ಸ್ನೇಹಿತರಿಂದಲೇ ಕನ್ನಡ ಚಿತ್ರನಟಿಗೆ ಲೈಂಗಿಕ ಕಿರುಕುಳ.!

ಚಿತ್ರನಟಿಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳು ದಿನೇ ದಿನೇ ಜಾಸ್ತಿಯಾಗುತ್ತಿವೆ. ಇತ್ತೀಚೆಗಷ್ಟೆ ನಟಿ, ನಿರೂಪಕಿ ಶೀತಲ್ ಶೆಟ್ಟಿಗೆ ಯುವಕನೊಬ್ಬ ಫೇಸ್ ಬುಕ್ ನಲ್ಲಿ ಅಸಹ್ಯಕರ ಸಂದೇಶ ಕಳುಹಿಸಿದ್ದ ಪ್ರಕರಣ ಸುದ್ದಿ ಮಾಡಿತ್ತು. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಕನ್ನಡ ಚಿತ್ರ ನಟಿಯೊಬ್ಬರಿಗೆ ಸ್ನೇಹಿತರೇ ಲೈಂಗಿಕ ಕಿರುಕುಳ ನೀಡಿದ್ದಾರೆ.

ಯುವ ನಟಿಯ ಕೈಯನ್ನು ಎಳೆದ ಇಬ್ಬರು ಪುಂಡರು ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಆ ನಟಿ ರಾಜಗೋಪಾಲನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಹೆಚ್ಚಿನ ಮಾಹಿತಿ ಇಲ್ಲಿದೆ. ಓದಿರಿ….

ಚಿತ್ರನಟಿಯೊಬ್ಬರ ಮೇಲೆ ಸಚಿನ್ ಮತ್ತು ಪ್ರವೀಣ್ ಎಂಬುವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ರಸ್ತೆಯಲ್ಲಿ ನಟಿಯ ಕೈಯನ್ನು ಹಿಡಿದು, ಎಳೆದಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಲು ಮುಂದಾಗಿದ್ದರಂತೆ.

ಬೆಂಗಳೂರಿನ ಹೆಗ್ಗನಹಳ್ಳಿ ಬಳಿ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ 7 ಗಂಟೆ ಸುಮಾರಿಗೆ ಶೂಟಿಂಗ್ ಮುಗಿಸಿಕೊಂಡು ಬರುತಿದ್ದ ಯುವ ನಟಿಗೆ ಕಿಡಿಗೇಡಿಗಳು ಕಿರುಕುಳ ನೀಡಿದ್ದಾರೆ.

ಚಿತ್ರನಟಿಗೆ ಸಚಿನ್ ಮತ್ತು ಪ್ರವೀಣ್ ಸ್ನೇಹಿತರು. ಕಳೆದ 3 ವರ್ಷಗಳಿಂದ ಇವರೆಲ್ಲ ಸ್ನೇಹಿತರಾಗಿದ್ದು, ದುಡ್ಡಿನ ವಿಚಾರಕ್ಕೆ ಕಿತ್ತಾಟ ಶುರುವಾಗಿದೆ ಎಂದು ತಿಳಿದು ಬಂದಿದೆ.

ಪ್ರಕರಣದ ಬಗ್ಗೆ ಸುದ್ದಿವಾಹಿನಿಗಳಿಗೆ ಹೇಳಿಕೆ ನೀಡಿರುವ ಚಿತ್ರನಟಿ, ”2 ವರ್ಷಗಳಿಂದ ಸಚಿನ್ ಮತ್ತು ಪ್ರವೀಣ್ ತೊಂದರೆ ಕೊಡುತ್ತಿದ್ದರು. ಇಬ್ಬರು ಸಹ ಫೋನ್ ಮಾಡಿ ಹಿಂಸೆ ನೀಡುತ್ತಿದ್ದರು. ಇಷ್ಟು ದಿನ ಸುಮ್ಮನಿದ್ದೆ. ಆದ್ರೆ, ನಿನ್ನೆ ನನ್ನ ಮೇಲೆ ಹಲ್ಲೆ ಮಾಡುವುದಕ್ಕೆ ಮುಂದಾಗಿದ್ದ ಕಾರಣ ಪೊಲೀಸ್ ಠಾಣೆಗೆ ದೂರು ನೀಡಿದೆ” ಎಂದು ತಿಳಿಸಿದ್ದಾರೆ.

”ಈ ಘಟನೆಯಿಂದ ನಾನು ತುಂಬ ನೊಂದಿದ್ದೇನೆ. ಈ ಘಟನೆಯ ಬಳಿಕ ನಿನ್ನೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದೆ. ಅದ್ರೇ ಕುಟುಂಬ ಮತ್ತು ಸ್ನೇಹಿತರು ಧೈರ್ಯ ತುಂಬಿದರು” ಎನ್ನುತ್ತಾರೆ ಆ ನಟಿ.

ಈಗಾಗಲೇ ಪ್ರಕರಣವನ್ನ ದಾಖಲು ಮಾಡಿಕೊಂಡಿರುವ ರಾಜಗೋಪಾಲನಗರ ಠಾಣೆಯ ಪೊಲೀಸರು ಎಫ್.ಐ.ಆರ್ ಹಾಕಿದ್ದಾರೆ. ಮುಂದೆ ಆರೋಪಿಗಳನ್ನ ಕರೆಸಿ ವಿಚಾರಣೆ ನಡೆಸುತ್ತಾರಂತೆ.

Courtesy: Filmybeat

Facebook Auto Publish Powered By : XYZScripts.com