ಹೆಚ್.ಡಿ.ಕೆ. ಕುರಿತ ಸಿನಿಮಾದಲ್ಲಿ ಅರ್ಜುನ್ ಸರ್ಜಾ

ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಮತ್ತೊಂದು ಬಿಗ್ ಪ್ರಾಜೆಕ್ಟ್ ಗೆ ಕೈ ಹಾಕಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಕುರಿತಾದ ಸಿನಿಮಾ ಮಾಡುತ್ತಿದ್ದು, ಇದರಲ್ಲಿ ಖ್ಯಾತ ನಟ, ನಿರ್ದೇಶಕ ಅರ್ಜುನ್ ಸರ್ಜಾ, ಕುಮಾರಸ್ವಾಮಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಿಗ್ ಬಜೆಟ್ ನಲ್ಲಿ ನಿರ್ಮಾಣವಾಗಲಿರುವ ಈ ಚಿತ್ರಕ್ಕೆ ‘ಭೂಮಿಪುತ್ರ’ ಎಂದು ಹೆಸರಿಡಲಾಗಿದೆ. ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯನ್ನು ಮಾತ್ರ ಈ ಚಿತ್ರ ಒಳಗೊಂಡಿದ್ದು, ಸುಮಾರು 120 ಪಾತ್ರಗಳು ಚಿತ್ರದಲ್ಲಿರಲ್ಲಿವೆ.

ಕಳೆದ 6 ತಿಂಗಳಿಂದ ಎಸ್. ನಾರಾಯಣ್ ಪೂರ್ವ ತಯಾರಿ ಮಾಡಿಕೊಂಡಿದ್ದಾರೆ. ಮೇ 8 ರಂದು ಚಿತ್ರ ಆರಂಭವಾಗಲಿದೆ. ಅದಾಗಿ ಕೆಲವು ದಿನಗಳ ಬಳಿಕ ಚಿತ್ರೀಕರಣ ಪ್ರಾರಂಭವಾಗಲಿದ್ದು, ಇದೇ ವರ್ಷ ತೆರೆಗೆ ತರುವ ಯೋಜನೆಯಲ್ಲಿದ್ದಾರೆ ನಾರಾಯಣ್.

ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಕೈಗೊಂಡ ಕಲ್ಯಾಣ ಕಾರ್ಯಕ್ರಮ, ರಾಜಕೀಯ ಹೀಗೆ ಅವರ 20 ತಿಂಗಳ ಅಧಿಕಾರವಧಿಯನ್ನು ಮಾತ್ರ ‘ಭೂಮಿಪುತ್ರ’ದಲ್ಲಿ ಕಾಣಬಹುದಾಗಿದೆ.

Courtesy: Kannada Duniya

Facebook Auto Publish Powered By : XYZScripts.com