ಸುಂದರಿಯರಿಗಾಗಿ ಭಟ್ಟರ ಹುಡುಕಾಟ-ಹೊಸ ಚಿತ್ರಕ್ಕೆ ಆಡಿಷನ್

ಯೋಗರಾಜ್ ಭಟ್ ಮತ್ತೆ ಸುದ್ದಿಯಲ್ಲಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಸುದ್ದಿಗೆ ಗುದ್ದು ನೀಡಿದ್ದಾರೆ. ಈ ಇಬ್ಬರು ನಟರ ಕಾಂಬಿನೇಷನಲ್ಲಿ ಹೊಸ ಚಿತ್ರವೊಂದು ಸೆಟ್ಟೇರುತ್ತಿದ್ದು, ಅದಕ್ಕಾಗಿ ತಯಾರಿ ಭರ್ಜರಿಯಾಗಿ ಸಾಗಿದೆ. ಮುಂಗಾರು ಮಳೆ ಮೂಲಕ ಜನರಿಗೆ ಖುಷಿ ನೀಡಿದ ಹಾಗೂ ಗಾಳಿಪಟ ಮೂಲಕ ಗಣೇಶ್ ವರ್ಚಸ್ಸನ್ನು ಮುಗಿಲೆತ್ತರಕ್ಕೆ ಕೊಂಡಯ್ಯದ ಭಟ್ಟರು, ಇದೀಗ ಗಣೇಶ್ ಜೊತೆ ಯಸಸ್ಸಿನ ನಿರೀಕ್ಷೆಯ ಚಿತಂರವೊಂದಕ್ಕೆ ತಯಾರಿ ಕೈಗೊಂಡಿದ್ದಾರೆ.
ಹಲವು ಬಗೆಯ ವಿಶೇಷತೆಗಳ ಹರಿಹಾರ ಎಂದೇ ಗಾಂಧಿ ನಗರದಲ್ಲಿ ಹೊಗಳಿಕೆಗೆ ಪಾತ್ರವಾಗಿರುವ ಯೋಗರಾಜ ಭಟ್ಟರು ಈ ಹೊಸ ಚಿತ್ರಕ್ಕೂ ತಮ್ಮದೇ ಶೈಲಿಯ ಹೊಸತನ ತುಂಬಲು ಕಸರತ್ತು ನಡೆಸಿದ್ದಾರಂತೆ.
ಆದರೆ ಈ ಇಬ್ಬರು ಪ್ರಯತ್ನದ ಕೂಸಾಗಲಿರುವ ಆ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಆದರೆ ಅಲ್ಲಿ ಮತ್ತೊಂದು ಪ್ರಯತ್ನ ಸಾಗಿದೆ. ಈ ಇಬ್ಬರು ತಾರೆಯರಿಗೆ ಕನ್ನಡ ಸಿನಿ ಇಂಡಸ್ಟ್ರೀಯಲ್ಲಿ ಈವರೆಗೂ ನಟಿಸಿರುವ ಯಾರೊಬ್ಬರು ತಾರೆಯರು ಈ ಸಿನಿಮಾಗೆ ಸೂಟ್ ಆಗಲ್ವಂತೆ . ಹಾಗಾಗಿ ಹೊಸನಟಿಯರು ಬೇಕಾಗಿದ್ದಾರೆ ಎಂದು ಜಾಹಿರಾತರನ್ನು ಹರಿಬಿಟ್ಟಿದ್ದಾರೆ.
ಅವರ ಈ ಹೊಸ ಚಿತ್ರಕ್ಕೆ ಹೊಸ ಪ್ರತಿಭೆಗಳನ್ನು ಆರಿಸಬೇಕು ಎಂಬ ಆಸೆ. ಈ ಹೊಸ ಪ್ರತಿಭೆಗಳು ಮಿಂಚಿ ಮಿನಗಬೇಕು ಎನ್ನುವುದು ಈ ಇಬ್ಬರು ಪ್ರತಿಭೆಗೆಗಳ ಅಭಿಲಾಷೆ. ಹಾಗಾಗಿ ಭಟ್ಟರು ತಮ್ಮ ಗರಡಿಯಲ್ಲಿ ಪಳಗಿದ ನಟ ಗಣೇಶ್ ಜೊತೆ ನಾಯಕಿಯರಿಗಾಗಿ ಹುಡುಕಾಟದಲ್ಲಿದ್ದಾರೆ.
ಅವರ ಈ ಹೊಸ ಚಿತ್ರಕ್ಕೆ ಇಟ್ಟಿರು ಹೆಸರನ್ನು ಯಾವುದೇ ಕಾರಣಕ್ಕೂ ಬಹಿರಂಗ ಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಚಿತ್ರದ ಕುರಿತಂತೆ ಕಂಟೆಂಟ್ ಗಳನ್ನು, ಅಂತೆ ಕಂತೆಗಳ ರೂಪದಲ್ಲಿ ಹರಿಬಿಟ್ಟಿದ್ದಾರೆ. ಅವರ ಹೊಸ ಚಿತ್ರದಲ್ಲಿ ನಾಲ್ವರು ನಾಯಕಿಯರಿದ್ದು, ಅವರಿಗಾಗಿ 19 ರಿಂದ 24 ವರ್ಷದೊಳಗಿನ ಯುವತಿಯರು ಬೇಕಾಗಿದ್ದಾರಂತೆ.
ಈ ಸುಂದರಿಯರ ಆಯ್ಕೆಗಾಗಿ ಆಡಿಷನ್ ನಡೆಸುತ್ತಿರುವ ಯೋಗರಾಜ್ ಭಟ್ಟರು ಇದರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂಬ ನಿರ್ಧಾರವನ್ನು ಕಾಯ್ದಿರಿಸಿದ್ದಾರಂತೆ.
ಈ ಹೊಸ ಚಿತ್ರ ಯೋಗರಾಜ್ ಮೂವೀಸ್ ಮತ್ತು ಗೋಲ್ಡನ್ ಮೂವೀಸ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಎರಡು ಹಿಟ್ ಚಿತ್ರದ ಮೂಲಕ ಈ ಜೋಡಿ ತಮ್ಮೆರಡು ಕಂಪೆನಿಗಳ ಮೂಲಕ ಜಂಟಿಯಾಗಿ ಮತ್ತೊಂದು ಸಿನಿಕಥನಕ್ಕೆ ಮುಂದಾಗಿದ್ದು, ಈ ಹೊಸ ಚಿತ್ರ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
Courtesy: Balkani News

Facebook Auto Publish Powered By : XYZScripts.com