ಸಖತ್ ಕಿಕ್ ಏರಿಸ್ತಿದೆ ದೊಡ್ಮನೆ ಹುಡುಗನ ಸೆಕೆಂಡ್ ಟ್ರೇಲರ್

ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿರೋ ಸಿನಿಮಾ ದೊಡ್ಮನೆ ಹುಡುಗ. ಪವರ್‌ಸ್ಟಾರ್ ಪುನಿತ್‌ರಾಜ್‌ಕುಮಾರ್‌ರ 25 ನೇ ಸಿನಿಮಾ ಇದಾಗಿದ್ದು, ಸಾಕಷ್ಟು ಅದ್ಧೂರಿಯಾಗಿ ದೊಡ್ಮನೆ ಹುಡುಗನನ್ನ ಬರಮಾಡಿಕೊಳ್ಳಲು, ಅಪ್ಪು ಫ್ಯಾನ್ಸ್ ಭರ್ಜರಿ ಸಿದ್ಧತೆಯಲ್ಲಿದ್ದಾರೆ,, ಈ ನಡುವೆ ಇಂದು ಚಿತ್ರದ ಮತ್ತೊಂದು ಟ್ರೇಲರ್ ರಿಲೀಸ್ ಆಗಿದ್ದು ಸಖತ್ ಕಿಕ್ ಏರಿಸ್ತಿದೆ.
ಪವರ್‌ಸ್ಟಾರ್‌ನ ಪವರ್‌ಫುಲ್ ಆಕ್ಷನ್ ಹಾಗು ಪುನಿತ್ ಮತ್ತು ರಾಧಿಕಾ ಬಿಂದಾಸ್ ಸ್ಟೆಪ್ಸ್ ಈ ಹೊಸ ಟ್ರೇಲರ್‌ನ ವಿಶೇಷತೆಗಳು. ಸಿನಿಮಾದಲ್ಲಿ ಪವರ್ ಪ್ಯಾಕ್ಟ್ ಆಗಿರೋ 9 ಆಕ್ಷನ್ ಸೀನ್ಸ್‌ಗಳಿವೆ ಅಂತಾ ಚಿತ್ರತಂಡ ಹೇಳಿಕೊಂಡಿದ್ದು. ಅದಕ್ಕೆ ತಕ್ಕಂತಿದೆ ಈ ಹೊಸ ದೃಶ್ಯಗಳು.
ಅಂದಹಾಗೆ ದುನಿಯಾ ಸೂರಿ ಹಾಗು ಅಪ್ಪು ಕಾಂಬಿನೇಷನ್‌ನಲ್ಲಿ ಬರ್ತಿರೋ ಹ್ರಾಟ್ರಿಕ್ ಸಿನಿಮಾ ಇದಾಗಿದ್ದು, ಪುನೀತ್ ತಂದೆಯಾಗಿ ರೆಬೆಲ್‌ಸ್ಟಾರ್ ಅಂಬರೀಷ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಮತ್ತೊಂದು ವಿಶೇಷತೆ ಅಂದ್ರೆ ಸುಮಲತಾ ಅಂಬರೀಷ್ ಹಾಗು ಭಾರತಿ ವಿಷ್ಣುವರ್ಧನ್‌ರಂತ ಘಟಾನುಘಟಿ ಕಲಾವಿದರ ಸಂಗಮ ಈ ಚಿತ್ರದಲ್ಲಾಗಿದೆ.
ಅಂದಹಾಗೆ ಇದೇ ತಿಂಗಳ 30 ರಂದು ವರ್ಲ್ಡ್‌ವೈಡ್ ಸಿನಿಮಾ ರಿಲೀಸ್ ಆಗ್ತಿದ್ದು, ಈಗಾಗ್ಲೇ ಬುಕ್ಕಿಂಗ್ ಕೂಡ ಶುರುವಾಗಿದೆ. ಒಟ್ನಲ್ಲಿ ಈ ತಿಂಗಳು ಅಂತೂ ಅಪ್ಪು ಅಭಿಮಾನಿಗಳ ಪಾಲಿಗೆ ಹಬ್ಬವೇ ಸರಿ.
Source: Balkani News

Leave a Reply

Your email address will not be published.

Facebook Auto Publish Powered By : XYZScripts.com