ಸಿಹಿ ಸಿಹಿಯಾಗಲಿದೆ ಜಿಲೇಬಿ ; ಅತೀಯಾದ ವಿಶ್ವಾಸದಲ್ಲಿ ಪೂಜಾ

ಮಳೆ ಹುಡುಗಿ ಪೂಜಾ ಗಾಂಧಿ ‘ಜಿಲೇಬಿ’ ತಿನ್ನಿಸೋಕೆ ರೆಡಿಯಾಗಿದ್ದಾರೆ. ಅವರ ಮಹಾ ನಿರೀಕ್ಷೆಯ ‘ಜಿಲೇಬಿ’ಯ ಟ್ರೇಲರ್ ಬಿಡುಗಡೆಯಾಗಿದ್ದೇ ತಡ ಸ್ಯಾಂಡಲ್ ವುಡ್ ನಲ್ಲಿ ಹೊಸ ತರಂಗ ಎದ್ದಿದೆ. ಈ ಹಿಂದೆ ಅಭಿನೇತ್ರಿ ಚಿತ್ರದ ನಂತರ ಅವರಿಗೆ ಹೆಸರು ತಂದುಕೊಟ್ಟ ಚಿತ್ರ ಮತ್ತೊಂದಿಲ್ಲವಂತೆ. ಹಾಗಾಗಿ ಈ ಜಿಲೇಬಿ ಸಿಹಿತಿಂಡಿಯ ಹೆಸರಂತಿದ್ದೂ ತಮ್ಮ ಪಾಲಿಗೂ ಸಿಹಿ ಕ್ಷಣವಾಗಲಿದೆ ಎಂಬುದು ಪೂಜಾ ಅಭಿಲಾಷೆ.
ಅದೇನೆ ಇರಲಿ ‘ಜಿಲೇಬಿ’ ತಿನ್ನಿಸೋಕೆ ರೆಡಿಯಾಗಿರುವ ಚಿತ್ರತಂಡ ಈಗಾಗಲೇ ಟ್ರೇಲರ್ ರಿಲೀಸ್ ಮಾಡಿದೆ. ಆರಂಭದಲ್ಲೇ ಹೆಚ್ಚೆಚ್ಚು ನಿರೀಕ್ಷೆಯಿಂದಿರುವ ಈ ಚಿತ್ರ ಸೆಟ್ಟೇರಿದ ತಕ್ಷಣವೇ ಹೊಸ ಹವಾ ಸೃಷ್ಟಿಸಿದೆ. ಯಾಕೆಂದರೆ ಕೆಲ ದಿನಗಳ ಹಿಂದೆ ಅವರು ತಮ್ಮ ಮದುವೆ ಜೀವನದ ಸುಳಿವನ್ನು ನೀಡಿದ್ದರು. ಆ ಸುದ್ದಿಯ ಬೆನ್ನಲ್ಲೆ ‘ಜಿಲೇಬಿ’ ಚಿತ್ರದ ಯಶಸ್ಸನ್ನು ನಿರೀಕ್ಷಿಸಿದ್ದರು.
ಈ ಚಿತ್ರದ ಒಳಗುಟ್ಟಿನ ಬಗ್ಗೆ ಅವರಿನ್ನೂ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ ಅವರು ಈ ಚಿತ್ರದಲ್ಲಿ ವೇಶ್ಯೆಯ ಪಾತ್ರಮಾಡಿದ್ದರು. ದಂಡು ಪಾಳ್ಯ ಚಿತ್ರದ ರೀತಿಯಲ್ಲೇ ಡೇರಿಂಗ್ ಸೀನ್ ಗಳಲ್ಲೂ ಕಾಣಿಸಿಕೊಂಡಿದ್ದರು. ಅವರಿಗೆ ವಿಜಯ್ ಚೆಂಡೂರ್, ದತ್ತಣ್ಣ, ಮೊದಲಾದವರು ಕೂಡ ಸಾಥ್ ನೀಡಿದ್ದು, ಈ ತಾರಾ ಬಳಗದ ಪ್ರತಿಭೆ ಈ ಚಿತ್ರದ ಯಶಸ್ನು ನಿರೀಕ್ಷೆಯ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂಬ ಆಶಯವನ್ನು ಆ ಚಿತ್ರ ತಂಡ ಹೊಂದಿದೆ. ಹಾಗಾಗಿಯೇ ಬಹುದಿನದ ನಂತರ ಬರುತ್ತಿರುವ ಚಿತ್ರ ಇದಾಗಿರುವುದರಿಂದ ಪೂಜಾ ಗಾಂಧಿ ಬಹಳಷ್ಟು ಎಕ್ಸೈಟ್ ಆಗಿದ್ದಾರೆ. ಈ ಚಿತ್ರ ಖಂಡಿತವಾಗಿಯೂ ಜನರಿಗೆ ‘ಜಿಲೇಬಿ’ಯ ಸಿಹಿ ನೀಡಲಿದೆ ಎಂದು ಪೂಜಾ ಹೇಳಿಕೊಳ್ಳುತ್ತಿದ್ದಾರೆ.
Courtesy: Balkani News

Facebook Auto Publish Powered By : XYZScripts.com