ಹರಾಜಿಗಿದೆ ‘ಕಿರಿಕ್ ಪಾರ್ಟಿ’ ಕಾರು, ಬೆಲೆ ಎಷ್ಟು ಗೊತ್ತಾ?

ಸಿನಿಮಾ ಡೆಸ್ಕ್ :ಸ್ಯಾಂಡಲ್ ವುಡ್ ನಲ್ಲಿ ಸಖತ್ ಕಮಾಲ್ ಮಾಡಿದ ಸಿನಿಮಾ’ಕಿರಿಕ್ ಪಾರ್ಟಿ’. ಈ ಸಿನಿಮಾದಲ್ಲಿ ಕರ್ಣ, ಸಾನ್ವಿ, ಆರ್ಯರಷ್ಟೇ ಫೇಮಸ್ ಆದ ಮತ್ತೊಂದು ಕ್ಯಾರೆಕ್ಟರ್ ಕೂಡ ಇದಾಗಿತ್ತು.

ಯೆಸ್..ಅದುವೇ ಕಿರಿಕ್ ಪಾರ್ಟಿಯಲ್ಲಿರುವ ಹಳದಿ ಬಣ್ಣದ ಕಾರು, ಸಿನಿಮಾದಷ್ಟೇ ಫೇಮಸ್ ಆದ ಕಾರು ಎಲ್ಲರ ಗಮನ ಸೆಳೆದಿತ್ತು. ಎಲ್ಲರ ಮನೆ ಮಾತಾದ ಹಳದಿ ಬಣ್ಣದ ಕಾರಿಗೆ ಹಲವು ಮಂದಿ ಫಿದಾ ಆಗಿದ್ದಾರೆ. ಹೌದು ಹೀರೋಯಿನ್ಗೆ ಇರದಷ್ಟು ಅಭಿಮಾನಿಗಳು ಈ ಕಾರ್ಗಿದ್ದಾರೆ.

ಅಂದಹಾಗೆ ಈ ಕಾರಿನ ಹೆಸ್ರು ಕಿರಿಕ್ ಕಾರ್ ಅಂತ. ಈ ಹಳದಿ ಬಣ್ಣದ ಈ ಕಾರು ಇಡೀ ಚಿತ್ರದಲ್ಲಿ ಪ್ರಮುಖ ಪಾತ್ರವನ್ನೇ ವಹಿಸಿತ್ತು. ಗೆಳೆಯರ ನಡುವಿನ ಸ್ಪರ್ಧೆಯಲ್ಲಿ, ಹುಡುಗಿಯನ್ನು ಪಟಾಯಿಸುವಲ್ಲಿ ಈ ಕಾರಿಗೇ ಪ್ರಮುಖ ಆದ್ಯತೆ ನೀಡಲಾಗಿತ್ತು.

ಆದರೆ ಇದೀಗ ರಕ್ಷಿತ್ ಶೆಟ್ಟಿ ಇದೀಗ ಈ ಕಿರಿಕ್ ಕಾರನ್ನು ಹರಾಜು ಹಾಕ್ತಿದ್ದಾರಂತೆ. ಆ ಹರಾಜಿನಲ್ಲಿ ಬರುವ ಹಣವನ್ನು ಒಂದು ಉತ್ತಮ ಕೆಲಸಕ್ಕೆ ವಿನಿಯೋಗಿಸಲು ಪರಂವಾ ಸ್ಟುಡಿಯೋಸ್ ನಿರ್ಧರಿಸಿದೆಯಂತೆ.

ಆದ್ರೆ ಚಿತ್ರದ ಕೊನೆಯಲ್ಲಿ ಕರ್ಣ ಈ ಕಾರನ್ನು ಹರಾಜು ಹಾಕಿ ಅದರಿಂದ ಬಂದ ಹಣದಲ್ಲಿ ಒಳ್ಳೆ ಕೆಲಸ ಮಾಡ್ತಾನೆ .ಅದೇ ರೀತಿ ರಿಯಲ್ ಲೈಫಲ್ಲೂ ಇದನ್ನೇ ಮಾಡೋಕೆ ಹೊರಟಿದ್ದಾರೆ ರಕ್ಷಿತ್ ಶೆಟ್ಟಿ. ಅಂದಹಾಗೆ ಸಾನ್ವಿಯಷ್ಟೇ ಅಭಿಮಾನಿಗಳು ಈ ಹಳದಿ ಕಾರಿಗೂ ಇರೋದ್ರಿಂದ ಹರಾಜಿನಲ್ಲಿ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆಯಿದೆಯಂತೆ. ಇದಕ್ಕೊಂದು ಫೇಸ್ಬುಕ್ ಪೇಜ್ ಕೂಡಾ ಕ್ರಿಯೆಟ್ ಆಗಿದೆಯಂತೆ. ಹರಾಜು ಯಾವಾಗ, ಎಲ್ಲಿ, ಹೇಗೆ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯದಲ್ಲೇ ಗೊತ್ತಾಗಲಿದೆ.

Courtesy: Kannada news now

Facebook Auto Publish Powered By : XYZScripts.com