ಸೆಟ್ಟೇರಿತು ಕಾಶೀನಾಥ್ ರ 50 ನೇ ಸಿನಿಮಾ: ಬೇಜಾನ್ ಸುಳ್ಳು ಹೇಳ್ತಾರಂತೆ ಮುನಿಸ್ವಾಮಿ!

ಕಾಶೀನಾಥ್ ಎಂಬ ಹೆಸರು ಕೇಳಿದೊಡನೆ ಬಹಳ ವಿಭಿನ್ನವಾದ ಮ್ಯಾನರಿಸಂ ನಮ್ಮ ಕಣ್ಮುಂದೆ ಹಾದು ಹೋಗುತ್ತದೆ. ಇತ್ತೀಚಿಗೆ ಜೂಮ್ ಸಿನಿಮಾದಲ್ಲಿ ಕಾಶೀನಾಥ್ ವಿಶೇಷ ಪಾತ್ರ ಮಾಡಿ ಹಾಸ್ಯದ ಕಚಗುಳಿ ಇಟ್ಟಿದ್ದರು. ನಂತರ ದ್ವಾರಕೀಶ್ ಅವರ ಬ್ಯಾನರ್ ನಡಿ ನಿರ್ಮಾಣಗೊಂಡ ಚೌಕ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡರು. ನಂತರ ಇದೀಗ ಕಾಶಿನಾಥ್ ತಮ್ಮ 50 ಸಿನಿಮಾದಲ್ಲಿ ನಟಿಸೋಕೆ ರೆಡಿಯಾಗ್ತಿದ್ದಾರೆ.

ಯೆಸ್..ಕಾಶೀನಾಥ್ ಅವರು ತಮ್ಮ 50 ನೇ ಸಿನಿಮಾದಲ್ಲಿ ವಿಶೇಷ ಪಾತ್ರವೊಂದನ್ನು ಮಾಡಲಿದ್ದು, ಚಿತ್ರಕ್ಕೆ ಓಳ್ ಮುನಿಸ್ವಾಮಿ ಎಂಬ ಟೈಟಲ್ ಫಿಕ್ಸ್ ಆಗಿದೆ. ಕಾಶೀನಾಥ್ ಇದ್ದಾರೆ ಅಂದ್ರೆ ಅದೊಂದು ಪಕ್ಕಾ ಕಾಮಿಡಿ ಸಿನಿಮಾ ಆಗಿರೋದ್ರಲ್ಲಿ ನೋ ಡೌಟ್.

ಸಿನಿಮಾ ಈಗಾಗಲೇ ಸೆಟ್ಟೇರಿದ್ದು, ಈ ಸಿನಿಮಾದಲ್ಲಿ ಮುನಿಸ್ವಾಮಿ ಪಾತ್ರವನ್ನು ಕಾಶೀನಾಥ್ ಮಾಡಲಿದ್ದಾರೆ. ಚಿತ್ರದಲ್ಲಿ ಕಾಶೀನಾಥ್ ಬೇಜಾನ್ ಸುಳ್ಳು ಹೇಳುವ ಪಾತ್ರ ಮಾಡ್ತಾ ಇದ್ದಾರಂತೆ. ಈ ಸಿನಿಮಾಕ್ಕೆ ನಿರ್ದೇಶಕ ಆನಂದ್ ಪ್ರಿಯ ಆಯಕ್ಷನ್ ಕಟ್ ಹೇಳ್ತಿದ್ದು, ಜಲ್ಸಾ ಸಿನಿಮಾದ ನಾಯಕ ನಿರಂಜನ್ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಅಖಿಲಾ ಎನ್ನುವ ಹೊಸ ಪ್ರತಿಭೆ ಕಾಣಿಸಿಕೊಳ್ತಾ ಇದ್ದಾರೆ. ಇದೊಂದು ಸಮಾಜದ ವಿಡಂಬನಾತ್ಮಕ, ಭಾವನೆಗಳ ತೊಳಲಾಟದ ಜೊತೆಗೆ ದೇವರು, ನಂಬಿಕೆ, ಪ್ರೀತಿ ಬದುಕಿನ ಕಥೆಯನ್ನ ಹೊಂದಿದೆಯಂತೆ.

ಈಗಾಗಲೇ ಸಿನಿಮಾದ ಪೂಜೆ ನೆರವೇರಿದ್ದು, ಮೇ 3 ರಿಂದ 30 ದಿನ ಶೂಟಿಂಗ್ ನಡೆಯಲಿದೆಯಂತೆ. ಮೂಡಿಗೆರೆ, ಚಿಕ್ಕಮಗಳೂರು ಸೇರಿದಂತೆ ಅನೇಕ ಕಡೆ ಶೂಟಿಂಗ್ ನಡೆಸಲಿದೆಯಂತೆ ಚಿತ್ರತಂಡ.

Courtesy: Kannada News Now

Facebook Auto Publish Powered By : XYZScripts.com