಯರಾತ್ರಿಯಿಂದಲೇ ಪ್ರದರ್ಶನ ಆರಂಭಿಸಿತು. ಶುಕ್ರವಾರ ಮಧ್ಯರಾತ್ರಿವರೆಗೂ ಅಂದರೆ 24 ಗಂಟೆಗಳ ಕಾಲ ಸರಣಿ ಪ್ರದರ್ಶನ ನೀಡಿ ಭಾರತೀಯ ಚಿತ್ರ ರಂಗದ ಇತೀಹಾಸದಲ್ಲೇ ಚರಿತ್ರೆ ಬರೆಯಿತು.

ರಾತ್ರಿ 12 ಗಂಟೆಗೆ ಬೆಂಗಳೂರಿನ ವೈಷ್ಣವಿ ಮತ್ತು ವೈಭವ್ ಥಿಯೇಟರ್ಗಳಲ್ಲಿ ‘ಚಕ್ರವರ್ತಿ’ ಎಂಟ್ರಿ ಕೊಟ್ಟಿದ್ದಾನೆ. ಅನಂತರ ಉಳಿದ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಆರಂಭವಾಯಿತು. ಶಿವಮೊಗ್ಗದಲ್ಲಿ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮೊದಲ ಪ್ರದರ್ಶನ ಆರಂಭವಾದರೆ, ತುಮಕೂರಿನಲ್ಲೂ ಅದೇ ಹೊತ್ತಿಗೆ ‘ಚಕ್ರವರ್ತಿ’ ತೆರೆಕಂಡಿತು.

Courtesy: Balkani News

Facebook Auto Publish Powered By : XYZScripts.com