ಸಲ್ಮಾನ್ ಜೊತೆ ಲೂಲಿಯಾ ಮದುವೆ ಆಗಲ್ವಂತೆ ; ಸಲ್ಲು ಮಾತ್ರ ಏನು ಹೇಳಲ್ವಂತೆ

ಬಾಲಿವುಡ್ ನಟ, ಸಲ್ಮಾನ್ ಖಾನ್ ಗೂ ಸಿನಿಮಾಕ್ಕೂ ಇರುವ ನಂಟಿಗಿಂತಲೂ, ಆ ನಟನಿಗೂ ವಿವಾದಕ್ಕೂ ಇರುವ ನಂಟೇ ಜಾಸ್ತಿ. ಯಾಕೆಂದರೆ ವಿವಾದದಲ್ಲಿ ಸಿಲುಕೋಡು ಸಲ್ಮಾನ್ ಅವರ ಹಕ್ಕು ಇರಬಹುದೇನೋ.. ಯಾಕೆಂದರೆ ಜಗತ್ಸುಂದರಿ ಐಶ್ವರ್ಯ ರೈ ಯಿಂದ ಹಿಡಿದು, ಇದೀಗ ರೊಮೇನಿಯಾದ ಚೆಲುವೆ ಲೂಲಿಯಾ ವಂತುರ್ ವರೆಗೂ ಸಲ್ಮಾನ್ ಒಡನಾಟ ವಿವಾದದಲ್ಲೇ ಸಾಗಿದೆ.
ಸಲ್ಮಾನ್ ಖಾನ್ ಮತ್ತು ಲೂಲಿಯಾ ವಂತುರ್ ನಡುವೆ ಗೆಳೆತನ ಸಿಹಿ ಸುದ್ದಿಯಾಗಿ ಬಾಲಿವುಡ್ ಗೆಳೆಯರ ನಡುವೆ ಹಾರಿದಾಡಿತು. ಅವರಿಬ್ಬರ ಗೆಳೆತನ ಪ್ರೇಮಕ್ಕೆ ತಿರುಗಿದೆ ಎಂಬ ಸಮಾಚಾರವೂ ಕೇಳಿಬಂತು. ಅಷ್ಟೇ ಅಲ್ಲ ಈ ಇಬ್ಬರು ಸೆಲೆಬ್ರೇಟೀಸ್ ಮದುವೆಯಾಗಿದ್ದಾರೆ ಎಂಬ ಪುಕಾರು ಕೂಡ ಹಬ್ಬಿತ್ತು.
ಆದರೆ ಇಲ್ಲೊಂದು ಸುದ್ದಿಯೊಂದು ಕೇಳಿಬಂದಿದೆ, ಅದೇನೆಂದರೆ ಸಲ್ಮಾನ್-ಲೂಲಿಯಾ ನಡುವೆ ವಿವಾಹ ನಡೆಯಲ್ಲವಂತೆ, ಅಷ್ಟೇ ಅಲ್ಲ ಅವರಿಬ್ಬರ ನಡುವೀಣೆ ಗೆಳೆತನವೂ ಮುರಿದುಬಿದ್ದಿದೆಯಂತೆ. ಈ ಬಗ್ಗೆ ಲೂಲಿಯಾ ವಂತುರ್ ಅವರೇ ಹೇಳಿಕೊಂಡಿದ್ದಾರೆನ್ನಲಾಗಿದೆ. ಲೂಲಿಯಾ ವಂತುರ್ ಅವರೇ ಸಲ್ಮಾನ್ ರಿಂದ ದೂರ ಸರಿಯಲು ನಿರ್ಧರಿಸಿದ್ದು ಎಂದೂ ಹೇಳಲಾಗುತ್ತಿದೆ.
