ಹುಚ್ಚ ವೆಂಕಟ್ ಪ್ರಧಾನ ಮಂತ್ರಿ ಆಗ್ತಾರಾ??

ಮೈಸೂರು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಓಂ ಬ್ಯಾನರ್ ನಡಿ ನಿರ್ಮಿಸಿದ, ಹುಚ್ಚ ವೆಂಕಟ್ ನಿರ್ದೇಶನದಲ್ಲಿ, ನಾನೇ ನಾಯಕ ನಟನಾಗಿ ಅಭಿನಯಿಸಿರುವ’ ‘ಪೊರ್ಕಿ ಹುಚ್ಚ ವೆಂಕಟ್’ ಸಿನಿಮಾವು ಇದೇ ಏ.28ರಂದು ಮೈಸೂರಿನ ಸತ್ಯಂ ಚಿತ್ರಮಂದಿರದಲ್ಲಿ ಬಿಡುಗಡೆಗೊಳ್ಳಲಿದೆ. ಚಿತ್ರ ನನ್ನ ಜೀವನದ ನೈಜ ಘಟನೆಯಾಧಾರಿತವಾಗಿದೆ. ಸಿನಿಮಾವು ಸಮಾಜವನ್ನು ಬದಲಿಸುವ ಶಕ್ತಿಯನ್ನು ಹೊಂದಿದ್ದು ಕೇವಲ ಬುದ್ದಿವಾದವನ್ನು ಹೇಳಿಲ್ಲ ಬದಲಿಗೆ ಪ್ರೀತಿಯೆಂದರೇನು? ಎನ್ನುವ ನವಿರಾದ ದೃಶ್ಯಗಳು, ಪಂಚಿಂಗ್ ಡೈಲಾಗ್ ಗಳನ್ನು ಒಳಗೊಂಡಿದೆ ಎಂದು ತಿಳಿಸಿದರು. ಕೇವಲ ಶಿಳ್ಳೆ ಚಪ್ಪಾಳೆಗಳಿಗಾಗಿ ಪಂಚಿಂಗ್ ಡೈಲಾಗ್ ಗಳಿಲ್ಲ ಅವುಗಳನ್ನು ಸೂಕ್ತವಾಗಿ ಅರ್ಥೈಸಿಕೊಳ್ಳಬೇಕು. ಕನ್ನಡ ಸಿನಿಮಾ ನೋಡಿ ಬೆನ್ನು ತಟ್ಟಿ ಎಂದು ಕೋರಿದರು.

ಸಿನಿಮಾ ಇಲ್ಲದೇನೇ ನಾನು ಹೀರೋ. ಹುಚ್ಚ ವೆಂಕಟ್ ಸೇನೆ ರಾಜಕೀಯ ಪಕ್ಷವಾಗಿ ಹೊರ ಹೊಮ್ಮಲಿದ್ದು ಮುಂದೊಂದು ದಿನ ನಾನು ಪ್ರಧಾನಿಯಾಗುವೆ. ತಪ್ಪು ಮಾಡುವ ಕಾರ್ಯಕರ್ತರ ಕೈಕಾಲು ಮುರಿಯುವೇ ಎನ್ನುವ ಆವೇಶಭರಿತ ಪಂಚಿಂಗ್ ಡೈಲಾಗ್ ಗಳ ಮೂಲಕವೇ ಸುದ್ದಿಗಾರರೊಂದಿಗೆ ಮಾತನಾಡಿದ್ದು ಚಲನಚಿತ್ರ ನಟ ಹುಚ್ಚ ವೆಂಕಟ್.

Facebook Auto Publish Powered By : XYZScripts.com