ಸಾಮಾಜಿಕ ಜಾಲತಾಣದಲ್ಲಿ ‘ಪಟಾಕಿ’ ಸದ್ದು : ಪೊಲೀಸ್ ಗೆಟಪ್ ನಲ್ಲಿ ಗಣೇಶ್

‘ಮುಂಗಾರು ಮಳೆ’ಯಲ್ಲಿ ನೆನೆದು, ‘ಮುಗುಳು ನಗೆ’ ಬೀರುತ್ತಾ ‘ಚಮಕ್’ಗೆ ರೆಡಿಯಾಗಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಇದೀಗ ‘ಪಟಾಕಿ’ ಸಿಡಿಸುತ್ತಿದ್ದರೆ. ತೆಲುಗಿನ ‘ಪಟಾಸ್’ ಚಿತ್ರದ ರಿಮೇಕ್ ಆಗಿ ಕನ್ನಡದಲ್ಲಿ ‘ಪಟಾಕಿ’ ಸೆಟ್ಟೇರಿದ್ದು, ಇದೀಗ ಈ ಚಿತ್ರದ ಟೀಸರ್ ಅನಾವರಣಗೊಂಡಿದೆ.

‘ಪಟಾಕಿ’ಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಡೈಲಾಂಗ್ ಕಿಂಗ್ ಸಾಯಿಕುಮಾರ್ ಪೊಲೀಸ್ ಗೆಟಪ್ ನಲ್ಲಿ ಕಾಣಿಸಿಕೊಂಡು ಚಿತ್ರರಸಿಕರ ಗಮನ ಕೇಂದ್ರಿಕರಿಸಿದ್ದಾರೆ. ಮಂಜು ಸ್ವರಾಜ್ ಅವರು ನಿರ್ದೇಶಿಸಿರುವ ನಾಲ್ಕನೆ ಚಿತ್ರ ಇದಾಗಿದ್ದು, ಇದು ತೆಲುಗಿನ ರಿಮೇಕ್ ಆಗಿದ್ದರೂ, ಕನ್ನಡದ ನೇಟಿವಿಟಿಯ ಸ್ಪರ್ಶವನ್ನು ಮೆತ್ತಿಕೊಂಡಿದೆ. ಭ್ರಷ್ಠ ಅಧಿಕಾರಿ ಜನರಿಗೆ ಒಲಿತನ್ನೇ ಮಾಡುವ ವೈಖರಿ ತೋರಿದರೆ ಹೇಗಿರುತ್ತೇ ಎಂಬುದೇ ಈ ಚಿತ್ರದ ಕಥಾವಸ್ತು.

‘ಪಟಾಕಿ’ ಎಂದ ಮಾತ್ರಕ್ಕೆ ಇದು ಬ್ಲಂಡರ್ ಅಲ್ಲ. ಬದಲಾಗಿ ಜನರಿಗೆ ರಸದೌತಣ ಉಣಬಡಿಸುವ ಸಾಮಾಜಿಕ ಕಳಕಳಿಯ ಉದ್ದೇಶವನ್ನೂ ಈ ಚಿತ್ರತಂಡ ಸಾರ್ಥಕಗೊಳಿಸಲಿದೆಯಂತೆ.

ಎಸ್ ವಿ ಬಾಬು ನಿರ್ಮಾಣದ ‘ಪಟಾಕಿ’ ಚಿತ್ರದ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಾಗುತ್ತಿದೆ.

Courtesy: Balkani News

Facebook Auto Publish Powered By : XYZScripts.com