ಸುದೀಪ್, ಶಿವಣ್ಣ ಅಭಿಮಾನಿಗಳಿಗೊಂದು ಸಿಹಿಸುದ್ದಿ

ಕನ್ನಡ ಚಿತ್ರರಂಗದಲ್ಲಿ ಬಹು ನೀರಿಕ್ಷೆ ಹುಟ್ಟಿಸುತ್ತಿರುವ ಚಿತ್ರ ‘ದಿ ವಿಲನ್’ . ‘ದಿ ವಿಲನ್’ ಚಿತ್ರದ ಶೂಟಿಂಗ್ ಪ್ರಾರಂಭವಾದಾಗಿನಿಂದಲೂ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಾಗುತ್ತಿದೆ. ಇನ್ನೂ, ಸಿನಿಮಾ ನೋಡಲು ಅಭಿಮಾನಿಗಳು ಕಾತುರರಾಗಿದ್ದು, ಸಿನಿಮಾ ಯಾವಾಗ ರಿಲೀಸ್ ಆಗತ್ತೋ ಎಂದು ಕಾಯ್ತಿದ್ದಾರೆ.

ಈಗ ವಿಷ್ಯ ಏನಪ್ಪ ಅಂದ್ರೆ, ಮೋಷನ್ ಪೋಸ್ಟರ್ ಮೂಲಕ ಅಭಿಮಾನಿಗಳ ಕುತೂಹಲ ಕೆರಳಿಸಿದ್ದ ನಿರ್ದೇಶಕ ಪ್ರೇಮ್ ದಿ ವಿಲನ್ ಸಿನಿಮಾದ ಟೀಸರ್ ನ್ನು ಇದೇ ತಿಂಗಳೊಳಗೆ ರಿಲೀಸ್ ಮಾಡಲು ಸಿದ್ದತೆ ನಡೆಸಿದ್ದಾರೆ. ಯೆಸ್, ಈ ತಿಂಗಳೊಳಗೆ ದಿ ವಿಲನ್ ಸಿನಿಮಾದ ಟೀಸರ್ ಬರೋದಂತು ಪಕ್ಕಾ.

ಈ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಬಾಲಿವುಡ್ ನಟಿ, ಬ್ರಿಟಿಷ್ ಮಾಡೆಲ್ ಎಮಿ ಜಾಕ್ಸನ್ ಅಭಿನಯಿಸುತ್ತಿದ್ದಾರೆ. ಸದ್ಯದಲ್ಲಿಯೇ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಗಳಿವೆ.

Facebook Auto Publish Powered By : XYZScripts.com