ಸ್ಯಾಂಡಲ್‌ವುಡ್ ನಿರ್ಮಾಪಕರ ನಡುವೆ ಮತ್ತೊಂದು ವಿವಾದ

ಸ್ಯಾಂಡಲ್‌ವುಡ್‌ನಲ್ಲಿ ಈಗ ಮತ್ತೊಂದು ವಿವಾದ ಭುಗಿಲೆದ್ದಿದೆ. ನಿರ್ಮಾಪಕರು ಹಾಗೂ ನಿರ್ಮಾಪಕರ ಸಂಘದ ನಡುವೆ ಎಲ್ಲವೂ ಸರಿ ಇಲ್ಲ ಅಂತ ಹೇಳಲಾಗ್ತಿದೆ. ಕನ್ನಡ ಚಲನಚಿತ್ರ ನಿರ್ಮಾಪಕ ಸಂಘದ ಕಾರ್ಯಕಾರಿ ಸಮಿತಿಯ ಅಧಿಕಾರಾವಧಿ ಮುಗಿದಿದ್ದರು, ಸಾಕಷ್ಟು ಬಾರಿ ನಿರ್ಮಾಪಕರು ಚುನಾವಣೆ ನಡೆಸುವಂತೆ ಕೇಳಿಕೊಂಡರೂ ಸಹ ಹಲವು ವರ್ಷಗಳಿಂದ ಚುನಾವಣೆ ನಡೆಸದೆ ವಿಳಂಬ ಮಾಡುತ್ತಿರುವುದಾಗಿ ಆರೋಪಿಸಿದ್ದಾರೆ.
ಇದರ ಜೊತೆಗೆ ಸಂಘದ ಬೈಲಾ ತಿದ್ದುಪಡಿಯನ್ನ ಕಾರ್ಯಾಕಾರಿ ಸಭೆಯಲ್ಲಾಗಲಿ ಅಥವಾ ಸರ್ವಸದಸ್ಯ ಸಭೆಯಲ್ಲಾಗಲಿ ಅನುಮೋದನೆ ಪಡೆಯದೆ ತಿದ್ದುಪಡಿ ಮಾಡಲಾಗಿದೆ ಹಾಗೂ ಸಂಘದ ವಾರ್ಷಿಕ ಲೆಕ್ಕ ಪರಿಶೋಧನೆ ಮಾಡಿಸಿಲ್ಲವೆಂದು ಆರೋಪಿಸಿ ನಿರ್ಮಾಪಕರಾದ ಬಾ ಮಾ ಹರೀಶ್ ಹಾಗೂ ಅವರ ಸಂಗಡಿಗರು ಸಂಘಗಳ ಜಿಲ್ಲಾ ನೋಂದಣಿ ಅಧಿಕಾರಿಗೆ ದೂರು ನೀಡಿದ್ರು.
ಈ ಕುರಿತಂತೆ ಈಗ ಜಿಲ್ಲಾ ನೋಂದಣಾಧಿಕಾರಿ ನಿರ್ಮಾಪಕರ ಸಂಘಕ್ಕೆ ನೋಟಿಸ್ ಜಾರಿಮಾಡಿದೆ. ಇನ್ನು ನೋಟಿಸ್ ತಲುಪಿದ 15 ದಿನಗಳೊಳಗೆ ಕಚೇರಿಗೆ ಹಾಜರಾಗಾಬೇಕು. ತಪ್ಪಿದ್ದಲ್ಲಿ ಸಂಘದ ನೋಂದಣಿ ಕಾಯ್ದೆ 1960ರ ಅನ್ವಯ ಕ್ರಮ ಕೈಗೊಳ್ಳೋದಾಗಿ ಎಚ್ಚರಿಕೆ ನೀಡಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ನಿರ್ಮಾಪಕರ ಸಂಘದ ನಡೆ ಏನು ಅನ್ನೋದು ಕುತೂಹಲ ಮೂಡಿಸಿದೆ.
Source: Balkani News

Leave a Reply

Your email address will not be published.

Facebook Auto Publish Powered By : XYZScripts.com