ಸೀತಾರಾಮ ಕಲ್ಯಾಣದಲ್ಲಿ ಬಾಂಡ್ ಆಗಿ ನಟಿಸಲಿರುವ ನಿಖಿಲ್ ಕುಮಾರ್!

ಹರ್ಷ ನಿರ್ದೇಶನದ ನಿಖಿಲ್ ಕುಮಾರ್ ನಟನೆಯ ಸೀತಾರಾಮ ಕಲ್ಯಾಣ ಸಿನಿಮಾ ಶೂಟಿಂಗ್ ಆರಂಭವಾಗಿದ್ದು, ನಿಖಿಲ್ ಹೊಸ ಅವತಾರದ ಫೋಟೊಗಳು ಎಲ್ಲರ ಗಮನ ಸೆಳೆಯುತ್ತಿದೆ.

ಸಿನಿಮಾಗೆ ರಾಮ ಲಕ್ಷ್ಮಣ್ ಸಹೋದರರು ಸಾಹಸ ನಿರ್ದೇಶನ ಮಾಡಿದ್ದಾರೆ, ಸಿನಿಮಾದಲ್ಲಿ ಆರು ಪೈಟಿಂಗ್ ಸನ್ನಿವೇಶಗಳಿವೆ, ಬಾಂಡ್ ಸ್ಟೈಲ್ ನಲ್ಲಿ ಮೊದಲ ಬಾರಿಗೆ ಫೈಟಿಂಗ್ ಸನ್ನಿವೇಶ ಚಿತ್ರೀಕರಣ ಮಾಡಲಾಗುತ್ತಿದೆ.

ಬ್ರಿಟಿಷ್ ಗೂಡಾಚಾರಿ ರೀತಿ ನಿಖಿಲ್ ಕುಮಾರ್ ಡ್ರೆಸ್ ಧರಿಸಿ ಫೈಟಿಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ, ಈ ಚಿತ್ರೀಕರಣಕ್ಕಾಗಿ ಮಿನರ್ವ ಮಿಲ್ ನಲ್ಲಿ 2 ಕೋಟಿ ರು. ವೆಚ್ಚದಲ್ಲಿ ಬಹು ದೊಡ್ಡ ಸೆಟ್ ನಿರ್ಮಾಣ ಮಾಡಲಾಗಿದೆ.

ಈ ಫೈಟಿಂಗ್ ಸನ್ನಿವೇಶಕ್ಕಾಗಿ ಮುಂಬೈ ನಿಂದ ಶಾಂಗ್ಲಿಯಾರ್ಸ್ ಲೈಟ್ ತರಲಾಗಿದೆ, ಫ್ಯಾಂಟೋಮ್ ಮತ್ತು ಹೈ ಸ್ಪೀಡ್ ಕ್ಯಾಮೆರಾ ಕೂಡ ತರಲಾಗಿದ್ದು, 8 ದಿನಗಳಿಂದ ಚಿತ್ರೀಕರಣ ನಡೆಸಲಾಗುತ್ತಿದೆ ಎಂದು ಕಾರ್ಯಕಾರಿ ನಿರ್ಮಾಪಕ ಸುನೀಲ್ ಗೌಡ ಹೇಳಿದ್ದಾರೆ.

ಇನ್ನೂ ಸಿನಿಮಾದಲ್ಲಿ ಡೇನ್ ಡಾಗ್ ಕೂಡ ಸಿನಿಮಾದಲ್ಲಿ ಭಾಗವಹಿಸಿದೆ. ಈ ಡೇನ್ ಡಾಗ್ ಗೆ4 ದಿನಗಳ ಕಾಲ ತರಬೇತಿ ನೀಡಲಾಗಿದೆ, ಈ ನಾಯಿ ಅಂತರಾಷ್ಟ್ರೀಯ ಮಟ್ಟದ ಹಲವು ಪ್ರಶಸ್ತಿಗಳನ್ನು ಗಳಿಸಿದೆ, 136 ದಿನಗಳ ಕಾಲ ಶೂಟಿಂಗ್ ಶೆಡ್ಯೂಲ್ ಹಾಕಿಕೊಂಡಿದ್ದು, 26 ದಿನ ಮುಗಿದಿದೆ, ಚನ್ನಂಬಿಕಾ ಪ್ರೊಡಕ್ಷನ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ.

Facebook Auto Publish Powered By : XYZScripts.com