ಸಾಯಿ ಪ್ರಕಾಶ್ 100 ನೇ ಚಿತ್ರದಲ್ಲಿ ಮತ್ತೆ ಒಂದಾಗಲಿರುವ ಚಂದನವನ ಅಣ್ಣ ತಂಗಿ ಜೋಡಿ

ನಿರ್ದೇಶಕ ಸಾಯಿಪ್ರಕಾಶ್ ಅವರ ನೂರನೆಯ ಚಿತ್ರ ಯಾವುದು ಹಾಗೂ ಇವರ ಶಿವಣ್ಣನ ಕಾಂಭಿನೇಷನ್ನಿನ ಸಿನಿಮಾ ಯಾವಾಗ ಬರುತ್ತದೆ ಎಂದು ಅಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗ ಕಾಯುತ್ತಿತ್ತು. ಇದೀಗ ಮಾಹಿತಿ ದೊರೆತಿರುವ ಪ್ರಕಾರ ಈಗ ಕೊನೆಗೂ ಸಾಯಿಪ್ರಕಾಶ್ ಅವರ ನೂರನೆಯ ಚಿತ್ರ ಈ ವರ್ಷ ಶುರುವಾಗಲಿದೆ.

ಈ ಚಿತ್ರವನ್ನು ರಾಧಿಕಾ ಕುಮಾರಸ್ವಾಮಿ ನಿರ್ಮಿಸಲಿದ್ದು, ಶಿವರಾಜಕುಮಾರ್ ಮತ್ತು ರಾಧಿಕಾ ಇಬ್ಬರೂ ಅಣ್ಣ-ತಂಗಿಯಾಗಿ ನಟಿಸಲಿದ್ದಾರೆ. ಈ ಹಿಂದೆ ಸಹ ಮೂವರು ಸೇರಿ ಚಿತ್ರ ಮಾಡುವ ಪ್ರಸ್ಥಾಪ ಇತ್ತು. ಆದರೆ, ಕಾರಣಾಂತರಗಳಿಂದ ಆ ಚಿತ್ರ ಸೆಟ್ಟೇರಲೇ ಇಲ್ಲ. ಈಗ ಹಳೆಯ ಯೋಜನೆ ಮತ್ತು ಕಥೆಗಳನ್ನೆಲ್ಲಾ ಪಕ್ಕಕ್ಕಿಟ್ಟು, ಹೊಸದಾಗಿ ಕಥೆ ಮಾಡಿದ್ದಾರಂತೆ ಸಾಯಿಪ್ರಕಾಶ್

ಅದನ್ನು ಶಿವರಾಜಕುಮಾರ್ ಅವರ ಮುಂದಿಟ್ಟಿದ್ದಾರೆ. ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಗೆ ಸಹ ಕೊಟ್ಟಿರುವ ಶಿವರಾಜಕುಮಾರ್, ಏಪ್ರಿಲ್ ನಂತರ ಪಕ್ಕಾ ಡೇಟ್ಸ್ ಕೊಡುವುದಾಗಿ ಹೇಳಿದ್ದಾರಂತೆ. ಅಲ್ಲಿಗೆ ಸಾಯಿಪ್ರಕಾಶ್ ಅವರ 100ನೇ ಚಿತ್ರ ಈ ವರ್ಷ ಶುರುವಾಗಿ, ಇದೇ ವರ್ಷ ಮುಗಿಯುವ ಸಾಧ್ಯತೆ ಇದೆ.

100ನೇ ಚಿತ್ರವನ್ನು ಶಿವರಾಜಕುಮಾರ್ ಅವರಿಗಾಗಿ ಎತ್ತಿಟ್ಟಿರುವ ಸಾಯಿಪ್ರಕಾಶ್, ಸದ್ದಿಲ್ಲದೆ 101ನೇ ಚಿತ್ರವನ್ನು ಇತ್ತೀಚೆಗೆ ಶುರು ಮಾಡಿದ್ದಾರೆ. ರಾಮ್ಕುಮಾರ್ ಅಭಿನಯದಲ್ಲಿ ಅವರು “ಕ್ರಾಂತಿಯೋಗಿ ಮಹಾದೇವರು’ ಎಂಬ ಐತಿಹಾಸಿಕ ಚಿತ್ರವನ್ನು ಶುರು ಮಾಡಿದ್ದಾರೆ. ಈ ಚಿತ್ರದಲ್ಲಿ ರಾಮ್ಕುಮಾರ್ ಜೊತೆಗೆ ರಮೇಶ್ ಭಟ್, ಶಿವಕುಮಾರ್, ಸುಚಿತ್ರಾ, ಸಿಹಿಕಹಿ ಚಂದ್ರು, ರವಿ ಚೇತನ್ ಮುಂತಾದವರು ನಟಿಸುತ್ತಿದ್ದಾರೆ.

Facebook Auto Publish Powered By : XYZScripts.com