ಸ್ಯಾಂಡಲ್ ವುಡ್ ರಾಜಾಹುಲಿ-ಸೂಪರ್ ಸ್ಟಾರ್ ರಜನಿಕಾಂತ್ ನಡುವೆ ಫೈಟ್.. ಯಾರು ಗೆಲ್ತಾರೆ?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದೆ. ಉಗ್ರಂ ನಂತರ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ಪೋಸ್ಟರ್ ಹಾಗೂ ಟೀಸರ್ ಸ್ಯಾಂಡಲ್ ವುಡ್ ನಲ್ಲಿ ಕಮಾಲ್ ಮಾಡಿದೆ.

ಎಲ್ಲ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಡಿಸೆಂಬರ್ ನಲ್ಲಿ ತೆರೆಗೆ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ತಡವಾಗಿ ಬರುತ್ತಿದೆ. ಏಪ್ರಿಲ್ ಮೇ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ತೆರೆಗೆ ಬರುವ ಸಾಧ್ಯತೆಗಳಿದೆ. ಇದೇ ವೇಳೆ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಕಾಲಾ ಚಿತ್ರ ಕೂಡ ತೆರೆಗೆ ಬರುತ್ತಿದ್ದು, ಈ ಎರಡೂ ಸಿನಿಮಾಗಳ ನಡುವೆ ವಾರ್ ನಡೆಯಲಿದೆ.

ಕಾಲಾ ಚಿತ್ರ ಏಪ್ರಿಲ್ 27 ರಂದು ರಿಲೀಸ್ ಆಗಲಿದೆ. ಜೊತೆಗೆ ಕೆಜಿಎಫ್ ಕೂಡ ಏಪ್ರಿಲ್ ನಲ್ಲಿ ತೆರೆಗೆ ಬರುವ ಸಾಧ್ಯತೆಗಳಿದ್ದು, ಈ ಎರಡೂ ಚಿತ್ರಗಳ ನಡುವೆ ಬಿಗ್ ಫೈಟ್ ನಡೆಯಲಿದೆ. . ವಿಶೇಷ ಏನಪ್ಪ ಅಂದ್ರೆ ಕೆಜಿಎಫ್ ಸಿನಿಮಾ ಕನ್ನಡ, ತೆಲುಗು, ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ಕೂಡ ರಿಲೀಸ್ ಆಗುತ್ತಿದೆ.

Facebook Auto Publish Powered By : XYZScripts.com