ಹಾಟ್ ಚಾಕಲೇಟ್ ಗರ್ಲ್ ಆಗಿ ಕಾಣಿಸಿಕೊಳ್ಳಲಿದ್ದಾಳೆ ನೇಹಾ, ಈ ವಿಡಿಯೋ ನೋಡಿ….

ನಟಿ ನೇಹಾ ಇದೀಗ ಕನ್ನಡ ಚಿತ್ರರಂಗದಲ್ಲಿ ಖ್ಯಾತಿಯ ಅಲೆಯನ್ನೇ ಎಬ್ಬಿಸಿದ್ದಾರೆ. ಈ ಹಿಂದೆ ‘ತ್ರಿ ಪೆಗ್ ಹಾಡು’ ಪಡ್ಡೆಗಳನ್ನು ರೊಚ್ಚಿಗೆಬ್ಬಿಸಿತ್ತು. ಇದೀಗ ‘ಚಾಕಲೇಟ್ ಗರ್ಲ್’ ಹಾಡು ಆಕರ್ಷಣೆ ತುಂಬಿದೆ. ರಾಪ್ ಸಿಂಗರ್ ಚಂದನ್ ಶೆಟ್ಟಿ ಅವರ ಹಾಡು ಸಾಮಾಜಿಕ ಜಾಲತಾಣದಲ್ಲಿ ಲಕ್ಷಗಟ್ಟಲೆ ಲೈಕ್ ಗಳನ್ನು ಪಡೆದುಕೊಳ್ಳುತ್ತಿದ್ದು, ಅದಕ್ಕೆ ಹೆಜ್ಜೆ ಹಾಕಿರುವ ‘ಮುಂಗಾರು ಮಳೆ-2’ ಖ್ಯಾತಿಯ ನೇಹಾ ಎಲ್ಲರ ಗಮನ ಸೆಳೆದಿದ್ದಾರೆ. ಈ ಹಾಡಿನ ಮೂಲಕ ನೇಹಾ ಶೆಟ್ಟಿ ಅವರ ಕೀರ್ತಿ ಕೂಡ ಉತ್ತುಂಗಕ್ಕೆ ಏರಿದೆ.

ಈ ಹಾಡು ಬಿಡುಗಡೆಯಾದ ಅಲ್ಪಾವಧಿಯಲ್ಲೇ ಸುಮಾರು 10 ಲಕ್ಷ ಜನ ಅದನ್ನು ವೀಕ್ಷಿಸಿದ್ದಾರೆ. ಇಲ್ಲೂ ಒಂದು ವಿಶೇಷತೆ ಇದೆ. ನಿರಂತರ 48 ಗಂಟೆಗಳ ಕಾಲ ಈ ಹಾಡು ಯೂ ಟ್ಯೂಬ್ ಟ್ರೇಡಿಂಗ್ ನಲ್ಲಿ ನಂಬರ್ 1 ಸ್ಥಾನ ಪಡೆದಿತ್ತು. ಇತರ ಭಾಷೆಗಳ ಹಾಡಿನ ನಡುವೆಯೂ ಚಾಕಲೇಟ್ ಗರ್ಲ್ ಖ್ಯಾತಿ ಒಂದು ವಾರದಲ್ಲೇ ಹತ್ತು ಲಕ್ಷ ಜನರ ಗಮನ ಕೇಂದ್ರಿಕರೀಸಿರುವುದು ಇದರ ಆಕರ್ಷಣೆ ಎಷ್ಟಿದೆ ಎಂಬುದನ್ನು ತೋರಿಸಿಕೊಡುತ್ತದೆ.

Courtesy: Balkani News

Facebook Auto Publish Powered By : XYZScripts.com