ಶ್ರೀಮುರಳಿ ಮದಗಜಕ್ಕೆ ಸೆಡ್ಡು ಹೊಡಿಯಲಿದೆಯೇ ದರ್ಶನ್ ಮದಗಜ?…ಇಲ್ಲಿ ಓದಿ

ಇತ್ತೀಚೆಗೆ ಚಂದನವನದಲ್ಲಿ ‘ಮದಗಜ’ ಯಾರಾಗಲಿದ್ದಾರೆ ಎಂಬುದರ ಬಗ್ಗೆ ಭಾರಿ ಚರ್ಚೆಯಾಗಿತ್ತು, ಒಂದು ಕಡೆ ಶ್ರೀಮರುಳಿ, ಮತ್ತೊಂದು ಕಡೆ ಧ್ರುವ ಸರ್ಜಾ ಈ ಇಬ್ಬರಲ್ಲಿ ಒಬ್ಬರು ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು.

ಆದರೆ ಮೂಲಗಳ ಪ್ರಕಾರ ದರ್ಶನ್ ಚಿತ್ರಕ್ಕೂ ಕೂಡ ಮದಗಜ ಎಂಬ ಟೈಟಲ್ ಫಿಕ್ಸ್ ಆಗಿದೆ ಎಂದುಹೇಳಲಾಗುತ್ತಿದೆ. ಶ್ರೀ ಮುರುಳಿ ಅಭಿನಯಿಸಲಿರುವ ಚಿತ್ರಕ್ಕೆ ‘ಶ್ರೀ ಮುರುಳಿ ಮಗದಜ’ ಎಂದು ಬದಲಾಯಿಸಲಾಗಿದೆ. ‘ಯಾವುದೇ ಕಾರಣಕ್ಕೂ ಒಂದು ಚಿತ್ರದ ಹೆಸರಿನ ಹಿಂದೆ, ಮುಂದೆ ಯಾವುದೇ ಹೆಸರನ್ನು ಸೇರಿಸಿ ಇಡುವ ಹಾಗಿಲ್ಲ’ ಎಂದು ಚಿತ್ರಮಂಡಳಿಯಲ್ಲಿ ರಾಮಕೃಷ್ಣ ಎಂಬುವವರು ದೂರು ನೀಡಿದ್ದರು. ಆದರೆ ಈ ನಡುವೆ ಮತ್ತೊಂದು ಸುದ್ದಿ ಹೊರ ಬಂದಿದೆ.

ಈ ಹಿಂದೆ ‘ಮೆಜೆಸ್ಟಿಕ್’ ಚಿತ್ರ ನಿರ್ಮಿಸಿದ್ದ ಎಂ ಜಿ ರಾಮಮೂರ್ತಿ, ಇದೀಗ ದರ್ಶನ್ ರನ್ನು ಹಾಕಿಕೊಂಡು ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘ಮದಗಜ’ ಎಂದು ಹೆಸರನ್ನು ಇಡಲಾಗಿದೆ. ಅಪಘಾತದಿಂದ ಚೇತರಿಸಿಕೊಳ್ಳುತ್ತಿರುವ ದರ್ಶನ್ ಮುಂದಿನ ವರ್ಷ ಈ ಸಿನಿಮಾದಲ್ಲಿ ನಟಿಸಲಿದ್ದಾರೆ.

Facebook Auto Publish Powered By : XYZScripts.com