ಸರ್ಕಾರ್ ಚಿತ್ರ ವಿಮರ್ಶೆ… ಚಿತ್ರ ಹೇಗಿದೆ? ಇಲ್ಲಿ ಓದಿ

ಬೆಂಗಳೂರಿನ ಕೇಂದ್ರ ಕಾರಾಗೃಹದಿಂದ ಕುಖ್ಯಾತ ರೌಡಿಯೊಬ್ಬನ ಬಿಡುಗಡೆಯೊಂದಿಗೆ ‘ಸರ್ಕಾರ್’ ಸಿನಿಮಾ ಶುರುವಾಗುತ್ತದೆ. ಆ ರೌಡಿಯ ಹೆಸರು ಸರ್ಕಾರ್. ಆತ ಕಟ್ಟುವ ಭೂಗತ ಜಗತ್ತಿನ ಕೋಟೆಗೆ ಜಗ್ಗಿ ಅಧಿಪತಿ. ಇದೊಂದು ರೌಡಿಸಂ ಚಿತ್ರವಾದರೂ ಸಹ ವಿಶೇಷತನವಿದ್ದು ನಿರ್ದೇಶಕ ಎಸ್ ಮಂಜು ಪ್ರೀತಮ್ ನಿರ್ದೇಶನ ಮಾಡಿದ್ದಾರೆ.

ಅವನು ಜಗ್ಗಿ ಅಲಿಯಾಸ್ ಜಾಗ್ವಾರ್ ಜಗ್ಗಿ,ಅವನಿಗೆ ರೌಡಿಸಂ ಬಗ್ಗೆ ‘ಸರ್ಕಾರ್’ ಎಲ್ಲಾ ಪಟುಗಳನ್ನು ಕಲಿಸಿಕೊಡುತ್ತಾನೆ. ಈ ಇಬ್ಬರೂ ಜನರ ಹೆಸರು ಹೇಳಿದರೆ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತದೆ. ತನ್ನ ಗುರುವಿನ ಬಗ್ಗೆ ಯಾರಾದರೂ ಮಾತನಾಡಿದರೆ, ಜಗ್ಗಿ ಅಂತವರ ಎದೆ ಸೀಳಿ ಬಿಡುತ್ತಾನೆ. ಇಂತಹ ಒರಟನ ಬದುಕಿನಲ್ಲಿ ಬರುವವಳೇ ಕೀರ್ತಿ. ಈ ರೀತಿ ಹುಡುಗ-ಹುಡುಗಿಯ ಪ್ರೀತಿ ಹಾಗೂ ತಾಯಿಯ ಪ್ರೀತಿ ಎಲ್ಲವನ್ನೂ ಒಳಗೊಂಡಿದೆ. ಹೀಗೆ ಸಾಗುವ ಕಥೆಯಲ್ಲಿ ಸರ್ಕಾರ್ ಸಾಯುತ್ತಾನೆ. ತನ್ನ ಗುರುವನ್ನು ಕೊಂದವರನ್ನು ಜಗ್ಗಿ ಕೊಲ್ಲಲು ಮುಂದಾಗುತ್ತಾನೆ. ಆಗ ಸಾಲು ಸಾಲಾಗಿ ಎಲ್ಲರೂ ಹೆಣವಾಗುತ್ತಾರೆ. ಕೊನೆಯಲ್ಲಿ ಜಗ್ಗಿಯ ಎನ್ ಕೌಂಟರ್ ಗೆ ಪೋಲಿಸರು ಮುಂದಾಗುತ್ತಾರೆ. ಈ ಸುದ್ದಿ ತಿಳಿದ ನಾಯಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.

ಕಥೆಯು ಸಿಂಪಲ್ ಇದ್ದರೂ ತೋರಿಸಿರುವ ರೀತಿ ವಿಶಿಷ್ಠವಾಗಿದ್ದು ನವ ನಾಯಕ ಜಗ್ಗಿ ಹಾಗೂ ಲೇಖಾ ಚಂದ್ರ ರ ನಟನೆ ಇಷ್ಟವಾಗುತ್ತದೆ. ಸತೀಶ್ ಆರ್ಯನ್ ಸಂಗೀತದಲ್ಲಿ ಎಲ್ಲ ಹಾಡುಗಳು ಇಷ್ಟವಾಗುತ್ತವೆ.

Facebook Auto Publish Powered By : XYZScripts.com