ಸೆಟ್ಟೇರಲಿದೆ ಕಿಚ್ಚನ ಕೋಟಿಗೊಬ್ಬ 3 ಸಿನಿಮಾ … ಇಲ್ಲಿದೆ ಮಾಹಿತಿ

ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಕಿಚ್ಚ ಸುದೀಪ್ ಬ್ರೇಕ್ ತೆಗೆದುಕೊಳ್ಳದೆ ಕೆಲಸ ಮಾಡುತ್ತಿದ್ದಾರೆ. ವಿಲ್ಲನ್ ಸಿನಿಮಾ ನಂತರ, ಪೈಲ್ವಾನ್ ಮತ್ತು ಕೋಟಿಗೊಬ್ಬ3 ಸಿನಿಮಾಗಳಲ್ಲಿ ಕೆಲಸ ಮಾಡುವುದಾಗಿ ಸ್ಪಷ್ಟ ಪಡಿಸಿದ್ದಾರೆ.

ಕೃಷ್ಣ ನಿರ್ದೇಶನದ ಪೈಲ್ವಾನ್ ಸಿನಿಮಾದಲ್ಲಿ ಬ್ಯುಸಿಯಾಗಿರುವ ಸುದೀಪ್, ಸೂರಪ್ಪ ಬಾಬು ಅವರ ನಿರ್ಮಾಣದ ಕೋಟಿಗೊಬ್ಬ ಸಿನಿಮಾ ಮುಹೂರ್ತಕ್ಕೆ ಸಿದ್ದವಾಗಿದ್ದಾರೆ, ಮಾರ್ಚ್ 2 ರಂದು ಕೋಟಿಗೊಬ್ಬ-3 ಸಿನಿಮಾಗೆ ಚಾಲನೆ ನೀಡಲಾಗುವುದು.

ಇದೊಂದು ಶುಭದಿನ, ಹೀಗಾಗಿ ಅಂದೇ ಸಿನಿಮಾ ಮೂಹೂರ್ಥ ನಡೆಸಲು ನಾವು ನಿರ್ಧರಿಸಿದ್ದು ಪೂಜೆಯೊಂದಿಗೆ ಕೆಲಸ ಆರಂಭಿಸಲಿದ್ದೇವೆ ಜೊತೆಗೆ ಸಾಂಗ್ ರೆಕಾರ್ಡಿಂಗ್ ಕೂಡ ಆರಂಭಿಸಲಿದ್ದೇವೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಸೂರಪ್ಪ ಬಾಬು ಈ ಮೊದಲು ಕೋಟಿಗೊಬ್ಬ-2 ಸಿನಿಮಾ ನಿರ್ಮಿಸಿದ್ದರು. ಇದು ಕನ್ನಡ ಮತ್ತು ತಮಿಳು ಬಾಶಷೆಗಳಲ್ಲಿ ತೆರೆ ಕಂಡಿತ್ತು.

ಕೋಟಿಗೊಬ್ಬ-3 ಸಿನಿಮಾವನ್ನು ಶಿವಕಾರ್ತಿಕ್ ನಿರ್ದೇಶಿಸುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲಿರುವ ಅವರು ಚಿತ್ರಕಥೆ ಬರೆಯತ್ತಿದ್ದಾರೆ. ಇದೊಂದು ಸಂಪೂರ್ಣ ಮನರಂಜನೆಯ ಸಿನಿಮಾವಾಗಿದೆ.

Facebook Auto Publish Powered By : XYZScripts.com