ಹಸುಗಳ ಜೊತೆ ಕಿಚ್ಚು ಹಾಯಿಸಿದ ಚಾಲೆಂಜಿಂಗ್ ಸ್ಟಾರ್

ನಿನ್ನೆ(ಜ.15) ಸಂಕ್ರಾಂತಿ ಹಬ್ಬದ ಸಂಭ್ರಮ ಎಲ್ಲೆಡೆ ಜೋರಾಗಿತ್ತು. ಸಿನಿಮಾ ಸ್ಟಾರ್ ಗಳು ಕೂಡ ತಮ್ಮದೇ ಸ್ಟೈಲ್ ನಲ್ಲಿ ಸುಗ್ಗಿ ಹಬ್ಬವನ್ನ ಆಚರಣೆ ಮಾಡಿದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆಯಲ್ಲಿ ಸಂಕ್ರಾಂತಿ ತುಂಬಾನೇ ಸ್ಪೆಷಲ್ ಆಗಿತ್ತು. ಹೊಸ ಸಿನಿಮಾದ ಮಹೂರ್ತದ ಜೊತೆಗೆ ದುಬಾರಿ ಕಾರ್ ಅನ್ನು ಕೂಡ ಡಿ ಬಾಸ್ ಖರೀದಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ವಾಸವಿದ್ದರೂ ಕೂಡ ಮೈಸೂರೇ ನಮ್ಮೂರು ಎನ್ನುವ ದರ್ಶನ್ ಕಾರ್ ಪೂಜೆ ಮಾಡಿಸಿದ ನಂತರ ಮೈಸೂರಿನತ್ತ ಪ್ರಯಾಣ ಬೆಳೆಸಿದರು. ಅಭಿಮಾನಿಗಳು ದರ್ಶನ್ ಅವರ ಹೊಸ ಕಾರ್ ನೋಡಲು ಮೈಸೂರು ರಸ್ತೆಯಲ್ಲಿ ಕಾದಿದ್ದರು.

ಬೆಂಗಳೂರಿನಿಂದ ನೇರವಾಗಿ ಮೈಸೂರಿಗೆ ಪ್ರಯಾಣ ಬೆಳೆಸಿದ ದರ್ಶನ್ ಮೊದಲಿಗೆ ಅವರ ಫಾರ್ಮ್ ಹೌಸ್ ಗೆ ಭೇಟಿ ನೀಡಿದ್ದಾರೆ. ಹಬ್ಬದ ಪ್ರಯುಕ್ತ ತೋಟದ ಮನೆಯಲ್ಲಿರುವ ಹಸುಗಳಿಗೆ ಸಿಂಗಾರ ಮಾಡಿ ಕಿಚ್ಚು ಹಾಯಿಸಿದ್ದಾರೆ.

ಎರಡು ಎತ್ತುಗಳ ಜೊತೆ ಕಿಚ್ಚು ಹಾಯಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸ್ಟಾರ್ ಆಗಿ ಎಷ್ಟೇ ಪ್ರಖ್ಯಾತಿ ಪಡೆದಿದ್ದರು ಕೂಡ ಇಂದಿಗೂ ನಮ್ಮ ಸಂಸ್ಕೃತಿ, ಸಂಪ್ರದಾಯವನ್ನ ಮರೆತಿಲ್ಲ ಎನ್ನುವುದನ್ನ ನಿರೂಪಿಸಿದ್ದಾರೆ.

source: filmibeat.com

Facebook Auto Publish Powered By : XYZScripts.com