ಸದ್ದಿಲ್ಲದೆ ಸಮಾಜಸೇವೆ ಮಾಡುತ್ತಿರುವ ಕಿಚ್ಚ ಸುದೀಪ್

ಬಾಲಿವುಡ್-ಕಾಲಿವುಡ್ – ಟಾಲಿವುಡ್ ನಲ್ಲಿ ಖ್ಯಾತಿ ಪಡೆದಿರುವ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ದೀಪಾವಳಿ ಹಬ್ಬವನ್ನು ಡಿಫರೆಂಟಾಗಿ ಆಚರಿಸುತ್ತಾರೆ. ಕಷ್ಟ ಎಂದು ಬರುವವರಿಗೆ ದಾರಿದೀಪವಾಗುವ ಈ ನಟ ಈ ಬಾರಿ ದೀಪಾವಳಿ ಹಬ್ಬದ ಅಂಗವಾಗಿ 28 ಮಕ್ಕಳನ್ನು ದತ್ತುಪಡೆದುಕೊಂಡಿದ್ದು, ಅವರ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೊತ್ತುಕೊಂಡಿರುವುದು ವಿಶೇಷ.
ಬಲಗೈಯಲ್ಲಿ ಮಾಡಿದ್ದು, ಎಡಗೈಗೆ ಗೊತ್ತಾಗಬಾರದು ಎಂಬಂತೆ ಸೈಲೆಂಟ್ ಆಗಿಯೇ ಸಾಮಾಜಿಕ ಕಾರ್ಯದಲ್ಲಿ ತೊಡಗುವ ಸುದೀಪ್ ಅವರು, ತಮ್ಮ ಅಭಿಮಾನಿಗಳಿಗೆ ಕಷ್ಟ ಬಂದರೆ ತಾವು ಖುದ್ದಾಗಿ ಸಹಾಯ ಮಾಡುತ್ತಾರೆ. ಕಷ್ಟದಲ್ಲಿರುವನರನ್ನು ಕಂಡರೆ ಮರುಗುವ ಹೃದಯವಂತ ಅನಾಥ ಮಕ್ಕಳಿಗೆ ಬೆಳಕಾಗಿದ್ದಾರೆ.
ದತ್ತು ಪಡೆದಿರುವ 28 ಮಕ್ಕಳ ಶಾಲೆಗಳ ಕುರಿತಂತೆ ತಾನು ಜವಾಬ್ದಾರಿ ಹೊತ್ತುಕೊಂಡಿದ್ದು, ಇದು ಮುಂದುವರೆಯುತ್ತದೆ ಎಂದು ಟ್ವೀಟ್ ಮಾಡಿದ್ದಾರೆ ಸುದೀಪ್. ಇಂತಹ ಕಾರ್ಯಗಳು ಮುಂದುವರೆಯುತ್ತಲೇ ಇರುತ್ತದೆ, ಹ್ಯಾಪಿ ದೀಪಾವಳಿ ಟು ಆಲ್ ಎಂದು ಟ್ವೀಟ್ ಮಾಡಿದ್ದಾರೆ. ಏನೇ ಆಗಲಿ ಕಿರುತೆರೆ-ಹಿರಿತೆರೆಯಲ್ಲಿ ಹಿರೋ ಆಗಿ ಮಿಂಚುತ್ತಿರುವ ಕಿಚ್ಚ ಸುದೀಪ್ ತಮ್ಮ ಹೃದಯವಂತಿಕೆಯಿಂದಾಗಿ ಇತರರಿಗೆ ಮಾದರಿಯಾಗುತ್ತಿದ್ದಾರೆ..
Source: Balkani News

Leave a Reply

Your email address will not be published.

Facebook Auto Publish Powered By : XYZScripts.com