ಹುಟ್ಟು ಹಬ್ಬದ ದಿನ ಗೂಗಲ್ ನಿಂದ ಅಣ್ಣಾವ್ರಿಗೆ ಗೌರವ

ಬೆಂಗಳೂರು:ಇಂದು ಕನ್ನಡ ವರನಟ ಡಾ. ರಾಜ್ ಕುಮಾರ್ ಅವರ ಹುಟ್ಟು ಹಬ್ಬ, ಈ ಹಿನ್ನೆಲೆಯಲ್ಲಿ ಖ್ಯಾತ ಅಂತರ್ಜಾಲ ಸರ್ಚ್ ಇಂಜಿನ್ ಆದ ಗೂಗಲ್ ಸಂಸ್ಥೆ ವಿಶೇಷ ಡೂಡಲ್ ಅನ್ನು ತನ್ನ ಸರ್ಚ್ ಇಂಜಿನ್ ನ ಮುಖಪುಟದಲ್ಲಿ ಹಾಕುವ ಮೂಲಕ ಗೌರವ ಸಮರ್ಪಿಸಿದೆ.

ತೈಲವರ್ಣದಲ್ಲಿ ರಚಿಸುವಂತೆ ಕಾಣುವ ಡಾ. ರಾಜ್ ಕುಮಾರ್ ಅವರ ಭಾವಚಿತ್ರವನ್ನು ಡೂಡಲ್ ನಲ್ಲಿ ಉಪಯೋಗಿಸಲಾಗಿದ್ದು, ಚಿತ್ರ ಮಂದಿರದ ತೆರೆಯ ಮೇಲೆ ಡಾ. ರಾಜ್ ಕುಮಾರ್ ಅವರ ಮೊಗ ಮೂಡಿಂದಿರುವಂತೆ ಚಿತ್ರಿಸಲಾಗಿದ್ದು, ಅದನ್ನು ನೂರಾರು ಪ್ರೇಕ್ಷಕರು ನೋಡುತ್ತಿರುವಂತೆ ಬಿಂಬಿಸಲಾಗಿದೆ.

ಯಾವುದೇ ವಿಶೇಷ ಡೂಡಲ್ ನಲ್ಲಿ ಸಾಮಾನ್ಯವಾಗಿ ಗೂಗಲ್ ಪದವನ್ನು ಕಂಡೂ ಕಾಣದ ರೀತಿಯಲ್ಲಿ ಅಳವಡಿಸುವಂತೆ ಮಾಡಲಾಗುತ್ತದೆ ಇಲ್ಲೂ ಕೂಡ ಹಾಗೇ ಚಿತ್ರಿಸಿಲಾಗಿದ್ದು, ಜೊತೆಗೆ ಈ ಡೂಡಲ್ ಅನ್ನು ಕ್ಲಿಕ್ ಮಾಡಿದರೆ, ಡಾ.ರಾಜ್ ಕುಮಾರ್ ಅವರಿಗೆ ಹಾಗೂ ಅವರಿಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡಬಹುದಾದ ಲಿಂಕ್ ಗಳ ಮಾಹಿತಿಯುಳ್ಳ ಪುಟ ತೆರೆದುಕೊಳ್ಳುತ್ತದೆ.

Facebook Auto Publish Powered By : XYZScripts.com