ಸುಲ್ತಾನ್ ಗೆ ಮತ್ತೊಂದು ಗರಿ

ಸಲ್ಮಾನ್ ಖಾನ್ ಅಭಿನಯದ  ಸೂಪರ್ ಡೂಪರ್ ಬ್ಲಾಗ್ ಬಸ್ಟರ್ ಚಿತ್ರ ಸುಲ್ತಾನ್ ಗೆ ಸಿನಿಮಾಗೆ ಮತ್ತೊಂದು ಗರಿ ಲಭಿಸಿದೆ. ಅಲಿ ಅಬ್ಬಾಸ್ ಝಾಪರ್ ನಿರ್ದೇಶನದ ಚಿತ್ರ, 47ನೇ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ-2016 ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಈ ವರ್ಷದ ಆರಂಭದಲ್ಲಿ ಬುಷನ್ ಅಂತರಾಷ್ಟ್ರೀಯ ಚಿತ್ರಕ್ಕೆ ಆಯ್ಕೆಯಾದ ಬಳಿಕ ಎರಡನೇ ಬಾರಿದೆ ಮತ್ತೊಂದು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗಿಯಾಗುವ ಅವಕಾಶ ಸುಲ್ತಾನ್ ಚಿತ್ರಕ್ಕೆ ಲಭಿಸಿದ್ದು, ಚಿತ್ರತಂಡದ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.
ಹರಿಯಾಣ ಮೂಲದ ಒಬ್ಬ ಕುಸ್ತಿಪಟುವಿನ ಸಾಹಸದ ಕಥಾಹಂದರವನ್ನು ಹೊಂದಿರುವ ಸುಲ್ತಾನ್ ಚಿತ್ರ ಈಗಾಗಲೇ ದೇಶ ವಿದೇಶಗಳಲ್ಲಿ ಸೂಪರ್ ಹಿಟ್ ಆಗಿ ಬಾಕ್ಸ್ ಆಫೀಸ್ ಉಡೀಸ್ ಮಾಡಿತ್ತು. ಅಷ್ಟೇ ಅಲ್ಲದೆ ಎರಡು ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗುವ ಮೂಲಕ ಸುಲ್ತಾನ್ ಚಿತ್ರಕ್ಕೆ ಮತ್ತೊಂದು ಗರಿ ಬಂದಿದೆ.
ಆದಿತ್ಯ ಚೋಪ್ರಾ ನಿರ್ಮಾಣದ ಈ ಚಿತ್ರದಲ್ಲಿ ಸಲ್ಮಾನ್ ಖಾನ್, ಅನುಷ್ಕಾ ಶರ್ಮಾ , ಅಮಿತ್ ಸಾದ್ ಮತ್ತು ರಣ್ ದೀಪ್ ಹೂಡಾ ಮುಖ್ಯಪಾತ್ರದಲ್ಲಿ ಭಾಗವಹಿಸಿದ್ದಾರೆ. ಇದೀಗ  ಗೋವಾದಲ್ಲಿ ನಡೆಯುವ ಭಾರತೀಯ ಪನೋರಮಾ ಸೆಕ್ಷನ್ ನ 47ನೇ ಅಂತರಾಷ್ಟ್ರೀಯ ಚಲನಚಿತ್ಸೋತ್ಸವದಲ್ಲಿ ಭಾಗವಹಿಸುವ ಅವಕಾಶ ಲಭಿಸಿದ್ದು ಚಿತ್ರತಂಡದ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.
ಇನ್ನೂ ಬಾಹುಬಲಿ- ದಿ ಬಿಗಿನಿಂಗ್ , ಬಾಜಿರಾವ್ ಮಸ್ತಾನಿ ಮತ್ತು ಅಕ್ಷಯ್ ಕುಮಾರ್ ಅಭಿನಯದ ಏಕ್ ಲಿಪ್ಟ್ ಚಿತ್ರ ಕೂಡ  47ನೇ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ-2016ರಲ್ಲಿ ಭಾಗವಹಿಸಲಿದೆ….
Source: Balkani News

Leave a Reply

Your email address will not be published.

Facebook Auto Publish Powered By : XYZScripts.com