ಸ್ಯಾಂಡಲ್ ವುಡ್ ಗೆ ನಲ್ಲಿ ಧೂಳೆಬ್ಬಿಸಲು ರೆಡಿಯಾಗಿದೆ ಹೊಸಬರ ಟೀಂ

ನಾಯಕಿಯಾಗಿ ಅರ್ಪಿತ ಗೌಡ
ಸ್ಯಾಂಡಲ್ ವುಡ್ ಇತ್ತೀಚಿನ ದಿನಗಳಲ್ಲಿ ಪ್ರಯೋಗಾತ್ಮತೆಗೆ ಮೈ ಒಡ್ಡುತ್ತಿದೆ. ಅದರಲ್ಲೂ ಹೊಸಬರ ಟೀಂ ಮಾಡುತ್ತಿರುವ ಪ್ರಯತ್ನಗಳು ಸಾಕಷ್ಟು ಬಾರಿ ಸಕ್ಸೆಸ್ ಆಗಿ ಬಾಕ್ಸ್ ಆಪೀಸ್ ಕೊಳ್ಳೆ ಹೊಡೆದಿದ್ದೂ ಇದೆ. ಇದೇ ಕಾರಣಕ್ಕಾಗಿಯೋ ಏನೂ, ದಿನೇ ದಿನೇ ಹೊಸಬರ ಚಿತ್ರಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಈ ಹಿಂದೆ ಹೊಸ ಮುಖಗಳ ಚಿತ್ರಗಳಿಗೆ ಹಣಹೂಡಲು ಹಿಂದೇ ಮುಂದೆ ನೋಡುತ್ತಿದ್ದ ನಿರ್ಮಾಪಕರು ಇದೀಗ ಭರವಸೆಯಿಂದ ಹಣಹೂಡಲು ಮುಂದೆ ಬರುತ್ತಿದ್ದಾರೆ.
ಈ ನಡುವೆ ಇದೀಗ ಮತ್ತೊಂದು ಟ್ಯಾಲೆಂಟೆಡ್ ಟೀಂ ಒಂದು ಗಾಂಧನಗರಕ್ಕೆ ಏಂಟ್ರಿ ಕೊಟ್ಟಿದ್ದು, ಹೊಸ ಚಿತ್ರವೊಂದು ತಯಾರಾಗುತ್ತಿದೆ. ಈ ಹಿಂದೆ ಉಗ್ರಾಕ್ಷ ಎಂಬ ಚಿತ್ರ ನಿರ್ದೇಶನಕ್ಕೆ ಕೈ ಹಾಕಿದ್ದ ಜಿ ಆರ್ ವಿಧ, ಇದೀಗ ಹೊಸ ಟೀಂನೊಂದಿಗೆ ಗಾಂಧಿನಗರದಲ್ಲಿ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಇನ್ನೂ ಹೆಸರಿಡದ ಚಿತ್ರ ಲೋ ಬಡ್ಜೆಟ್ ನಲ್ಲಿ ತಯಾರಾಗುತ್ತಿದ್ದರೂ, ಚಿತ್ರದಲ್ಲಿನ ಹೂರಣಕ್ಕೇನು ಕಮ್ಮಿ ಮಾಡಿಲ್ಲವಂತೆ ನಿರ್ದೇಶಕರು.
ನೋಟ್ ಬ್ಯಾನ್ ಎಫೆಕ್ಟ್ ನಿಂದಾಗಿ ಉಗ್ರಾಕ್ಷ ಚಿತ್ರವನ್ನು ಅರ್ದಕ್ಕೆ ನಿಲ್ಲಿಸಿರುವ ನಿರ್ದೇಶಕ ಜಿ.ಆರ್ ವಿಧ, ಹೊಸ ಸಿನಿಮಾ ಮಾಡಲು ಹೊರಟ್ಟಿದ್ದು, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕತೆಯನ್ನು ಹೊಂದಿರುವ ಚಿತ್ರ ಎಂದು ತಮ್ಮ ಚಿತ್ರದ ಕುರಿತಂತೆ ಶಾರ್ಟ್ ಆಂಡ್ ಸ್ವೀಟ್ ಆಗಿ ತಿಳಿಸಿದ್ದಾರೆ.
ಚಿತ್ರ ನಿರ್ಮಾಣದ ಹೊಣೆಯನ್ನು ಇಡೀ ಚಿತ್ರತಂಡ ಹೊತ್ತುಕೊಂಡಿರುವುದು ಇದರ ಮತ್ತೊಂದು ವಿಶೇಷವಂತೆ. ಈಗಾಗಲೇ ಚಿತ್ರದ ಪ್ರಮೋಷನ್ ಹಾಡಿನ ಶೂಟಿಂಗ್ ಆರಂಭವಾಗಿದ್ದು, ಛಾಯಾಗ್ರಾಹಣ ಮುರಳಿ ಕೃಷ್ಣ ಮಾಡಿದರೆ, ಸಂಗೀತ ಪ್ರದೀಪ್ ವರ್ಮಾ ನೀಡಲಿದ್ದಾರೆ. ನಾಯಕನಾಗಿ ವಿರಾಟ್ ನಟಿಸಿದರೆ, ನಾಯಕಿಯಾಗಿ ಅರ್ಪಿತ ಗೌಡ ಬಣ್ಣಹಚ್ಚಿದ್ದಾರೆ.
Courtesy: Balkani News

Facebook Auto Publish Powered By : XYZScripts.com