ಸುದೀಪ್ ಅವರು ತುಂಬ ಬೇಜಾರಲ್ಲಿದ್ದರೆ ಯಾಕೆ ಗೊತ್ತಾ?

ನಾನು ಅಭಿಮಾನಿಯ ಅಭಿಮಾನಿ ಎಂದು ಹೇಳಿದ ಏಕೈನ ನಟ ಕಿಚ್ಚ ಸುದೀಪ್. ತಮ್ಮ ಅಭಿಮಾನಿಗಳ ಜೊತೆಯಲ್ಲಿ ನಿತ್ಯ ಸಂಪರ್ಕದಲ್ಲಿರುವ ಕಿಚ್ಚ ಸುದೀಪ್ ಅಭಿಮಾನಿಗಳ ಸಮಾಜಸೇವೆಯತಂಹ ಕೆಲಸಗಳಿಗೆ ಬೆನ್ನು ತಟ್ಟುತ್ತಾ ಬಂದಿದ್ದಾರೆ.

ಹೆಚ್ಚಿನ ಗೆಳೆಯರ ಜೊತೆ ಕಾಲ ಕಳೆಯುವುದನ್ನ ಕಡಿಮೆ ಮಾಡಿ ಅಭಿಮಾನಿಗಳ ಟ್ವಿಟ್ ಗಳಿಗೆ ಉತ್ತರಿಸುವ ಕೆಲಸವನ್ನ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕಿಚ್ಚನ ಅಭಿಮಾನಿಯೊಬ್ಬರು ಸುದೀಪ್ ಅವರನ್ನ ಭೇಟಿ ಮಾಡಲೇಬೇಕು ಎಂದು ಹಠ ಮಾಡಿದ್ದರು. ಅವರನ್ನ ಬೇಟಿ ಮಾಡಿದ ನಂತರ ತಿಳಿದ ವಿಚಾರ ಆಕೆ ಕೆಲವೇ ದಿನಗಳಲ್ಲಿ ತನ್ನ ಜೀವನದ ಪಯಣವನ್ನ ಮುಗಿಸಲಿದ್ದಾಳೆ ಎನ್ನುವುದು.

ಹೌದು ಸುದೀಪ್ ಕ್ಯಾನ್ಸರ್ ಗೆ ತುತ್ತಾಗಿದ್ದ ತಮ್ಮ ಅಭಿಮಾನಿಯನ್ನ ಇತ್ತಿಚಿಗಷ್ಟೇ ಮನೆಗೆ ಕರೆಸಿಕೊಂಡು ಮಾತನಾಡಿಸಿದ್ದರು. ಜೊತೆಯಲ್ಲಿ ಪೋಟೋ ತೆಗೆಸಿಕೊಂಡು ಒಳ್ಳೆ ಚಿಕಿತ್ಸೆ ಪಡೆಯುವಂತೆ ತಿಳಿಸಿದ್ದರು. ಅದೆಷ್ಟೇ ಪ್ರಯತ್ನ ಪಟ್ಟರು ಕ್ಯಾನ್ಸರ್ ಮಾತ್ರ ವಿನುತಾ ಅವರನ್ನ ಸಾವಿನ ದವಡೆಗೆ ಸಿಲುಕಿಸುವಲ್ಲಿ ಗೆದ್ದೇ ಬಿಟ್ಟಿದೆ. ಕಿಚ್ಚ ಅಪ್ಪಟ ಅಭಿಮಾನಿ ವಿನುತಾ ಕ್ಯಾನ್ಸರ್ ರೋಗದಿಂದ ಬಳಲಿ ಸಾವನ್ನಪ್ಪಿದ್ದಾರೆ. ಮುಂದೆ ಓದಿ

ವಿನುತಾ ಕಿಚ್ಚ ಸುದೀಪ್ ಅವರ ಅಭಿಮಾನಿ. ಕುಶಾಲ ನಗರದ ನಿವಾಸಿ ಆಗಿದ್ದ ಈಕೆ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲೇ ಸುದೀಪ್ ಅವರನ್ನ ಭೇಟಿ ಆಗಬೇಕೆಂಬ ಆಸೆಯನ್ನ ವ್ಯಕ್ತ ಪಡಿಸಿದ್ದರು. ಅಭಿಮಾನಿಯ ಆಸೆಯಂತೆ ಸುದೀಪ್ ವಿನುತಾ ಅವರನ್ನ ಜೆ ಪಿ ನಗರದ ಮನೆಗೆ ಕರೆಸಿಕೊಂಡಿದ್ದರು. ಕೆಲ ಸಮಯ ವಿನುತಾ ಜೊತೆಯಲ್ಲಿ ಕಳೆದು ಫೋಟೋ ಗಳನ್ನ ತೆಗೆಸಿಕೊಂಡಿದ್ದರು.

ವಿನುತಾ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಎಷ್ಟೇ ಪ್ರಯತ್ನ ಪಟ್ಟರು ಚಿಕಿತ್ಸೆ ಫಲಕಾರಿ ಆಗದೆ ಇತ್ತಿಚಿಗಷ್ಟೇ ಪ್ರಾಣ ಬಿಟ್ಟಿದ್ದಾರೆ. ನೆಚ್ಚಿನ ಅಭಿಮಾನಿಯನ್ನ ಕಳೆದುಕೊಂಡ ಸುದೀಪ್, ವಿನುತಾ ಅವರನ್ನು ನೆನೆಸಿಕೊಂಡು ಮರುಗಿದ್ದಾರೆ.

 

Facebook Auto Publish Powered By : XYZScripts.com