ಹೆಚ್ಚು ಚಿತ್ರಗಳಲ್ಲಿ ನಟಿಸಿ‌ ಎಂದು ನಟ ಜಗ್ಗೇಶ್ ಗೆ ಹೇಳಿದ್ದ ಅಭಿಮಾನಿಗೆ ಜಗ್ಗೇಶ್ ಕೊಟ್ಟ ಉತ್ತರವೇನು ಗೊತ್ತಾ..?

ಒಂದು ಕಾಲದಲ್ಲಿ ಕಾಮಿಡಿ ಅಂದ್ರೆ ಜಗ್ಗೇಶ್ಜಗ್ಗೇಶ್ ಅಂದ್ರೆ ಕಾಮಿಡಿ ಅನ್ನೋ ಟೈಮ್ ಇತ್ತುಅಷ್ಟರ‌‌ ಮಟ್ಟಿಗೆ ಗಾಂಧಿನಗರದಲ್ಲಿ ಖ್ಯಾತಿಗಳಿಸಿದ್ದರು ಜಡೆಮಾಯಸಂದ್ರದ ಜಗ್ಗೇಶಣ್ಣಇತ್ತೀಚಿನ ವರ್ಷಗಳಲ್ಲಿ ಜಗ್ಗೇಶ್ ಅಭಿನಯದ ಚಿತ್ರಗಳು ಕ್ಷೀಣಿಸುತ್ತಿದೆ. ಹೌದು, ಜಗ್ಗೇಶ್ ಅಭಿನಯದ ಕಾಮಿಡಿ ಚಿತ್ರಗಳು ಕಡಿಮೆಯಾಗಿದೆ. 8ಎಂಎಂ ಚಿತ್ರ ಹೊರತುಪಡಿಸಿ ಬೇರ್ಯಾವ ಚಿತ್ರಗಳಲ್ಲಿಯೂ ನಟ ಜಗ್ಗೇಶ್ ಕಾಣಿಸಿಕೊಂಡಿಲ್ಲ. ಇದ್ದರಿಂದ ಈ‌ ನವರಸ ನಾಯಕನ ಅಪಾರ ಅಭಿಮಾನಿಗಳು ಬೇಸರಗೊಂಡಿದ್ದು ಉಂಟು. ಇದಲ್ಲದೆ ಇತ್ತೀಚಿನ ದಿನಗಳಲ್ಲಿ ಬೆಳ್ಳಿ ಪರದೆಯಿಂದ ಕಿರುತೆರೆಯತ್ತ ಮುಖ ಮಾಡಿರುವ ಜಗ್ಗೇಶ್ ಅವರು ಹೆಚ್ಚಾಗಿ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದ್ದರಿಂದ ಜಗ್ಗೇಶ್ ಅಭಿಮಾನಿಗಳಿಗೆ ಮತ್ತಷ್ಟು ಬೇಸರ ತಂದಿದೆ. ಇವೆಲ್ಲವನ್ನೂ ಗಮನಿಸಿರುವ ಅಭಿಮಾನಿಯೊಬ್ಬರು ನೇರವಾಗಿ ಜಗ್ಗೇಶ್ ಅವರಿಗೆ ಟ್ವೀಟ್ ಮಾಡಿದ್ದಾರೆ..

3-4 ತಿಂಗಳಿಗೆ ಒಂದಾದ್ರೂ ಮೂವೀ ರಿಲೀಸ್ ಮಾಡಿತೆರೆಯ ಮೇಲೆ ನಿಮ್ಮನ್ನು ಮಿಸ್‌ ಮಾಡ್ಕೊಳ್ಳುತ್ತಿದ್ದೇವೆ ಎಂದು ಮನವಿ ಮಾಡಿಕೊಂಡಿದ್ದಾರೆಇದಕ್ಕೆ ಜಗ್ಗೇಶ್ ಅವರು ಕೂಡ ಅಷ್ಟೇ ಸೌಜಲ್ಯವಾಗಿ ತನ್ನ ಅಭಿಮಾನಿಯ ಬಯಕೆಗೆ ಉತ್ತರ ಕೊಟ್ಟಿದ್ದಾರೆ.. ತಮ್ಮ ಅಭಿಮಾನಿಯ ಮನವಿಗೆ ಸ್ಪಂದಿಸಿರುವ ಜಗ್ಗೇಶ್ಈ ವರ್ಷ 3 ಚಿತ್ರಗಳನ್ನು ಒಪ್ಪಿಕೊಂಡಿರುವೆ.  ಎಂಎಂ ಚಿತ್ರವನ್ನು ಹೊರತು ಪಡಿಸಿ ಮತ್ತೆ ಮೂರು ಚಿತ್ರಗಳಿಗೆ ಸೈನ್ ಮಾಡಿರೋದಾಗಿ ತಿಳಿಸಿದ್ದಾರೆ

Facebook Auto Publish Powered By : XYZScripts.com