‘ಸೈರಾಟ್’​ ಸುಂದರಿಗೆ ಹುಚ್ಚು ಪ್ರೇಮಿಯಾದ ಖ್ಯಾತ ವಿಲನ್​​ ಪುತ್ರ!​​

ಭಾರತೀಯ ಚಿತ್ರರಂಗದಲ್ಲೇ ಸಂಚಲನ ಮೂಡಿಸಿದ ಸಿನಿಮಾ ಸೈರಾಟ್. ಮರಾಠಿಯಲ್ಲಿ ಪ್ರೀತಿ-ಪ್ರೇಮದ ಈ ಚಿತ್ರಕ್ಕೆ ಖರ್ಚಾಗಿದ್ದು 4 ಕೋಟಿ. ಆದ್ರೆ ಸಿನಿಮಾಗಳಿಸಿದ್ದು ನೂರು ಕೋಟಿ. ಮರಾಠಿ ಚಿತ್ರರಂಗದಲ್ಲಿ ಈ ಪರಿ ಕಮರ್ಷಿಯಲಿ ಹಿಟ್ ಆದ ಮೊದಲ ಸಿನಿಮಾ ಇದು. ಇದೀಗ ಸೌತ್ನ ನಾಲ್ಕು ಭಾಷೆಗಳಿಗೂ ಚಿತ್ರವನ್ನು ರಿಮೇಕ್ ಮಾಡಲಾಗ್ತಿದೆ.
ಚಿತ್ರದ ರಿಮೇಕ್ ಹಕ್ಕನ್ನು ರಾಕ್ಲೈನ್ ವೆಂಕಟೇಶ್ ಖರೀದಿಸಿದ್ದು ,ಸ್ಯಾಂಡಲ್ವುಡ್ನಲ್ಲಿ ಎಸ್ ನಾರಾಯಣ್ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದೀಗ ಸಿನಿಮಾದ ಶೂಟಿಂಗ್ ಶುರುವಾಗಿದೆ. ಮರಾಠಿಯಲ್ಲಿ ಸಿನಿಮಾದ ಪ್ರಮುಖ ಆಕರ್ಷಣೆಯಾಗಿದ್ದ ರಿಂಕು ಕನ್ನಡದಲ್ಲೂ ಬಣ್ಣ ಹಚ್ಚಿದ್ದಾಳೆ.
ಅಂದಹಾಗೆ ಚಿತ್ರದ ನಾಯಕ ನಟನ ಪಾತ್ರಕ್ಕೆ ಸುಮಾರು 7 ಸಾವಿರ ಎಪ್ಲಿಕೇಶನ್ ಬಂದಿತ್ತು. ಇದೀಗ ನಾಯಕ ನಟನ ಆಯ್ಕೆಯಾಗಿದ್ದು ಚಿತ್ರದ ಶೂಟಿಂಗ್ ಶುರುವಾಗಿದೆ. ಇದೇ ಮೊದಲ ಬಾರಿ ಚಿತ್ರದ ನಾಯಕ ನಟನ ಫೋಟೋ ಬಾಲ್ಕಲಿನ್ಯೂಸ್ಗೆ ಸಿಕ್ಕಿದೆ. ಅಂದಹಾಗೆ ಸೈರಾಟ್ ಈ ಚಿಗರು ಮೀಸೆಯ ಹುಡ್ಗ ನಟಿಸುತ್ತಿರುವ ಚೊಚ್ಚಲ ಸಿನಿಮಾ. ಆದ್ರೆ ಈ ಹುಡ್ಗನಿಗೆ ಸಿನಿಮಾ ನಂಟು ರಕ್ತದಲ್ಲೇ ಇದೆ. ಯಾಕಂದ್ರೆ ಸೈರಾಟ್ ಚಿತ್ರದ ಈ ಹುಚ್ಚುಪ್ರೇಮಿ ಯಾರು ಗೊತ್ತಾ? ದಕ್ಷಿಣದ ಭಾರತದ ಖ್ಯಾತ ಖಳನಟ ಸತ್ಯಪ್ರಕಾಶ್ ಮಗ.
ಅಂದಹಾಗೆ ಸಿನಿಮಾದ ಟೈಟಲ್ ಇನ್ನೂ ಫೈನಲ್ ಆಗಿಲ್ಲ. ಈ ಬಗ್ಗೆ ಸಿನಿಮಾ ತಂಡದ ಮಧ್ಯೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ನಿರ್ದೇಶಕ ಎಸ್ ನಾರಾಯಣ್ ಸಾಕಷ್ಟು ಟೈಟಲ್ಗಳನ್ನು ಬರೆದಿಟ್ಟಿದ್ದಾರೆ. ಇದೇ 27ರಂದು ಟೈಟಲ್ ಲಾಂಚ್ ಆಗಲಿದೆ. ಒಟ್ನಲ್ಲಿ ಕನ್ನಡದ ಸೈರಾಟ್ಗೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ನಿರ್ದೇಶಕ ಎಸ್ ನಾರಾಯಣ್ ಮತ್ತು ತಂಡ ಭಾರೀ ಸಿದ್ದತೆ ನಡೆಸಿ ಶೂಟಿಂಗ್ ಆರಂಭಿಸಿದ್ದಾರೆ. ಕನ್ನಡದಲ್ಲೂ ಈ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಾಣುತ್ತೆ ಅನ್ನೋದು ಚಿತ್ರತಂಡದ ವಿಶ್ವಾಸ.
Source: Balkani News

Leave a Reply

Your email address will not be published.

Facebook Auto Publish Powered By : XYZScripts.com