ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಮತ್ತೋರ್ವ ಮಂಗಳೂರು ಸುಂದರಿ

ಐಶ್ವರ್ಯಾ ರೈ, ದೀಪಿಕಾ ಪಡುಕೋಣೆ ಮತ್ತು ಅನುಷ್ಕಾ ಶೆಟ್ಟಿ ಅವರಂತೆ ತನ್ಯಾ ಹೋಪ್ ಮಂಗಳೂರು ಮೂಲದವರು.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ತನ್ಯಾ ಹೋಪ್ 2015ರಲ್ಲಿ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಂತರ ತೆಲುಗು ಚಿತ್ರರಂಗಕ್ಕೆ 2016ರಲ್ಲಿ ಕಾಲಿಟ್ಟರು. ಕಳೆದ ವರ್ಷ ಕೂಡ ಇನ್ನೊಂದು ಸಿನಿಮಾದಲ್ಲಿ ನಟಿಸಿದರು. ಇದೀಗ ಉಪೇಂದ್ರ ನಟನೆಯ ಹೋಮ್ ಮಿನಿಸ್ಟರ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ.

ಸುಜಯ್ ಕೆ ಶ್ರೀಹರಿ ನಿರ್ದೇಶನದ ಕನ್ನಡ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಅಭಿನಯಿಸುತ್ತಿದ್ದೇನೆ. ಕನ್ನಡ ಮತ್ತು ತೆಲುಗು ಎರಡು ಭಾಷೆಗಳಲ್ಲಿ ಚಿತ್ರ ತಯಾರಾಗುತ್ತಿದೆ. ಇಲ್ಲಿ ಉಪೇಂದ್ರ ಮತ್ತು ವೇದಿಕಾ ಜೊತೆ ಅಭಿನಯಿಸುತ್ತಿದ್ದೇನೆ. ಶೂಟಿಂಗ್ ಆರಂಭವಾಗಿದೆ ಎಂದು ವಿವರಿಸುತ್ತಾರೆ ತನ್ಯಾ.

ಸುನಿಲ್ ಕುಮಾರ್ ದೇಸಾಯಿ ಅವರ ನಿರ್ದೇಶನದ ಉದ್ಗರ್ಶ ಚಿತ್ರದಲ್ಲಿ ಕೂಡ ಅಭಿನಯಿಸುತ್ತಿದ್ದಾರೆ ತಾನ್ಯಾ.

ಮಾಡೆಲ್ ಆಗಿ ನಟಿಯಾಗಿರುವ ತನ್ಯಾ, ಹೋಮ್ ಮಿನಿಸ್ಟರ್ ಚಿತ್ರದಲ್ಲಿ ಸ್ವತಂತ್ರ ಉದ್ಯೋಗಿ ಮಹಿಳೆಯಾಗಿ ಅಭಿನಯಿಸುತ್ತಿದ್ದಾರೆ. ಆರಂಭದಲ್ಲಿ ಉಪೇಂದ್ರ ಅವರ ಜೊತೆ ಅಭಿನಯಿಸಲು ಹಿಂಜರಿಕೆಯೆನಿಸಿತು. ನಂತರ ಅವರೇ ನನಗೆ ಧೈರ್ಯ ತುಂಬಿದರು. ಅವರೊಬ್ಬ ಉತ್ತಮ ವ್ಯಕ್ತಿ ಎನ್ನುತ್ತಾರೆ.

Facebook Auto Publish Powered By : XYZScripts.com