ಸುಳ್ಳು ಹೇಳಿದ ರಾಜಮೌಳಿ, ಅಂದು ಕನ್ನಡವೇ ಬರೋಲ್ಲ ಅಂದ್ರು, ಇಂದು ?

ನಿಮಗೆ ಕೆಲ ದಿವಸಗಳ ಹಿಂದೆ ನಿರ್ದೇಶಕ ರಾಜಮೌಳಿ ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ಆಂಕರ್ ಒಂದು ಪ್ರಶ್ನೆ ಕೇಳಿದ್ದು ನೆನಪಿದ್ಯ? ಅದಕ್ಕೆ ರಾಜಮೌಳಿ ಹೇಳಿದ್ದು ಏನು ಗೊತ್ತಾ? ನನಗೆ ಕನ್ನಡ ಅರ್ಥ ಆಗೋಲ್ಲ, ಇನ್ನು ಮಾತನಾಡೋಕಂತೂ ಬರೋದೇ ಇಲ್ಲ ಎಂದಿದ್ದರು.

ಆದ್ರೆ ಇಂದು ಕಟ್ಟಪ್ಪ ಸತ್ಯರಾಜ್ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿರುವ ರಾಜಮೌಳಿ, ಚಿತ್ರ ಬಿಡುಗಡೆಗೆ ಸಹಕರಿಸುವಂತೆ ಕನ್ನಡಿಗರಲ್ಲಿ ಕನ್ನಡದಲ್ಲಿ ತಮ್ಮ ಬಾಹುಬಲಿ 2 ಚಿತ್ರವನ್ನು ಹೇಗೆ ಸಮರ್ಥನೆ ಹಾಗೂ ಮನವಿ ಮಾಡಿಕೊಂಡಿದ್ದಾರೆ.

ಬಾಹುಬಲಿ ಚಿತ್ರದಲ್ಲಿ ಕಟ್ಟಪ್ಪನಾಗಿ ನಟಿಸಿರುವ ಸತ್ಯರಾಜ್ ಕಾವೇರಿ ವಿವಾದ ಸಂದರ್ಭದಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವುದು ರಾಜ್ಯದ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದು ಅದಕ್ಕೆ ತಮ್ಮ ಟ್ವಿಟರ್‍ ಅಕೌಂಟಿನಲ್ಲಿ ರಾಜಮೌಳಿ ಕನ್ನಡಿಗರಲ್ಲಿ ಕನ್ನಡದಲ್ಲಿ ಮನವಿ ಕೊಂಡಿದ್ದಾರೆ.

ರಾಜಮೌಳಿ ಅವರ ಕನ್ನಡ ಮಾತನಾಡುವುದನ್ನು ನೋಡಿದರೆ ಯಾರು ಕೂಡ ಇತನಿಗೆ ಕನ್ನಡ ಬರುವುದಿಲ್ಲ ಎಂದು ಹೇಳುವುದಿಲ್ಲ, ಅಷ್ಟು ನಿರರ್ಗಳವಾಗಿ, ಸ್ಷಪ್ಟವಾಗಿ ಮಾತನಾಡಿ ಎಲ್ಲರ ಹುಬ್ಬೇರಿಸುವಂತೆ ಮಾತನಾಡಿದ್ದಾರೆ.

Courtesy: Kannada News Now

Facebook Auto Publish Powered By : XYZScripts.com