ಸೂರಿ ನಿರ್ದೇಶನದ ಟಗರು- 2 ದಲ್ಲಿ ಶಿವಣ್ಣ-ದರ್ಶನ ಜೊತೆಯಾಗಿ ನಟಿಸಲಿದ್ದಾರೆ?… ಇಲ್ಲಿ ಓದಿ

ಬಹುಶಃ ಇಂಥಹದೊಂದು ಸುದ್ದಿ ಗಾಂಧಿನಗರದ ತುಂಬೆಲ್ಲಾ ಓಡಾಡುತ್ತಿದೆ. ಟಗರು ಚಿತ್ರದ ಯಶಸ್ಸಿನ ನಂತರ ಟಗರು-2 ಗೆ ಚಾಲನೆ ಸಿಗಲಿದೆ. ಈಗಾಗಲೇ ಟಗರು ಸಿನಿಮಾ ಬಾಕ್ಸ್ ಆಫೀಸ್ ಮ್ಲಲಿ ಹಿಟ್ ಆಗಿದ್ದು ಭರ್ಜರಿ ಸೌಂಡ್ ಮಾಡುತ್ತಿದೆ. ಟಗರು ಶಿವ, ಡಾಲಿ, ಕಾಕ್ರೋಚ್, ಅಂಕಲ್, ಚಿಟ್ಟೆ ಪಾತ್ರಗಳ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಇದೀಗ ಬಂದ ಮಾಹಿತಿಯ ಪ್ರಕಾರ ದರ್ಶನ್, ಟಗರು-2 ದಲ್ಲಿ ಅಭಿನಯಿಸಲಿದ್ದಾರೆ.

ಈಗಾಗಲೇ ಟಗರು ಚಿತ್ರ ಗೆದ್ದ ಖುಷಿಯ ಬಗ್ಗೆ ಶಿವಣ್ಣ ಆಯಂಡ್ ಕರ್ನಾಟಕದ ಕೆಲ ಚಿತ್ರಮಂದಿರಗಳನ್ನು ಭೇಟಿ ಮಾಡಿತ್ತು. ಮತ್ತು ನಿರ್ದೇಶಕ ಸೂರಿ ದರ್ಶನ್ ರ ಯಾವ ಸಿನಿಮಾವನ್ನೂ ಇದುವೆರಗೂ ಮಾಡಿರಲಿಲ್ಲ. ಈಗ ಅವರಿಗಾಗಿ ಸ್ಕ್ರೀಪ್ಟ್ ನಡೆಯುತ್ತಿದ್ದು, ಸದ್ಯದಲ್ಲಿಯೇ ಸಿನಿಮಾ ಮಾಡಲಿದ್ದಾರೆ ಸೂರಿ. ಆದರೆ ಇದು ಟಗರು-2 ಗಾಗಿಯೇ ಎಂಬುದು ಇನ್ನೂ ತಿಳಿದು ಬಂದಿಲ್ಲ.

‘ದೇವರ ಮಗ’ ಚಿತ್ರದಲ್ಲಿ ಶಿವಣ್ಣ ನ ಜೊತೆ ದರ್ಶನ್ ಪೋಷಕ ಪಾತ್ರದಲ್ಲಿ ಆಯಕ್ಟ ಮಾಡಿದ್ದರು ಆದರೆ ಆಗಿನ್ನು ಅವರು ಹೀರೋ ಆಗಿರಲಿಲ್ಲ. ಒಂದು ವೇಳೆ ಇಬ್ಬರೂ ಒಟ್ಟಿಗೆ ಅಭಿನಯಿಸುತ್ತಾರೆ ಎಂದರೆ ಅಭಿಮಾನಿಗಳಿಗೆ ಇದಕ್ಕಿಂತ ಸಂತಸ ಯಾವುದಿದೆ. ಆದರೆ ಇನ್ನೂ ಅಧಿಕೃತವಾಗಿ ಟಗರು-2 ಬಗ್ಗೆ ಯಾವುದೇ ಮಾಹಿತಿ ಹೊರ ಬಂದಿಲ್ಲ. ಆದರೆ ಟಗರು-2 ಯಾವಾಗ ಬರುತ್ತದೆ, ಹೇಗಿರುತ್ತದೆ ಎಂಬುದರ ಬಗ್ಗೆ ಸೂರಿ ಮಾಹಿತಿ ಬಿಟ್ಟು ಕೊಟ್ಟಿಲ್ಲ.

Facebook Auto Publish Powered By : XYZScripts.com