ಸಿಂಗಲ್ ಟೇಕ್ ನಲ್ಲಿ ಓಕೆ ಎನಿಸಿದ ಥ್ರಿಲ್ಲರ್ ಕಂದಾ

ಸಿನಿಮಾ ಶೂಟಿಂಗ್ ಅಂದರೆ ಅದರಲ್ಲಿ ನೂರಾರು ರಿಟೇಕ್ ಗಳು ಇದ್ದೇ ಇರುತ್ತದೆ. ನಿರ್ದೇಶಕ ತನಗನಿಸಿದ ದೃಷ್ಯಗಳು, ತಾನು ಅಂದುಕೊಂಡಂತೆ ತೆರೆಯಲ್ಲಿ ಮೂಡಿಬರುವವರೆಗೆ, ಟೇಕ್ ಗಳನ್ನು ತೆಗೆದುಕೊಳ್ಳುತ್ತಲೇ ಇರುತ್ತಾನೆ. ಪ್ರೇಮ ಪ್ರಸಂಗ, ಪೈಟಿಂಗ್ ದೃಷ್ಯಗಳು ಸಾಮಾನ್ಯವಾಗಿದ್ದರೂ, ಇವುಗಳನ್ನು ನೂರಾರು ಬಾರಿ ಟೇಕ್ ತೆಗೆದುಕೊಳ್ಳಲಾಗುತ್ತದೆ. ಅಂತಹದರಲ್ಲಿ ಹಾರರ್ ಸಿನಿಮಾಗಳ ಕತೆ ಇನ್ನು ಹೇಗೆ ಇರಬಹುದು ಎಂದು ನೀವೇ ಊಹಿಸಿ.
ಆದರೆ ಇದಕ್ಕೆ ಅಪವಾದ ಎಂಬಂತೆ ಕನ್ನಡದ ಕಂದ ಚಿತ್ರದ ಚಿತ್ರೀಕರಣ ನಡೆದಿದೆ. ಎಟಿಟರ್ ಹಾಗೂಗ ಎಸೋಸಿಯೇಟೆಡ್ ಎಡಿಟರ್ ಆಗಿ 15 ವರ್ಷಗಳ ಕಾಲ ಕೆಲಸ ನಿರ್ವಹಿಸಿರುವ ಸೋಲೋಮನ್ ಕೆ ಜಾರ್ಜ್ ಇದೀಗ ಕನ್ನಡದ ತಮ್ಮ ಚೊಚ್ಚಲ ನಿರ್ದೇಶನದ ಕಂದಾ ಚಿತ್ರದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ.
92 ನಿಮಿಷಗಳ ಸುಧೀರ್ಘಾ ಚಿತ್ರವನ್ನು ಸೋನಿ ಎಫ್ 7 ಕ್ಯಾಮಾರದಲ್ಲಿ ಸಿಂಗಲ್ ಟೇಕ್ ನಲ್ಲಿ ಮಾಡಿ ಮುಗಿಸಿದ್ದಾರಂತೆ ಜಾರ್ಜ್.
ಬೆಂಗಳೂರಿನ ಕೆಆರ್ ಪುರಂನಲ್ಲಿರುವ ಸಿನಿಮಾ ಸ್ಟುಡಿಯೋದಲ್ಲಿ ಚಿತ್ರದ ಚಿತ್ರೀಕರಣ ನಡೆದಿದ್ದು, 25 ದಿನಗಳ ರಿಹರ್ಸಲ್ ಮುಗಿಸಿದ ಬಳಿಕ ಫೈನಲ್ ಶಾಟ್ ಅನ್ನು ಒಂದೇ ಟೇಕ್ ನಲ್ಲಿ ತೆಗೆದಿರುವುದಾಗಿ ನಿರ್ದೇಶಕರು ವಿವರಿಸಿದ್ದಾರೆ.
ಚಿತ್ರ ಮಹಿಳಾ ಪ್ರಧಾನವಾಗಿದ್ದು ರಿಯಾ ದೇವಾಡಿಗ, ದಿವ್ಯ ಚೌಹ್ಹಣ್, ನಿನಾಸಂ ಪ್ರತೀಪ್ ಮತ್ತು ಗಿರೀಶ್ ಶ್ರೀವಾಸ್ತವ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ವಿಶೇಷವೆಂದರೆ ಚಿತ್ರದಲ್ಲಿ 5 ಪಾತ್ರಗಳಿದ್ದರೂ, ಸ್ಕ್ರೀನ್ ಪ್ಲೇ ಮಾತ್ರ 7 ಕ್ಯಾರೆಕ್ಟರ್ ಗಳನ್ನು ಹೊಂದಿರುವುದೇ ಚಿತ್ರದ ವಿಶೇಷ ಹಾಗೂ ಸಸ್ಪನ್ಸ್ ಅಂತೆ.
ಕಂದಾ ಎಂದರೆ ಮಗು ಎಂದರ್ಥ. ಚಿತ್ರ ಸೈಕಾಲಾಜಿಕಲ್ ಥ್ರಿಲರ್ ಕಥೆಯನ್ನು ಹೊಂದಿದ್ದು, ಎ ಸರ್ಟಿಪೇಕ್ಟೇ ಪಡೆದಿದೆ.
Courtesy: Balkani News

Facebook Auto Publish Powered By : XYZScripts.com