ಹುಚ್ಚ ವೆಂಕಟ್ ಮೂತಿಗೆ ಮಂಗಳಾರತಿ ಎತ್ತಿದ ಪತ್ರಕರ್ತ ಯತಿರಾಜ್.!

‘ಪೊರ್ಕಿ ಹುಚ್ಚ ವೆಂಕಟ್’ ಸಿನಿಮಾ ನೋಡಲು ಯಾರೂ ಬರಲಿಲ್ಲ ಎಂಬ ಕಾರಣಕ್ಕೆ ಥಿಯೇಟರ್ ನಲ್ಲಿಯೇ, ಕ್ಯಾಮರಾ ಮುಂದೆ ನಿಂತು ಕನ್ನಡಿಗರನ್ನ ಬಾಯಿಗೆ ಬಂದ ಹಾಗೆ ಬೈದಿರುವ ಹುಚ್ಚ ವೆಂಕಟ್ ರವರ ಹೊಸ ವಿಡಿಯೋ ಬಗ್ಗೆ ನಿಮ್ಮ ‘ಫಿಲ್ಮಿಬೀಟ್ ಕನ್ನಡ’ ವರದಿ ಮಾಡಿತ್ತು.

ಈಗ ಈ ವಿಡಿಯೋ ಬಗ್ಗೆ ಕರ್ನಾಟಕದಲ್ಲಿ, ಕನ್ನಡ ಚಿತ್ರರಂಗದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಮನಬಂದಂತೆ ಮಾತನಾಡುವ ಹುಚ್ಚ ವೆಂಕಟ್ ಗೆ ಧಿಕ್ಕಾರ ಕೂಗುವವರ ಸಂಖ್ಯೆ ಹೆಚ್ಚಾಗಿದೆ.

ಮಾತ್ತೆತ್ತಿದ್ರೆ ‘ನನ್ ಎಕ್ಕಡ’ ಎಂದು ಹೇಳುವ ಹುಚ್ಚ ವೆಂಕಟ್ ಹುಚ್ಚಾಟಕ್ಕೆ ‘ನಂದೂ ಒಂದು ಎಕ್ಕಡ’ ಅಂತ ಪತ್ರಕರ್ತ ಹಾಗೂ ಚಿತ್ರ ನಟ ಯತಿರಾಜ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

‘ಕನ್ನಡಿಗರಿಗೆ ಥೂ’ ಎಂದು ಉಗಿದಿರುವ ಹುಚ್ಚ ವೆಂಕಟ್ ಮೇಲೆ ಕಿಡಿಕಾರಿರುವ ಪತ್ರಕರ್ತ ಯತಿರಾಜ್ ವಿಡಿಯೋ ಮೂಲಕವೇ ಹುಚ್ಚ ವೆಂಕಟ್ ಗೆ ಮಂಗಳಾರತಿ ಎತ್ತಿದ್ದಾರೆ. ವಿಡಿಯೋದಲ್ಲಿ ಯತಿರಾಜ್ ಆಡಿರುವ ಮಾತುಗಳು ಇಲ್ಲಿವೆ, ಓದಿರಿ….

”ವೆಂಕಟ್…. ಐ ಅಮ್ ಸಾರಿ… ಹುಚ್ಚ ವೆಂಕಟ್… ಮೊದಲಿನಿಂದಲೂ ನಾನು ನಿಮ್ಮನ್ನ ಗಮನಿಸುತ್ತಾ ಬಂದಿದ್ದೇನೆ. ಕೆಲವೊಂದು ಬಾರಿ ಗೊತ್ತೋ, ಗೊತ್ತಿಲ್ಲದೆಯೋ ನಿಮ್ಮನ್ನ ಬೆಂಬಲಿಸುತ್ತಾ ಬಂದಿದ್ದೇನೆ. ಅದಕ್ಕೆ ಇರುವ ಕಾರಣ ನಿಮ್ಮಲ್ಲಿರುವ ಕನ್ನಡದ ಪ್ರಜ್ಞೆ ಹಾಗೂ ಹೆಣ್ಮಕ್ಕಳ ಮೇಲಿರುವ ಅಭಿಪ್ರಾಯ” – ಯತಿರಾಜ್, ಪತ್ರಕರ್ತ, ಚಿತ್ರ ನಟ

