ಹಾಲಿವುಡ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ನಟ ಕಿಚ್ಚ ಸುದೀಪ್

ಬೆಂಗಳೂರು: ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ಗೆ ಹಾಲಿವುಡ್ನಲ್ಲಿ ಅಭಿನಯಿಸಲು ಅವಕಾಶ ಬಂದಿದ್ದು ಶೀಘ್ರವೇ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಈ ಕುರಿತು ‘ಟೀಮ್ ಕಿಚ್ಚ ಸುದೀಪ್’ ಟ್ವೀಟರ್ ಖಾತೆಯಲ್ಲಿ ‘ಹಾಲಿವುಡ್ನ ‘ದಿ ರೈಸನ್’ ಚಿತ್ರಕ್ಕೆ ಸುದೀಪ್ ಸಹಿ ಮಾಡಿರುವುದಾಗಿ’ ಬರೆಯಲಾಗಿದೆ.

ಈ ಚಿತ್ರವನ್ನು ‘ಆಸ್ಟ್ರೇಲಿಯಾದ ನಿರ್ದೇಶಕ ಈಡಿ ಆರ್ಯ ನಿರ್ದೇಶಿಸಲಿದ್ದು, ಸುದೀಪ್ ಸೇನಾಧಿಕಾರಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ’ ಎಂದು ವಿವರಿಸಲಾಗಿದೆ.

ಸುದೀಪ್ ಈಗಾಗಲೇ ಸ್ಯಾಂಡಲ್ವುಡ್, ಟಾಲಿವುಡ್, ಬಾಲಿವುಡ್, ಕಾಲಿವುಡ್ನಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದು, ಇದೀಗ ಹಾಲಿವುಡ್ನಲ್ಲಿ ಮಿಂಚುವ ಭರವಸೆ ನೀಡಿದ್ದಾರೆ.

ಈ ಕುರಿತು ನಿರ್ದೇಶಕ ಈಡಿ ಆರ್ಯ ಹಾಗೂ ಸುದೀಪ್ ನಡುವೆ ಮಾತುಕತೆ ನಡೆದಿದ್ದು, ಅಭಿನಯಿಸು ಸುದೀಪ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ. ಚಿತ್ರ ‘ರಷ್ಯಾದಲ್ಲಿ ನಡೆದ ಸ್ಫೋಟವೊಂದರ ಘಟನೆಯ ಹಿನ್ನೆಲೆ’ ಒಳಗೊಂಡಿರಲಿದೆ ಎಂದು ಚಿತ್ರತಂಡ ತಿಳಿಸಿದೆ.

‘ದಿ ವಿಲನ್’ ಚಿತ್ರದ ಚಿತ್ರೀಕರಣಕ್ಕಾಗಿ ಲಂಡನ್ಗೆ ತೆರಳಿರುವ ಸುದೀಪ್ , ‘ದಿ ರೈಸನ್’ ಚಿತ್ರದ ನಿರ್ದೇಶಕರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದು, ಅಕ್ಟೋಬರ್ನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

 

Related

                                                                    

Download Hebbuli Hd movie MP4                                                      Download Raajakumara HD movie MP4

Facebook Auto Publish Powered By : XYZScripts.com