ಸ್ಕಿನ್ ವೈಟನಿಂಗ್ ಗೆ ‘ಕಡಲೆಹಿಟ್ಟಿ’ನ ಫೇಸ್ ಪ್ಯಾಕ್

ಯುವಕರಾಗಲಿ, ಯುವತಿಯರಾಗಲಿ ಪ್ರತಿಯೊಬ್ಬರು ಫೇರ್ ಸ್ಕಿನ್ ಇರಬೇಕೆಂದು ಬಯಸುವವರೇ…ಅದರಲ್ಲೂ ಸ್ಕಿನ್ ವೈಟನಿಂಗ್ ಗೆ ಉಪಯೋಗಿಸದ ಕ್ರೀಮ್ ಗಳಿಲ್ಲ, ಫೇಶಿಯಲ್ ಗಳಿಲ್ಲ. ಈಗಂತೂ ಆನ್ ಲೈನ್ ನಲ್ಲಿ, ಕಾಸ್ಮೆಟಿಕ್ಸ್ ಶಾಪ್ ಗಲ್ಲಿ ನಾನಾ ನಮೂನೆಯ ಸ್ಕಿನ್ ವೈಟನಿಂಗ್ ಸೋಪುಗಳು, ಕ್ರೀಮ್ ಗಳು, ಕಾಂಪ್ಯಾಕ್ಟ್ ಪೌಡರ್ ಗಳು ಬಂದಿವೆ. ಆದರೆ ಅದನ್ನೆಲ್ಲಾ ಉಪಯೋಗಿಸಿ ಕೊನೆಗೆ ಯಾವುದೇ ತರಹದ ಒಳ್ಳೆಯ ಫಲಿತಾಂಶ ಕಂಡುಬರಲಿಲ್ಲವೆಂದರೆ ಬೇಸರವಾಗುವುದು ನಮಗೆ. ಅದಕ್ಕೆ ಖರ್ಚಿಲ್ಲದಂತೆ, ನಿಮ್ಮ ಕೈಗೆಟುಕುವ ಮೆಡಿಸಿನ್ ಉಪಯೋಗಿಸಿದರೆ ಉತ್ತಮ ಫಲಿತಾಂಶ ಪಡೆಯುವುದರ ಜೊತೆಗೆ ಫೇರ್ ಸ್ಕಿನ್ ಹೊಂದಬಹುದು. ಹೌದು, ‘ಕಡಲೆಹಿಟ್ಟು’ ಹೆಚ್ಚು ಖರ್ಚಿಲ್ಲದ, ಮನೆಯಲ್ಲೇ ಸುಲಭವಾಗಿ ಸಿಗುವ ಹಿಟ್ಟಾಗಿದ್ದು, ಸ್ಕಿನ್ ವೈಟನಿಂಗ್ ಗೆ ಬೆಸ್ಟ್ ಫೇಸ್ ಪ್ಯಾಕ್ ಆಗಿದೆ. ಇದನ್ನು ಉಪಯೋಗಿಸುವುದರಿಂದ ಒಂದಲ್ಲ, ಹತ್ತಾರು ಪ್ರಯೋಜನಗಳನ್ನೂ ಕೂಡ ಪಡೆಯಬಹುದಾಗಿದೆ. ಇಲ್ಲಿ ಕಡಲೆಹಿಟ್ಟನ್ನು ಸ್ಕಿನ್ ವೈಟನಿಂಗ್ ಆಗಿ ಹೇಗೆ ಬಳಸಬಹುದು ಎಂದು ಕೊಡಲಾಗಿದೆ.
ಫೇಸ್ ಪ್ಯಾಕ್ ಗೆ ಏನೆಲ್ಲಾ ಬೇಕು?
4 ಬಾದಾಮಿ (ಪೌಡರ್ ಮಾಡಿಕೊಳ್ಳಿ)
1 ಟೇಬಲ್ ಸ್ಪೂನ್ ಹಾಲು
½ ಟೀ ಸ್ಪೂನ್ ನಿಂಬೆಹಣ್ಣಿನ ರಸ
1 ಟೀ ಸ್ಪೂನ್ ಕಡಲೆಹಿಟ್ಟು
ಬಳಸುವುದು ಹೇಗೆ ?
ಮೇಲೆ ಹೇಳಿರುವ ಎಲ್ಲಾ ಪದಾರ್ಥಗಳನ್ನು ಬಳಸಿಕೊಂಡು ಗಟ್ಟಿಯಾದ ಪೇಸ್ಟ್ ಮಾಡಿಕೊಳ್ಳಿ.
ಒಂದು ವೇಳೆ ಪೇಸ್ಟ್ ಗಟ್ಟಿಯಾದರೆ ಸ್ವಲ್ಪ ಹಾಲು ಉಪಯೋಗಿಸಿ.
ಈ ಪೇಸ್ಟ್ ಅನ್ನು ಮುಖ ಹಾಗೂ ಕುತ್ತಿಗೆಗೆ  ಹಚ್ಚಿ 30 ನಿಮಿಷಗಳ ಕಾಲ ಹಾಗೆ ಬಿಡಿ.
ನಂತರ ತಣ್ಣೀರಿನಲ್ಲಿ ಮುಖ ತೊಳೆಯಿರಿ.
ಇದು ಹೇಗೆ ಕೆಲಸ ಮಾಡುತ್ತದೆ?
ಕಡಲೆಹಿಟ್ಟು ಕೂಡ ನ್ಯಾಚುರಲ್ ಕ್ಲೆನ್ಸರ್ ಆಗಿರುವುದರಿಂದ ಇದು ಮುಖದ ಆಳದಲ್ಲಿ ಅಡಗಿರುವ ಕೊಳೆಯನ್ನು ಹೊರತೆಗೆಯುತ್ತದೆ. ಬಾದಾಮಿಯಲ್ಲಿ ವಿಟಮಿನ್ ಗಳು, ಮಿನರಲ್ಸ್ ಇರುವುದರಿಂದ ತ್ವಚೆ ಸುಕ್ಕುಗಟ್ಟದಂತೆ ತಡೆದು, ಡಾರ್ಕ್ ಸರ್ಕಲ್ ಆಗದಂತೆ ತಡೆಯುತ್ತದೆ. ನಿಂಬೆಹಣ್ಣು ಬ್ಲೀಚಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ. ಇನ್ನು ಹಾಲು ತ್ವಚೆ ಶುಷ್ಕಗೊಳ್ಳದಂತೆ ತಡೆದು, ಮೃದುಗೊಳಿಸುತ್ತದೆ.
ಮುನ್ನೆಚ್ಚರಿಕೆ:
ಮೇಲೆ ಹೇಳಿರುವ ಎಲ್ಲಾ ಪದಾರ್ಥಗಳು ಮನೆ ಮದ್ದಾಗಿದ್ದರೂ ಕೆಲವರ ಸ್ಕಿನ್ ಗೆ ಸೂಟ್ ಆಗುವುದಿಲ್ಲ. ಅದಕ್ಕೆ ಒಮ್ಮೆ ಪ್ಯಾಚ್ ಟೆಸ್ಟ್ ಮಾಡಿ ನಂತರ ಬಳಸಿ.
Courtesy: Balkani News

Facebook Auto Publish Powered By : XYZScripts.com