ಸೈಕಲ್ ಇರುವವನ ಬಳಿಯೂ ಹೃದಯ ಇರುತ್ತೆ, ಹೀಗಂದಿದ್ದು ಯಾರು ಗೊತ್ತಾ?

ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಕೆಲವು ದಿನಗಳಿಂದ ಸಖತ್ ಸೈಲೆಂಟ್ ಆಗಿದ್ದರು. ಆದರೆ ಓ ಪ್ರೇಮವೇ ಸಿನಿಮಾ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಓ ಪ್ರೇಮವೇ ನವ ನಿರ್ದೇಶಕ ಮನೋಜ್ ನಿರ್ದೇಶನದ ಸಿನಿಮಾ. ಚಿತ್ರದಲ್ಲಿ ನಿಕ್ಕಿ ಗರ್ಲಾನಿ ಹಾಗೂ ಅಪೂರ್ವ, ಹುಚ್ಚ ವೆಂಕಟ್ ಇನ್ನೂ ಅನೇಕರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಓ ಪ್ರೇಮವೇ ಸಿನಿಮಾದಲ್ಲಿ ಗೆಸ್ಟ್ ಅಪೀರಿಯನ್ಸ್ ನಲ್ಲಿ ಕಾಣಿಸಿಕೊಂಡಿರುವ ಹುಚ್ಚ ವೆಂಕಟ್ ‘ಸೈಕಲ್ ಇರುವವನ ಬಳಿಯೂ ಹೃದಯ ಇರುತ್ತೆ. ಪ್ರೀತಿಯಲ್ಲಿ ಯಾವತ್ತು ಗೊಂದಲ ಇರಬಾರದು’ ಎಂದು ಡೈಲಾಗ್ ಹೇಳಿದ್ದಾರೆ.

ಫೆಬ್ರವರಿ ತಿಂಗಳು ಬಂತು ಅಂದರೆ ಅದೆಷ್ಟೋ ಪ್ರೇಮಿಗಳು 14ನೇ ತಾರೀಖು ಯಾವಾಗ ಬರುತ್ತೆ ಅಂತ ಕಾಯುತ್ತಿರುತ್ತಾರೆ. ವಿಶ್ವವೇ ಆಚರಣೆ ಮಾಡುವ ಪ್ರೇಮಿಗಳ ದಿನಕ್ಕೆ ಸಿನಿಮಾರಂಗದಿಂದ ಸ್ಪೆಷಲ್ ಗಿಫ್ಟ್ ಅಭಿಮಾನಿಗಳಿಗೆ ಸಿಗುತ್ತಿದೆ

ಚಂದನವನದ ಚಾಲೆಂಜಿಂಗ್ ಸ್ಟಾರ್ ಹಾಗೂ ಫೈರಿಂಗ್ ಸ್ಟಾರ್ ಪ್ರೇಮಿಗಳಿಗೆ ಸಂದೇಶವನ್ನು ಕೊಟ್ಟಿದ್ದಾರೆ. ಸಾಕಷ್ಟು ದಿನಗಳಿಂದ ಸುದ್ದಿಯೇ ಇಲ್ಲದೆ ಸೈಲೆಂಟ್ ಆಗಿದ್ದ ಹುಚ್ಚ ವೆಂಕಟ್ ಮತ್ತೆ ತೆರೆ ಮೇಲೆ ಬಂದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಪ್ರೇಮಿಗಳ ದಿನಕ್ಕೆ ಸಿನಿ ಅಭಿಮಾನಿಗಳಿಗೆ ಸಣ್ಣದೊಂದು ಉಡುಗೊರೆ ನೀಡಿದ್ದಾರೆ. ಇನ್ನೆರಡು ದಿನಗಳು ಕಳೆದರೆ ಎಲ್ಲೆಡೆ ಪ್ರೇಮಿಗಳ ದಿನಾಚರಣೆಯನ್ನ ಆಚರಣೆ ಮಾಡುತ್ತಾರೆ. ಇದೇ ಸಂದರ್ಭದಲ್ಲಿ ನಟ ದರ್ಶನ್ ಅಭಿಮಾನಿಗಳಿಗಾಗಿ ಓ ಪ್ರೇಮವೇ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದಾರೆ. ಉತ್ತಮ ಸಂದೇಶವಿರುವ ಸಿನಿಮಾಗೆ ಪ್ರೋತ್ಸಾಹ ನೀಡಿ ಎಂದಿದ್ದಾರೆ.

Facebook Auto Publish Powered By : XYZScripts.com