”ನಾನಷ್ಟೇ ಅಲ್ಲ. ನನ್ನಂತೆ ಬಹಳಷ್ಟು ಜನ ನಿಮ್ಮನ್ನ ಬೆಂಬಲಿಸಿದ್ದಾರೆ. ಆ ಬೆಂಬಲದಿಂದ ನೀವು ಜನಪ್ರಿಯತೆಯ ತುತ್ತ ತುದಿಗೆ ಏರಿದ್ರಿ” – ಯತಿರಾಜ್, ಪತ್ರಕರ್ತ, ಚಿತ್ರ ನಟ

”ಆ ಜನಪ್ರಿಯತೆಯನ್ನ ಬಂಡವಾಳ ಮಾಡಿಕೊಂಡು ಸಿನಿಮಾದಲ್ಲಿ ಹೆಸರು ಮಾಡಬಹುದು ಎನ್ನುವ ಒಳದಾರಿಯನ್ನೂ ಹುಡುಕ್ಕೊಂಡಿದ್ದೀರಿ. ಸಂತೋಷ.! ನಿಮ್ಮ ಬದುಕು, ನಿಮ್ಮ ಪ್ರಯತ್ನ.. ತಪ್ಪಲ್ಲ” – ಯತಿರಾಜ್, ಪತ್ರಕರ್ತ, ಚಿತ್ರ ನಟ

”ಆದ್ರೆ, ನಿಮ್ಮ ಹುಚ್ಚಾಟವನ್ನೇ ಬಂಡವಾಳ ಮಾಡಿಕೊಳ್ಳಬಹುದು. ನಿಮ್ಮ ಎಕ್ಕಡವನ್ನೇ ಬಳಸಿಕೊಂಡು ಕಿರೀಟ ಮಾಡಿಕೊಳ್ಳಬಹುದು ಎನ್ನುವ ಅಭಿಪ್ರಾಯ ನಿಮಗೆ ಬಂದಿರುವ ಬಗ್ಗೆ ನನಗೆ ಕೇದ ಇದೆ” – ಯತಿರಾಜ್, ಪತ್ರಕರ್ತ, ಚಿತ್ರ ನಟ

”ಅದಕ್ಕೂ ಕಾರಣ ಇದೆ. ‘ಹುಚ್ಚ ವೆಂಕಟ್’ ಎಂಬ ಸಿನಿಮಾ ಮಾಡಿದ್ರಿ. ಜನ ಬರಲಿಲ್ಲ ಎಂಬ ಕಾರಣಕ್ಕೆ, ಜನ ನನ್ ಎಕ್ಕಡ ಅಂದ್ರಿ. ಜನ ಕ್ಷಮಿಸಿದ್ರು. ಈಗ ‘ಪೊರ್ಕಿ ಹುಚ್ಚ ವೆಂಕಟ್’ ಎಂಬ ಸಿನಿಮಾ ಮಾಡಿದ್ದೀರಿ. ಅದಕ್ಕೂ ಜನ ಬರಲಿಲ್ಲ ಅಂತ ನಿನ್ನೆ ಥಿಯೇಟರ್ ನಲ್ಲಿ ಕೂಗಾಡಿದ್ದೀರಿ. ಕನ್ನಡಿಗರ ಬಗ್ಗೆ ಕೆಟ್ಟ ಕೆಟ್ಟದಾಗಿ ಮಾತನಾಡಿದ್ದೀರಿ” – ಯತಿರಾಜ್, ಪತ್ರಕರ್ತ, ಚಿತ್ರ ನಟ

