ಹುಚ್ಚನಿಗೆ ಜೊತೆ ನೀಡಿದ ಕಿಚ್ಚ ಸುದೀಪ್… ಇಲ್ಲಿ ಓದಿ

ಹದಿನೇಳು ವರ್ಷಗಳ ಹಿಂದೆ ಸುದೀಪ್ ಅಭಿನಯದ “ಹುಚ್ಚ’ ಬಿಡುಗಡೆಯಾಗಿತ್ತು. ನಿರ್ದೇಶಕ ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದ ಆ ಚಿತ್ರ ಜೋರು ಸುದ್ದಿ ಮಾಡಿದ್ದು ಗೊತ್ತೇ ಇದೆ. ಈಗ ಹೊಸ ಸುದ್ದಿಯೆಂದರೆ, ಓಂ ಪ್ರಕಾಶ್ರಾವ್ “ಹುಚ್ಚ-2′ ಮಾಡಿದ್ದಾರೆ. ಇದೀಗ ರಿಲೀಸ್ಗೂ ರೆಡಿಯಾಗಿದೆ. ವಿಶೇಷವೆಂದರೆ, ಚಿತ್ರದ ಹಾಡುಗಳನ್ನು ಸುದೀಪ್ ಅವರು ಬಿಡುಗಡೆ ಮಾಡಿ ಶುಭಹಾರೈಸಿದ್ದಾರೆ.

ಇತ್ತೀಚಿಗೆ ಚಿತ್ರತಂಡ ಸುದೀಪ್ ಅವರನ್ನು ಭೇಟಿ ಮಾಡಿ, ಅವರ ಮೂಲಕ “ಹುಚ್ಚ 2′ ಚಿತ್ರದ ಹಾಡುಗಳನ್ನು ಬಿಡುಗಡೆಗೊಳಿಸಿದೆ. ಈ ವೇಳೆ ಸುದೀಪ್ ತಮ್ಮ “ಹುಚ್ಚ’ ಚಿತ್ರ ಬಿಡುಗಡೆಯಾಗಿ ಹದಿನೇಳು ವರ್ಷ ಕಳೆದಿರುವುದೇ ಗೊತ್ತಾಗಿಲ್ಲ. ಇತ್ತೀಚೆಗಷ್ಟೇ ಆ ಚಿತ್ರ ಮಾಡಿದ್ದೇವೇನೋ ಎಂಬ ಫೀಲ್ ಆಗುತ್ತಿದೆ. ಓಂ ಪ್ರಕಾಶ್ರಾವ್ ಅವರು “ಹುಚ್ಚ 2′ ಚಿತ್ರ ಮಾಡಿದ್ದಾರೆ.

ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭಕೋರಿದ್ದಾರೆ. ಇನ್ನು, ಈ ಹಿಂದೆ ಚಿತ್ರದ ಟ್ರೇಲರ್ ಅನ್ನು ಶಿವರಾಜಕುಮಾರ್ ಬಿಡುಗಡೆ ಮಾಡಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ “ಹುಚ್ಚ-2′ ಕಳೆದ ವರ್ಷ ಸೆಪ್ಟೆಂಬರ್ಗೆ ತೆರೆಗೆ ಬರಬೇಕಿತ್ತು. ಕಾರಣಾಂತರದಿಂದ ಮುಂದಕ್ಕೆ ಹೋದ ಚಿತ್ರ, ಮಾರ್ಚ್ 30 ರಂದು ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸಿದೆ.

ಈ ಚಿತ್ರವನ್ನು ಎ.ಎಂ.ಉಮೇಶ್ ರೆಡ್ಡಿ ನಿರ್ಮಿಸಿದ್ದಾರೆ. “ಮದರಂಗಿ’ ಕೃಷ್ಣ ನಾಯಕರಾಗಿದ್ದು, ಅವರಿಗೆ ಶ್ರಾವ್ಯಾ ನಾಯಕಿಯಾಗಿದ್ದಾರೆ. ಉಳಿದಂತೆ ಚಿತ್ರದಲ್ಲಿ ಮಾಳವಿಕಾ, ಸಾಯಿಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಓಂ ಪ್ರಕಾಶ್ರಾವ್ ನಿರ್ದೇಶನದ ಚಿತ್ರ ಅಂದಮೇಲೆ ಆಯಕ್ಷನ್ ಇರಲೇಬೇಕು. ಅದು ಇಲ್ಲಿ ಹೇರಳವಾಗಿಯೇ ಇದೆಯಂತೆ. ಜೊತೆಗೆ ಸೆಂಟಿಮೆಂಟ್ ಕೂಡ ಇದೆ.

Facebook Auto Publish Powered By : XYZScripts.com