ಹೆಣ್ಣು ಮಕ್ಕಳ ಮೇಲೆ ಬೇಕಂತಲೇ ಕೈ ಹಾಕುತ್ತಿದ್ದಾರೆಯೇ ಕಂಡಕ್ಟರ್ ಆನಂದ್?.. ಇಲ್ಲಿ ಓದಿ

ಬಿಗ್ ಬಾಸ್ ಮನೆಯಲ್ಲಿ ಹೊಸ ಟಾಸ್ಕ್ ಶುರುವಾಗಿದ್ದು ಎರಡನೇ ವಾರದ ಲಕ್ಸುರಿ ಬಜೆಟ್ ಟಾಸ್ಕ್ ‘ಬಾಗಿಲು ತೆಗೆಯೇ ಶೇಷಮ್ಮಾ’ ಸಖತ್ ಮಜಾ ಕೊಡುತ್ತಿದೆ. ನಾಡಿನಲ್ಲಿದ್ದವರನ್ನು ಬಿಗ್ ಬಾಸ್ ಕಾಡಿಗೆ ಕಳುಹಿಸಿದ್ದಾರೆ ಮತ್ತು ಕಾಡಿನಿಂದ ನಾಡಿಗೆ ಬಂದರೆ ಸೋಲು ಎಂಬ ತಂತ್ರವನ್ನು ಹಣೆದಿದ್ದಾರೆ. ಈ ನಿಯಮಕ್ಕೆ ಅನುಸಾರವಾಗಿ ನಾಯಕ ರವಿ ಒಳಗೊಂಡಂತೆ ಎಲ್ಲ ಸ್ಪರ್ಧಿಗಳು ಮನೆ ಹೊರಗೆ ಮಲಗಿದ್ದಾರೆ. ಡ್ರೆಸ್ ಬದಲಿಸಿದ ಕಾರಣಕ್ಕೆ ಕವಿತಾ ಗೌಡ, ನಿಯಮ್ ಉಲ್ಲಂಘಿಸಿದ್ದಕ್ಕೆ ಆಟದಿಂದ ಹೊರಬಿದ್ದಿದ್ದಾರೆ.

ಇದೆ ಸಂಧರ್ಭದಲ್ಲಿ ಟಾಸ್ಕ್ ಮಾಡುವಾಗ ಹೆಣ್ಣು ಮಕ್ಕಳ ಮೇಲೆ ಬೇಕೆಂತಲೇ ಕೈ ಹಾಕುತ್ತಿದ್ದಾನೆ ಎಂಬ ಆರೋಪ ಬಸ್ ಕಂಡಕ್ಟರ್ ಆನಂದ ಮಾಲಗತ್ತಿ ಮೇಲೆ ಕೇಳಿಬಂತು. ಈ ಬಗ್ಗೆ ರೀಮಾ ಗಂಭೀರಬಾಗಿ ಆರೋಪ ಮಾಡಿದರು. ಮತ್ತೊಂದೆಡೆ ಸಂಗೀತ ನಿರ್ದೇಶಕ ನವೀನ್ ಮತ್ತು ಸ್ನೇಹಾ ಸಖತ್ತಾಗೆ ಕಚ್ಚಾಡಿಕೊಂಡರು.

ಒಟ್ಟಿನಲ್ಲಿ ಬೆಡ್ ಮೇಲೆ ಆರಾಮಾಗಿ ನಿದ್ರಿಸುತ್ತಿದ್ದ ಬಿಗ್ ಬಾಸ್ ಸ್ಪರ್ಧಿಗಳು ಬಿಗ್ ಬಾಸ್ ಕೊಟ್ಟ ಬಿರಿಯಾನಿ ಆಮಿಷಕ್ಕೂ ಬಲಿಯಾಗದೇ ಮನೆ ಹೊರಗಡೆ ನಿದ್ರಿಸಿದ್ದರು. ಮುಂದೆ ಈ ಟಾಸ್ಕ್ ಹೇಗೆ ರಂಗು ಪಡೆದುಕೊಳ್ಳಲಿದೆಯೆಂದು ಕಾಡು ನೋಡಬೇಕಿದೆ.

Facebook Auto Publish Powered By : XYZScripts.com