ಶ್ರುತಿ ಪ್ರಕಾಶ್ ಚಿತ್ರದಲ್ಲಿ ನಟಿಸುತ್ತಾರಾ? ಇಲ್ಲಿದೆ ಉತ್ತರ

‘ಬಿಗ್ ಬಾಸ್’ ಸೀಸನ್ 5 ರಲ್ಲಿ ತಮ್ಮ ‘ಒಂದು ನಿಮಿಷ’ ಹೇಳಿಕೆಯಿಂದ ವೀಕ್ಷಕರನ್ನು ಸೆಳೆದಿದ್ದ ಶ್ರುತಿ ಪ್ರಕಾಶ್ ಸ್ಯಾಂಡಲ್ ವುಡ್ ಚಿತ್ರಗಳಲ್ಲಿ ನಟಿಸುತ್ತಾರೆಯೇ ಇಲ್ಲವೇ ಎನ್ನುವುದು ಕುತೂಹಲ ಮೂಡಿಸಿತ್ತು.

ಈ ಕುತೂಹಲಕ್ಕೆ ತೆರೆ ಬಿದ್ದಿದೆ. ಅವರು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲು ಯೋಜಿಸಿದ್ದಾರೆ. ಕರ್ನಾಟಕದವರಾದರೂ ತಂದೆಯ ಉದ್ಯೋಗದ ಕಾರಣದಿಂದ ರಾಜ್ಯದಿಂದ ಹೊರಗೆ ಬೆಳೆದಿರುವ ಶ್ರುತಿ ಮುಂಬೈನಲ್ಲಿ ವೃತ್ತಿ ಜೀವನದಲ್ಲಿ ನಿರತರಾಗಿದ್ದಾರೆ.

‘ಬಿಗ್ ಬಾಸ್’ನಲ್ಲಿ ವೀಕ್ಷಕರ ಮನಗೆದ್ದು, ಫಿನಾಲೆವರೆಗೂ ಬಂದಿದ್ದರು. ‘ಬಿಗ್ ಬಾಸ್’ ಮನೆಯಿಂದ ಹೊರ ಬಂದ ಅವರಿಗೆ ಸಿನಿಮಾಗಳಲ್ಲಿ ನಟಿಸುವಂತೆ ಅವಕಾಶಗಳು ಬರ್ತಿವೆ. ಈ ಬಗ್ಗೆ ಮಾಹಿತಿ ನೀಡಿರುವ ಶ್ರುತಿ, ನನ್ನ ವೃತ್ತಿ ಜೀವನವನ್ನು ಇಲ್ಲಿ ಗುರುತಿಸಿಕೊಳ್ಳಲು ಬಯಸಿದ್ದೇನೆ. ಉತ್ತಮ ಚಿತ್ರಕತೆ, ಒಳ್ಳೆಯ ಪಾತ್ರವಿರುವ ಚಿತ್ರದಲ್ಲಿ ಭಾಗಿಯಾಗಲಿದ್ದೇನೆ. ಶೀಘ್ರವೇ ಸಹಿ ಹಾಕಲಿದ್ದೇನೆ ಎಂದು ಹೇಳಿದ್ದಾರೆ.

Facebook Auto Publish Powered By : XYZScripts.com