ಹುಚ್ಚು ಅಭಿಮಾನಿಗೆ ಸುದೀಪ್ ಹೇಳಿದ ನೀತಿ ಪಾಠವೇನು? ಇಲ್ಲಿದೆ ಮಾಹಿತಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನ ಭೇಟಿ ಮಾಡಬೇಕು. ಅದಕ್ಕಾಗಿ ಉಪವಾಸ ಮಾಡುತ್ತೇನೆ ಎಂದು ನಿರ್ಧಾರ ಮಾಡಿ ಕಿಚ್ಚನ ಅಭಿಮಾನಿಯೊಬ್ಬರು ಉಪವಾಸ ಸತ್ಯಾಗ್ರಹ ಆರಂಭ ಮಾಡಿದ್ದಾರೆ. ಕನಕಪುರ ಬಳಿ ಇರುವ ಸಾತನೂರಿನ ನಾಗಸೊಂಡೆ ಗ್ರಾಮದಲ್ಲಿ ವಾಸವಾಗಿರುವ ಕಿಚ್ಚ ಶಿವು ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ.

ಈ ವಿಡಿಯೋ ನೋಡಿದ ಸುದೀಪ್ ಅಭಿಮಾನಿಗಳು ಹಾಗೂ ಸಾಮಾನ್ಯ ಜನರು ಇಂತಹ ಕೆಲಸ ಮಾಡುವುದರಿಂದ ನಿಮಗೂ ಹಾಗೂ ಸುದೀಪ್ ಅವರಿಗೂ ತೊಂದರೆ ಆಗುತ್ತದೆ. ಇವೆಲ್ಲವನ್ನು ಬಿಟ್ಟು ಬಿಡಿ ಎಂದು ಸಲಹೆ ನೀಡಿದ್ದರು.

ಈ ವಿಚಾರ ಅಭಿಮಾನಿಗಳ ಮೂಲಕ ಕಿಚ್ಚ ಸುದೀಪ್ ಅವರಿಗೆ ತಲುಪಿದೆ. ಉಪವಾಸ ಕೂರುತ್ತೇನೆ ಎಂದು ನಿರ್ಧಾರ ಮಾಡಿದ ಅಭಿಮಾನಿಗೆ ಕಿಚ್ಚ ಕಿವಿ ಮಾತು ಹೇಳಿದ್ದಾರೆ. ಹುಚ್ಚು ಅಭಿಮಾನಿಗೆ ಸುದೀಪ್ ಹೇಳಿದ ನೀತಿ ಪಾಠವೇನು?

ತಮ್ಮನ್ನು ಭೇಟಿ ಮಾಡಲು ಉಪವಾಸ ಆರಂಭ ಮಾಡಿರುವ ಅಭಿಮಾನಿಯ ವಿಚಾರ ಸುದೀಪ್ ಅವರಿಗೆ ವಿಚಾರ ಮುಟ್ಟಿದೆ. ಅಭಿಮಾನಿಗಳಿಂದ ಈ ಬಗ್ಗೆ ತಿಳಿದುಕೊಂಡ ಕಿಚ್ಚ ಟ್ವಿಟ್ ಮೂಲಕ ತಿಳಿ ಹೇಳಿದ್ದಾರೆ. ಉಪವಾಸ ಮಾಡುತ್ತಿರುವ ಬಗ್ಗೆ ತಿಳಿದ ಸುದೀಪ್ ಅಭಿಮಾನಿಗೆ ತಿಳಿ ಹೇಳುವ ಕೆಲಸ ಮಾಡಿದ್ದಾರೆ. ‘ನೀವು ಚೆನ್ನಾಗಿದ್ದರೆ ನನಗೆ ಖುಷಿ ಉಪವಾಸ ಮಾಡಿ ನೋವು ನೀಡಬೇಡಿ’ ಎಂದು ಟ್ವಿಟ್ ಮಾಡಿದ್ದಾರೆ. ‘ನನ್ನನ್ನು ಭೇಟಿ ಮಾಡಲು ಸಾಕಷ್ಟು ದಾರಿ ಇದೆ ಅದರಲ್ಲಿ ಉತ್ತಮವಾದುದ್ದನ್ನ ಮಾತ್ರ ಆಯ್ಕೆ ಮಾಡಿಕೊಳ್ಳಿ ಎಂದು ತಿಳಿಸಿರುವ ಸುದೀಪ್ ಪ್ರೀತಿ ಜೊತೆಯಲ್ಲಿ ತಾಳ್ಮೆ ಇರಲಿ. ಭೇಟಿ ಮಾಡಲು ನನಗೂ ಸಮಯ ಬೇಕಾಗಿದೆ. ನಿಮ್ಮೆಲ್ಲರ ಪ್ರೀತಿಗೆ ನಾನು ಚಿರರುಣಿ’ ಎಂದಿದ್ದಾರೆ.

ಅಭಿಮಾನಿಯ ಬಗ್ಗೆ ಕಾಳಜಿ ವಹಿಸಿ ಸುದೀಪ್ ಟ್ವಿಟ್ ಮಾಡಿರುವುದನ್ನ ನೋಡಿರುವ ಅಭಿಮಾನಿಗಳು ಇನ್ನಾದರೂ ಉಪವಾಸ ಬಿಟ್ಟು ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ಕಿಚ್ಚ ಶಿವು ಅವರಿಗೆ ತಿಳಿಸಿದ್ದಾರೆ.

Facebook Auto Publish Powered By : XYZScripts.com