ಯಾಕೆ ಈ ನಿರ್ಧಾರ:
ಯಾಕೆ ಈ ನಿರ್ಧಾರ ಎಂಬ ಪ್ರಶ್ನೆಗೆ ಲೂಲಿಯಾ ವಂತುರ್ ಅವರ ಉತ್ತರ ಕುತೂಹಲಕಾರಿ.  ನಮ್ಮಿಬ್ಬರ ದೇಶ ಬೇರೆಬೇರೆ, ಸಾಂಸ್ಕೃತಿ, ವಿಚಾರಧಾರೆಗಳೂ ವಿಭಿನ್ನ. ಈ ಸಾಂಸ್ಕೃತಿಕ ವ್ಯತ್ಯಾಸಗಳ ಕಾರಣಕ್ಕಾಗಿ ನಾವಿಬ್ಬರೂ ಮದುವೆಯಾಗುತ್ತಿಲ್ಲ ಎಂದು  ಲೂಲಿಯಾ ಸ್ಪಷ್ಟಪಡಿಸಿದ್ದಾರೆ .
ಭಾರತೀಯರ ಮನಃಸ್ಥಿತಿ, ಸಂಸ್ಕೃತಿ ನನಗೆ ಇಷ್ಟವಾಗಿಲ್ಲ. ಭಾರತದಲ್ಲಿನ ಅವಿಭಕ್ತ ಕುಟುಂಬವೂ ಇಷ್ಟವಾಗಿಲ್ಲ  ಪ್ರೈವೆಸಿಯಿಲ್ಲ, ಹೊರಗಡೆ ಹೊರಟಾಗ ಯಾವ ರೀತಿಯ ಬಟ್ಟೆ ಧರಿಸಬೇಕು ಎಂದು ಕೂಡಾ ಯೋಚಿಸಬೇಕು.  ನನ್ನ  ಲೋ ಕಟ್ ಡ್ರೆಸ್ ಗಳು ತಮ್ಮ ಬಳಿ ಇರೋದು. ಹೀಗಿರುವಾಗ ಭಾರತದ ಸಲ್ಮಾನ್ ರನ್ನು ವಿವಾಹವಾಗಲು ಈ ರೊಮೇನಿಯಾ ಸುಂದರಿ ಒಪ್ಪಿಲ್ಲವಂತೆ
ಈ ಸೆಲೆಬ್ರೆಟಿಯ ಮದುವೆ ರಹಸ್ಯವಷ್ಟೇ ಸುದ್ದಿಯಾಗಿರೋದು ಅಲ್ಲ. ಇದೀಗ ಅವರ ವಿಚ್ಛೇದನ ಪುರಾಣವೂ ಸದ್ದೆಬ್ಬಿಸಿತ್ತು. ಆದರೆ ತಾವು ಮೊದಲೇ ಒಂದು ವಿವಾಹವಾಗಿ ವಿಚ್ಛೇದನ ಪಡೆದಿರೋದಾಗಿ ಹೇಳಿರುವ  ಅನಂತರ  ಭಾರತದಲ್ಲಿ ಯಾರನ್ನೂ ಮದುವೆಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆದರೆ ಹಲವು ತಿಂಗಳುಗಳಿಂದ  ಲೂಲಿಯಾ ಜೊತೆಯಾಗಿ ಕಾಣಿಸಿಕೊಳ್ತಿದ್ದ ಸಲ್ಮಾನ್ ಈ ಬಗ್ಗೆ ಸ್ಪಶ್ಟ ವಿಚಾರವನ್ನು ಬಹಿರಂಗಪಡಿಸಿಲ್ಲ. ಈ  ಇಬ್ಬರೂ ಈ ವರ್ಷ ಡಿಸೆಂಬರ್ ನಲ್ಲಿ ಮದುವೆಯಾಗ್ತಾರೆ ಎಂಬ ಸುದ್ದಿ ಇತ್ತು. ಈ ಬಗ್ಗೆಯೂ ಸಲ್ಮಾನ್ ಖಾನ್  ಈಗ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.
Courtesy: Balkani News

Facebook Auto Publish Powered By : XYZScripts.com