”ನಿನ್ನೆ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಕ್ಯಾಮರಾ ಮುಂದೆ ಕನ್ನಡಿಗರಿಗೆ ‘ಥೂ’ ಅಂತ ಉಗಿದಿದ್ದೀರಿ. ಯಾವ ಮಟ್ಟಕ್ಕೆ ಇಳಿದಿದ್ದೀರಿ.? ನಿಮ್ಮ ಮಾನಸಿಕ ಸ್ಥಿತಿ ಬಗ್ಗೆ ನನಗೂ ಬೇಸರ ಇದೆ. ಹಾಗಂತ ಹಾಗೆ ಬಿಡುವುದಕ್ಕೆ ಸಾಧ್ಯ ಆಗುವುದಿಲ್ಲ. ನಿಮ್ಮ ಅತಿರೇಕಕ್ಕೆ ಒಂದು ಕಡಿವಾಣ ಹಾಕಬೇಕಾಗಿದೆ” – ಯತಿರಾಜ್, ಪತ್ರಕರ್ತ, ಚಿತ್ರ ನಟ

”ಕನ್ನಡಿಗರ ಪ್ರೀತಿ ಪಡೆದು ಈ ಸ್ಥಾನಕ್ಕೆ ಬಂದಿದ್ದೀರಿ. ಈಗ ಕನ್ನಡಿಗರಿಗೆ ಬೈಯುತ್ತಿದ್ದೀರಾ.! ಕನ್ನಡಿಗರಿಗೆ ಬೈದು ನೀವು ಉಳಿಯಬಹುದು ಅಂತ ಯಾರು ನಿಮಗೆ ಹೇಳಿಕೊಟ್ಟಿದ್ದು.? ಇಂತಹ ಕೆಟ್ಟ ಯೋಚನೆ ನಿಮಗೆ ಹೇಗೆ ಬಂತು.?” – ಯತಿರಾಜ್, ಪತ್ರಕರ್ತ, ಚಿತ್ರ ನಟ

”ಮಾಧ್ಯಮಗಳಿಂದಲೇ ನಾನು ಮೇಲೆ ಬಂದಿದ್ದು. ಮಾಧ್ಯಮಗಳು ನನ್ನ ತಂದೆ-ತಾಯಿ ಸಮಾನ ಅಂತ ಹೇಳ್ತಿದ್ರಿ. ಇವತ್ತು ಕೆಟ್ಟ ಭಾಷೆ ಬಳಸಿ ವಿಡಿಯೋ ಅಪ್ ಲೋಡ್ ಮಾಡಿದ್ದೀರಾ. ಎಲ್ಲರನ್ನೂ ಎದುರು ಹಾಕೊಂಡು ಬೇರೆ ಸಾಮ್ರಾಜ್ಯ ಕಟ್ಟುತ್ತೀರಾ.?” – ಯತಿರಾಜ್, ಪತ್ರಕರ್ತ, ಚಿತ್ರ ನಟ

”ವೆಂಕಟ್ ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲ ಇರುತ್ತೆ. ಆದ್ರೆ, ನಿಮ್ಮ ಹುಚ್ಚಾಟಕ್ಕೆ ಇರುವುದಿಲ್ಲ. ಹುಚ್ಚಾಟದಿಂದ ಬದುಕಬಹುದು ಎಂಬ ತಪ್ಪು ಕಲ್ಪನೆಯಿಂದ ಹೊರಬಂದು ಯಾರ್ಯಾರಿಗೆ ಬೈದಿದ್ದೀರೋ, ಅವರಿಗೆಲ್ಲ ಕ್ಷಮೆ ಕೇಳಿ. ಸರಿಯಾದ ರೀತಿ-ನೀತಿ ಅನುಸರಿಸಿ. ಇಲ್ಲಾಂದ್ರೆ, ನಿಮ್ಮ ಹುಚ್ಚಾಟಕ್ಕೆ ನಂದು ಒಂದು ಧಿಕ್ಕಾರ, ನಂದು ಒಂದು ಎಕ್ಕಡ” – ಯತಿರಾಜ್, ಪತ್ರಕರ್ತ, ಚಿತ್ರ ನಟ

Courtesy: Filmibeat

Facebook Auto Publish Powered By : XYZScripts.com