ಸಂತು ಸ್ಟ್ರೈಟ್ ಫಾರ್ವರ್ಡ್ ನಲ್ಲಿ ಕಿಚ್ಚ ಉಪ್ಪಿಯನ್ನ ಕೆಣಕಿದ್ರಾ ಯಶ್?

ವಿರೋಧಿಗಳು, ಎದುರಾಳಿಗಳು ಅಂದುಕೊಂಡೋರನ್ನ ತನ್ನ ಸಿನಿಮಾ ಡೈಲಾಗ್‍ಗಳ ಮೂಲಕ ಕೆನಕಿ ಕುರು ಎಬ್ಬಿಸ್ಕೋಳೋದ್ರಲ್ಲಿ ಈ ರಾಕಿಂಗ್ ಸ್ಟಾರ್ ಯಶ್ ಮಾಸ್ಟರ್ ಪೀಸೇ ಬಿಡಿ. ಈ ಹಿಂದೆ ರಾಮಾಚಾರಿ, ಮಾಸ್ಟರ್ ಪೀಸ್ ಸಿನಿಮಾಗಳಲ್ಲೂ ಯಶ್ ಇಂಥಾದ್ದೇ ಮಾರ್ಗ ಕಂಡ್ಕೊಂಡು ತಿವಿಸ್ಕಂಡಿದ್ರು. ಇದೀಗ ’ಸಂತು ಸ್ಟೈಟ್ ಫಾರ್ವರ್ಡ್’ ಸಿನ್ಮಾದಲ್ಲೂ ಅದೇ ಚಾಳಿ ಮುಂದುವರೆಸಿದ್ದಾರೆ.

ಈ ಸಿನಿಮಾ ಟೀಸರಲ್ಲಿ ’ಮುಕುಂದ ಮುರಾರಿ’ ಅವತಾರ ಎತ್ತಿರೋ ಸುದೀಪ್ ಹಾಗೂ ಉಪೇಂದ್ರರನ್ನ ಕೆಣ್ಕೋವಂಥಾ ಡೈಲಾಗ್ಸ್ ಅವ್ರ ಅಭಿಮಾನಿಗಳಿಗೂ ಉರಿ ತರ್ಸಿದೆ. ಯಶ್ ಸಿನಿಮಾ ಮುಕುಂದ ಮುರಾರಿ ಮುಂದೆ ಧೂಳಿಪಟವಾಗುತ್ತೆಂಬ ವಾತಾವರಣ ಇರೋವಾಗ್ಲೇ ಸುದೀಪ್ ಹಾಗೂ ಉಪೇಂದ್ರ ಅಭಿಮಾನಿಗಳು ಯಶ್ ವಿರುದ್ಧ ಕೆಂಡ ಕಾರ್ತಿದ್ದಾರೆ.

ಎಷ್ಟೇ ಆದ್ರೂ ಯಶ್ ಸಿನಿಮಾ ಕಿಚ್ಚ ಮತ್ತು ಉಪೇಂದ್ರ ಸಿನಿಮಾ ಮುಂದೆ ಬಚಾವಾಗೋದ್ ಕಷ್ಟಾನೇ. ಹಂಗಿರೋವಾಗ ಯಶ್ ಸಮ್ ಸುಮ್ನೆ ಯಾಕಿಂಥಾ ಅಧ್ವಾನ ಮಾಡ್ಕೋತಾರೋ ಅಂತ ಅವರ ಅಭಿಮಾನಿಗಳೇ ಬೇಜಾರಾಗಿದಾರಂತೆ!
Source: Balkani News

Leave a Reply

Your email address will not be published.

Facebook Auto Publish Powered By : XYZScripts.com